ಸಿಂಧನೂರು :ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ.
ಕರ್ನಾಟಕ ರೈತ ಸಂಘ (ಕೆ.ಆರ್.ಎಸ್.)ಸಮಿತಿಯಿಂದ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಲು ಸರ್ಕಾರಿ ಖರೀದಿ ಕೇಂದ್ರ ತೆರೆಯಲು ಮಾನ್ಯ ಮುಖ್ಯಮಂತ್ರಿಗೆ ಒತ್ತಾಯಿಸಲು, ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.ಶಾಸಕರ ಅನುಪಸ್ಥಿತಿಯಲ್ಲಿ ಚಂದ್ರುಭೂಪಾಲ್ ನಾಡಗೌಡರು ಸ್ವೀಕರಿಸಿದರು.
ಬೆಳೆ ಕಟಾವಿಗೆ 15 ದಿನ ಮುಂಚಿತವಾಗಿ ಖರೀದಿ ಕೇಂದ್ರ ತೆರೆದರೆ ರೈತರಿಗೆ ಕನಿಷ್ಠ ಸಹಾಯ ಮಾಡಿದಂತಾಗುತ್ತದೆ. ರೈತರು ಕೃಷಿ ಉತ್ಪನ್ನಗಳ ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ತೆರೆದರೆ ಇದರ ಲಾಭ ರೈತರಿಗೆ ದೊರೆಯುವುದಿಲ್ಲ. ಇದಲ್ಲದೇ ರೈತರು ತಾವು ಬೆಳೆದ ಬೆಳೆಯನ್ನು ತಿಂಗಳುಗಟ್ಟಲೆ ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಬೆಳೆ ಬೆಳೆಯಲು ರೈತರು ಸ್ಥಳೀಯ ಖಾಸಗಿ ಬಡ್ಡಿವ್ಯಾಪಾರಿಗಳ ಸಾಲ ಪಡೆದಿರುತ್ತಾರೆ. ಹಾಗಾಗಿ ಬೆಳೆ ಕಟಾವಾದ ತಕ್ಷಣ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಒತ್ತಾಯಿಸಿದರು. ಸರ್ಕಾರ ಪ್ರತಿ ಕ್ವಿಂಟಲ್ ಕೃಷಿ ಉತ್ಪನ್ನಗಳಿಗೆ ಐದುನೂರು ದಿಂದ ಸಾವಿರ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು,ಭತ್ತ, ಹತ್ತಿ, ತೊಗರಿ, ಸಜ್ಜೆ,ಕಡಲೆ ಇತರ ಕೃಷಿ ಉತ್ಪನ್ನಗಳನ್ನು ಖರೀದಿಸಲು ಗ್ರಾಮ ಪಂಚಾಯಿತಿ ಗೊಂದರಂತೆ ಸರ್ಕಾರಿ ಖರೀದಿ ಕೇಂದ್ರ ತೆರೆಯಬೇಕು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ 50 ಲಕ್ಷ ಮೆಟ್ರಿಕ್ ಟನ್ ಬತ್ತ ಖರೀದಿಸುವ ತೀರ್ಮಾನ ಕೈಗೊಳ್ಳಬೇಕು, ಪ್ರತಿಯೊಬ್ಬ ರೈತರಿಂದ 300 ಕ್ವಿ ಭತ್ತ,200 ಕ್ವಿ ಜೋಳ, 30 ಕ್ವಿ ತೊಗರಿ, 100 ಕ್ವಿ ಸಜ್ಜೆ, 25 ಕ್ವಿಕಡಲೆ,100ಕ್ವಿ ಮೆಕ್ಕೆಜೋಳ ಖರೀದಿಸಲು ತೀರ್ಮಾನ ಮಾಡಬೇಕು, ಕೃಷಿ ಉತ್ಪನ್ನಗಳನ್ನು ಖರೀದಿಸಿದ ಮರುದಿನವೇ ರೈತರಿಗೆ ಹಣ ಪಾವತಿಸಬೇಕು , ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲನೆ ಮಾಡುವ ಅಧಿಕಾರಿಗಳು ರೈತರಿಗೆ ವಂಚಿಸಿ ಖಾಸಗಿ ದಲ್ಲಾಳಿಗಳಿಗೆ ಅನುಕೂಲ ಮಾಡುತ್ತಾರೆ,ಹಾಗಾಗಿ ಸರ್ಕಾರಿ ಅಧಿಕಾರಿಗಳು ಮತ್ತು ರೈತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಬೇಕು. ಜಿಲ್ಲೆಯ ಕೆಲವು ಭಾಗದಲ್ಲಿ ಮಳೆಯ ಕೊರತೆಯಿಂದ ತೊಗರಿ ಇತರೆ ಬೆಳೆಗಳು ಮತ್ತು ಬಿರುಗಾಳಿಯಿಂದ ಭತ್ತದ ಬೆಳೆ ನೆಲಕ್ಕುರಳಿ ನಷ್ಟವಾಗಿವೆ. ಸರ್ಕಾರ ಈ ಕುರಿತು ಸರ್ವೆ ನಡೆಸಿ ಪರಿಹಾರ ಕೊಡಬೇಕು ಎಂದು ಸರಕಾರಕ್ಕೆ ಹಕ್ಕೊತ್ತಾಯಗಳ ಮೂಲಕ ಮಾನ್ಯ ಶಾಸಕರಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಬಿ. ಎನ್. ಯರದಿಹಾಳ ಜಿಲ್ಲಾ ಕಾರ್ಯದರ್ಶಿ, ರಮೇಶ ಪಾಟೀಲ ಬೆರ್ಗಿ ತಾಲೂಕು ಅಧ್ಯಕ್ಷರು, ಬಸವರಾಜ್ ಬೆಳಗುರ್ಕಿ, ಚಿಟ್ಟಿಬಾಬು ಉಪಾಧ್ಯಕ್ಷರು, ಕೆ ವೆಂಕಟೇಶ್, ಎಲ್ಲಪ್ಪ ಭಜಂತ್ರಿ, ಬಸ್ಸಪ್ಪ ಕಡಬೂರ, ಗೋಪಾಲರಾವ್, ಶರಣಪ್ಪ ಕೆ.ಹಂಚಿನಾಳ, ಗೌಸಖಾನ್, ಅಮೀನ್ ಸಾಬ್ ನದಾಫ್, ನಿಂಗಪ್ಪ ಚಿಕ್ಕಬೇರ್ಗಿ, ಕನಕಪ್ಪ ಪೂಜಾರಿ , ಮರಿಯಮ್ಮ ಬಸ್ಸಾಪುರು, ಹುಲಿಗೆಮ್ಮ, ಯಲ್ಲಮ್ಮ ಅಂಬಣ್ಣ,ಮಹದೇವ ಇನ್ನೂ ಅನೇಕ ರೈತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು….
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
