ಸಿಂಧನೂರು : ವೆಂಕಟರಾವ್ ನಾಡಗೌಡ ರಿಂದ ನೂತನ ವಸತಿ ನಿಲಯ ಉದ್ಘಾಟನೆ .
ಮೆಟ್ರಿಕ್ ನಂತರದ ಪಿಯುಸಿ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು, ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು, ಎಂಬ ಉದ್ದೇಶದಿಂದ ವಸತಿನಿಲಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರಕಾರ ಪ್ರೋತ್ಸಾಹಿಸುತ್ತಿದೆ. ವಸತಿ ನಿಲಯವು ಅತ್ಯಂತ ಸುಸಜ್ಜಿತವಾದ ಮೂಲಭೂತ ಸೌಕರ್ಯಗಳೊಂದಿಗೆ ಕೂಡಿದೆ. ಸುಮಾರು 3.49ಕೋಟಿ ವೆಚ್ಚದಲ್ಲಿ 1404-52 ಚದರ ಮೀಟರು ವಿಸ್ತೀರ್ಣ ಹೊಂದಿದೆ. ಕೊಳವೆ ಬಾವಿ, ಸಂಪ್ ಟ್ಯಾಂಕ್, (30000) ವಿದ್ಯುತ್ ಸಂಪರ್ಕ, ಸೌರ ನೀರಿನ ಇಟರ್, ವಿದ್ಯಾರ್ಥಿಗಳಿಗೆ ಬಟ್ಟೆ ಒಗೆಯಲು ಟ್ಯಾಬು ಗಳೊಂದಿಗೆ ಸಾಕಷ್ಟು ತೊಳೆಯುವ ವೇದಿಕೆಯನ್ನು ಒದಗಿಸಲಾಗಿದೆ ಇವೆಲ್ಲವುಗಳನ್ನು ವಿಧ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಅಮರೇಗೌಡ ವಿರುಪಾಪುರು, ತಾಲೂಕು ದಂಡಾದಿಕಾರಿಗಳಾದ ಮಂಜುನಾಥ ಭೋಗಾವತಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಪವನ್ ಕುಮಾರ, ಚಂದ್ರುಭೂಪಾಲ ನಾಡಗೌಡ, ತಾಲೂಕು ಸಮಾಜಕಲ್ಯಾಣ ಅಧಿಕಾರಿ ಮಹಾಲಿಂಗಪ್ಪ ಇಂಗಳದಾಳ, ಅಶೋಕ ನಂಜಲದಿನ್ನಿ, ಇಲಾಖೆಯ ಅಧಿಕಾರಿಗಳು, ದಲಿತಪರ ಸಂಘಟನೆಯ ಮುಖಂಡರು, ವಿಧ್ಯಾರ್ಥಿಗಳು ಇನ್ನೂ ಮುಂತಾದವರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
