ವಾಲ್ಮೀಕಿ ಸಮುದಾಯ ಭವನದಲ್ಲಿ ಭಜನ ಸಾಮಗ್ರಿಗಳು ವಿತರಣೆ…!!!

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಕಲಬುರ್ಗಿ ವಿಭಾಗ , ಕಲಬುರ್ಗಿ ವತಿಯಿಂದ ಯುವಜನ ಮತ್ತು ಸಂಸ್ಕೃತಿ ವಿಭಾಗದ ಅಡಿಯಲ್ಲಿ ಭಜನಾ ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ,ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ್ ಸೇಡಂ ಜೀ ಯವರ ಆಶಯದೊಂದಿಗೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಬಾಬುಲಾಲ್ ಜೈನ್ ಜೀ ಯವರ ಮಾರ್ಗದರ್ಶನದಲ್ಲಿ ಇಂದು ಕಾರ್ಯ ಕ್ರಮವನ್ನು ಶ್ರೀ ಕುಮಾರ ಜೀ ಸಂಸ್ಕೃತ ಭಾರತಿ ಜಿಲ್ಲಾ ಸಂಚಾಲಕರು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಶ್ರೀ ಶಿವಕುಮಾರ್ ಮತ್ತು ಶ್ರೀ ನಾಗರಾಜ್ ಮಠಪತಿ ಯವರು ವೇದಿಕೆಯನ್ನು ಅಲಂಕರಿಸಿದ್ದರು, ಈ ಕಾರ್ಯಕ್ರಮವನ್ನು ಶ್ರೀ ಕುಮಾರ ಜೀಯವರು ಉದ್ಘಾಟಿಸಿ ಮಾತನಾಡಿ ಹಿಂದು ಸಮಾಜದ ಸುಧಾರಣೆಯ ಪುನರುಜ್ಜೀವನ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮಗಳು ಮಹತ್ವದ ಪಾತ್ರವನ್ನು ವಹಿಸಿದವು ಎಂದು ಭಜನಾ ಪರಂಪರೆಯ ಇತಿಹಾಸವನ್ನು ಸ್ಮರಿಸಿದರು, ವಾಹನಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಶಿವಕುಮಾರ್ ರವರು ಪ್ರಾಸ್ತಾವಿಕ ನುಡಿದರು, ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಸಂಯೋಜಕರು ಭಜನಾ ಮಂಡಳಿಯವರು ಮತ್ತು ಜಿಲ್ಲಾ ಸಂಚಾಲಕರಾದ ಶ್ರೀ ಕುಮಾರಿ ಸಮುದ್ಯತಾ, ಹಗರಿಬೊಮ್ಮನಹಳ್ಳಿ ತಾಲೂಕು ಪ್ರಮುಖರಾದ ಶ್ರೀ ನಟರಾಜ ಬೆಳ್ಳಕ್ಕಿ, ತಾಲೂಕು ಸಂಯೋಜಕರಾದ ಶ್ರೀ ಸುರೇಶ ಕಲಾಲ್ ,ಶ್ರೀ ಶಶಿಕುಮಾರ್ ಮೊರನಾಳ್,ಶ್ರೀ ನಿತಿನ್ ಕುಮಾರ , ಶ್ರೀ ಮಹಾದೇವ ಎಚ್ ಶ್ರೀ ಕುಮಾರಿ ನಿವೇದಿತಾ ಭಾಗವಹಿಸಿದರು,..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend