ಸಿಂಧನೂರು : ಸರಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗಳ ಮನೆ ಬಾಗಿಲಿಗೆ ಮುಟ್ಟಬೇಕು : ಶಾಸಕ ನಾಡಗೌಡ.
ಸರಕಾರದ ಯೋಜನೆಗಳು ಕೇವಲ ಕರಪತ್ರದಲ್ಲಿ, ಭಾಷಣದಲ್ಲಿ ,ಮಾತ್ರ ಸೀಮಿತವಾಗದೆ ಕಟ್ಟಕಡೆಯ ಬಡವರ ಮನೆ ಬಾಗಿಲಿಗೆ ದೊರಕಿಸಲು ಅಧಿಕಾರಿಗಳು ಮುಂದಾಗಬೇಕು. ಅಧಿಕಾರಿಗಳ ಜೊತೆ ಸಮಾಜದ ಮತ್ತು ಸಂಘಟನೆಯ ಮುಖಂಡರುಗಳು ಕೂಡ ಎಸ್ಸಿಎಸ್ಟಿ ಅನುದಾನವನ್ನು ಬಳಸಿಕೊಳ್ಳಲು ಬಡಜನರಿಗೆ ಮನವರಿಕೆ ಮಾಡಿಕೊಡಬೇಕು. ಡಾ.ಬಿ.ಆರ್ ಅಂಬೇಡ್ಕರ್ ಅವರು ಶಿಕ್ಷಣ ಪಡೆದುಕೊಳ್ಳಿರಿ, ನಂತರ ಸಂಘಟಿತರಾಗಿ, ಹೋರಾಟ ಮಾಡಿ ಎಂದು ಹೇಳಿದ್ದಾರೆ. ಆದರೆ ಇಂದಿನ ಯುವಜನತೆ ಮೊದಲು ಹೋರಾಟಕ್ಕೆ ಮುಂದಾಗುತ್ತಿದ್ದಾರೆ. ಹಾಗಾಗಬಾರದು ಮೊದಲು ಶಿಕ್ಷಣ ಪಡೆದುಕೊಳ್ಳಲು ಶಿಕ್ಷಣದಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಎಸ್ಸಿಎಸ್ಟಿ ಸಮುದಾಯದಲ್ಲಿ ಬರುವ ಲಂಬಾಣಿ ಸಮುದಾಯದವರು ಶಿಕ್ಷಣದಲ್ಲಿ ಸರಕಾರದ ಸವಲತ್ತು ಪಡೆಯುವಲ್ಲಿಯೂ ಮುಂದಿದ್ದಾರೆ.ದೊಡ್ಡದೊಡ್ಡ ಐಎಎಸ್ ಐಪಿಎಸ್ ಅಧಿಕಾರಿಗಳು ಕೂಡಾ ಆಗಿದ್ದಾರೆ. ಆದ್ದರಿಂದ ಎಲ್ಲಾ ಸಮುದಾಯದವರು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಎಲ್ಲರಂತಾಗಬೇಕು ಎಂದು ಕಾರ್ಯಕ್ರಮದ ಉದ್ಘಾಟಿಸಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು.
ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ರಾಯಚೂರು, ಸಮಾಜ ಕಲ್ಯಾಣ ಇಲಾಖೆ, ತಾಲೂಕಾಡಳಿತ, ಹಾಗೂ ಸಹಾಯಕ ನಿರ್ದೇಶಕರು ಮತ್ತು ಸಿಂಚನ ಸಾಂಸ್ಕೃತಿಕ ಕಲಾಸಂಘ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪ್ರತಿಬಂಧ ಕಾಯ್ದೆ 1989ರ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ 2013 ಮತ್ತು ನಿಯಮಗಳ 2017ರ ಕುರಿತು ಹಾಗೂ ಅಸ್ಪೃಶ್ಯತೆ ನಿರ್ಮೂಲನೆಗಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ವಿಚಾರಗೋಷ್ಠಿ ಮತ್ತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ವೆಂಕಟರಾವ್ ನಾಡಗೌಡ ವಹಿಸಿದ್ದರು. ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶರಣು ಯಾದಗಿರಿ ರವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿವಿಧ ಇಲಾಖೆಯ ಎಸ್ಸಿಪಿ ಟಿಎಸ್ಪಿ ಯೋಜನೆಗಳ ಮತ್ತು ಅಟ್ರಾಸಿಟಿ ಕಾಯ್ದೆ ಬಗ್ಗೆ, ಕಾರ್ಮಿಕ ಇಲಾಖೆ ಮೀನುಗಾರಿಕೆ ಇನ್ನು ಮುಂತಾದ ಇಲಾಖೆಗಳ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮಾನ್ಯ ತಹಸೀಲ್ದಾರರಾದ ಮಂಜುನಾಥ್ ಭೋಗವತಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಪವನಕುಮಾರ, ಸಮಾಜ ಕಲ್ಯಾಣಾಧಿಕಾರಿಗಳಾದ ಮಹಾಲಿಂಗಪ್ಪ ಇಂಗಳದಾಳ್, ಪೊಲೀಸ್ ಅಧಿಕಾರಿ ಎಎಸ್ಸೈ ವೀರೇಶ, ಶೇಖರಪ್ಪ ಗೀಣಿವಾರ, ಹನುಮಂತಪ್ಪ ಗೋಮರ್ಸಿ, ಬೀಮೇಶ್ ಕವಿತಾಳ, ನೀರುಪಾದಿ ಸಾಸಲಮರಿ, ಶೇಖರಪ್ಪ ದುಮತಿ ವಕೀಲರು, ರಾಮಣ್ಣ ಗೋನ್ವಾರ, ದಲಿತ ಪರ ಸಂಘಟನೆಯ ಮುಖಂಡರು,ವಕೀಲರು ,ಕನ್ನಡಪರ ಸಂಘಟನೆ ಮುಖಂಡರು, ಶಾಲಾ ವಿದ್ಯಾರ್ಥಿಗಳು, ಬುದ್ಧಿಜೀವಿಗಳು, ಭಾಗವಹಿಸಿದ್ದರು….

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
