ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬೆಳೆ ಕ್ಷೇತ್ರೊತ್ಸವ”.

“ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬೆಳೆ ಕ್ಷೇತ್ರೊತ್ಸವ”.

ಉಪನ್ಯಾಸ ಡಾ!! ಸಿ ಎಮ್ ಖಾಲಿ ಬಾವಿ ಬೇಸಾಯ ತಜ್ಞರು. ಡಾ!!ಮಂಜುನಾಥ (ಮಣ್ಣು ವಿಜ್ಞಾನಿಗಳು). ಕೃಷಿ ಅಧಿಕಾರಿಗಳು ಕೊಟ್ರೇಶ್ ಗೋರಂಟಿ ಇಟ್ಟಿಗಿ. ಸೌಜನ್ಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಕೃಷಿ ಇಲಾಖೆ ಹೂವಿನ ಹಡಗಲಿ.ಹಾಗೂ ಉಪಸ್ಥಿತರನ್ನು ಒಳಗೊಂಡ ‘ಬೆಳೆ ಕ್ಷೇತ್ರೋತ್ಸವ’ಕಾರ್ಯಕ್ರಮ ಬಳಿಗಾರ ಓಮಣ್ಣ ಇವರ ಹೊಲದಲ್ಲಿ ನಡೆಯಿತು. ಕಾರ್ಯಕ್ರಮ ದಲ್ಲಿ ಉಪನ್ಯಾಸ ಮಾಡಿದ ಡಾ!!ಖಾಲಿ ಬಾವಿ ಬೇಸಾಯ ತಜ್ಞರು ಇವರು ರೈತರಿಗೆ ಮುಂಗಾರು &ಹಿಂಗಾರು ಬೆಳೆಗಳ ಮುನ್ನ ಭೂಮಿ ಸಿದ್ಧತೆ,ಮಣ್ಣನ್ನು ಹದ ಮಾಡುವ ಬಗೆ & ಭೂಮಿಯನ್ನು ಸಮತಟ್ಟಾಗಿಸುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಮತ್ತು ಮಣ್ಣು ವಿಜ್ಞಾನಿಗಳಾದ ಡಾ!! ಮಂಜುನಾಥ & ಅವರ ಸಹೋದ್ಯೋಗಿಗಳು ‘ಮಣ್ಣು ರೈತನ ಕಣ್ಣು’ ಎಂದೇ ಹೇಳುತ್ತಾರೆ. ಮನುಕುಲಕ್ಕೆ ಸೃಷ್ಟಿಯ ಕೊಡುಗೆಗಳಲ್ಲಿ ಮಣ್ಣು ಅತ್ಯಂತ ಅಮೂಲ್ಯ. ಇತರ ಜೀವಿಗಳಂತೆ ಮಣ್ಣು ಕೂಡ ಜೀವ ಹೊಂದಿರುವ ವಸ್ತುವಾಗಿದ್ದು, ಇದರ ಅರಿವಿಲ್ಲದೆ ಹೆಚ್ಚು ಇಳುವರಿ ಪಡೆಯುವ ಧಾವಂತದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಸೇರಿಸಿ ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಕಾಲ ಕಾಲಕ್ಕೆ ಹೇಗೆ ಆರೋಗ್ಯ ತಪಾಸಣೆ ಮಾಡಿಸುತ್ತಾನೊ ಹಾಗೆಯೇ ಕಾಲ ಕಾಲಕ್ಕೆ ಮಣ್ಣಿನ ಆರೋಗ್ಯ ತಿಳಿಯಲು ಮಣ್ಣು ಪರೀಕ್ಷೆ ಅತ್ಯಗತ್ಯವಾಗಿರುತ್ತದೆ. ಎಂದು ಹೇಳಿದರು.

ಯಾವುದೇ ಬೆಳೆಯನ್ನು ಬೆಳೆದು ಅಧಿಕ ಇಳುವರಿ ಪಡೆಯಲು ಬೆಳೆಯುವ ಮಣ್ಣಿನ ಗುಣಧರ್ಮವನ್ನು ಅರಿಯುವುದು ತುಂಬಾ ಮುಖ್ಯ. ಮಣ್ಣಿನ ರಾಸಾಯನಿಕ, ಭೌತಿಕ ಹಾಗೂ ಜೈವಿಕ ಗುಣಲಕ್ಷಣಗಳು ಯಾವುದೇ ಬೆಳೆಯ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ನಮ್ಮ ಮಣ್ಣನ್ನು ಅರಿತು ಅದಕ್ಕೆ ಹೊಂದುವಂತಹ ಬೆಳೆಗಳನ್ನು ಹಾಗೂ ತಳಿಗಳನ್ನು ಬೆಳೆದಲ್ಲಿ ಅತಿ ಹೆಚ್ಚಿನ ಉತ್ಪಾದನೆಯನ್ನು ಪಡೆಯಬಹುದು. ಕರ್ನಾಟಕದಲ್ಲಿನ ಬಹು ಪಾಲು ಮಣ್ಣುಗಳಲ್ಲಿ ಮುಖ್ಯ ಹಾಗೂ ಲಘುಪೋಷಕಾಂಶಗಳ ಕೊರತೆ ಕಂಡುಬಂದಿದ್ದು ಈ ಪೋಷಕಾಂಶಗಳು ಬೆಳೆಯ ಬೆಳವಣಿಗೆಯ ಮೇಲೆ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಮಣ್ಣು ಪರೀಕ್ಷೆ ಮಾಡಿಸುವುದರ ಮೂಲಕ ಮಣ್ಣಿನಲ್ಲಿರುವ ಕೊರತೆಗಳನ್ನು ಅರಿತು ಅವುಗಳನ್ನು ಸರಿಪಡಿಸಿ ಬೆಳೆಗೆ ಬೇಕಾಗುವಂತಹ ಪೂರಕ ವಾತಾವರಣ ನಿರ್ಮಿಸಬಹುದು. ಈಗಾಗಲೇ ಮುಂಗಾರಿನ ಹಂಗಾಮು ಮುಕ್ತಾಯವಾಗಿದ್ದು ಮಣ್ಣು ಪರೀಕ್ಷಿಸಲು ಮಾದರಿ ತೆಗೆಯಲು ಸೂಕ್ತ ಕಾಲವೆನಿಸಿದೆ ಕಾರಣ ತಾವುಗಳು ಕೃಷಿ ಕೇಂದ್ರಕ್ಕೆ ತಮ್ಮ ಹೊಲದ ಮಣ್ಣನ್ನು ತಂದು ಪರೀಕ್ಷೆ ಮಾಡಿಸಿಕೊಂಡೊಗಲು ಸಲಹೆ ನೀಡಿದರು. ಈ ಸಂಧರ್ಭದಲ್ಲಿ ನವಣೆ ಬೆಳೆಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ನವಣೆ ಒಂದು ಅಲ್ಪಾವಧಿ ಬೆಳೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಅಳದ, ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಮತ್ತು ಗುಡ್ಡ-ಗಾಡು ಪ್ರದೇಶಗಳಲ್ಲಿ ಸಹ, ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಧಾನ್ಯ. ‘ಉತ್ತಮ ಪೌಷ್ಟಿಕ ಮೌಲ್ಯ’ವನ್ನು ಹೊಂದಿದ್ದರೂ ಈ ಧಾನ್ಯದ ಬಳಕೆ ಕಡಿಮೆ. ‘ಕಿರುಧಾನ್ಯ’ಗಳಿಗೆ ಉತ್ತಮ ಮಾರುಕಟ್ಟೆ ಮತ್ತು ‘ಬೆಂಬಲಬೆಲೆ’, ಇಲ್ಲದಿರುವುದು ಮತ್ತು ‘ಬಡವರ ಆಹಾರ,’ ಎಂಬ ಭಾವನೆ ಇರುವುದರಿಂದ ಕ್ರಮೇಣವಾಗಿ ನವಣೆಯಂತಹ ಕಿರುಧಾನ್ಯಗಳು ಅವಸಾನದ ಅಂಚನ್ನು ಮುಟ್ಟುತ್ತಿವೆ. ನವಣೆ ಕೀಟ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದೆ. ಕಡಿಮೆ ಫಲವತ್ತಾದ ಹೊಲಗಳಲ್ಲೂ ಸುಲಭವಾಗಿ ಬೆಳೆಯಬಹುದು ಎಂದು ನವಣೆ ಬೆಳೆ ಬೆಳೆದ ಬಳಿಗಾರ ಓಮದೇವ ಅವರ ತಾಯಿಯಾದ ಕಾಳಮ್ಮನವರಿಗೆ ಸನ್ಮಾನ ಮಾಡಿದರು.ಈ ಕಾರ್ಯಕ್ರಮದಲ್ಲಿ ಊರಿನ ರೈತರಾದ ಕ್ಯಾತನ ಕೊಟ್ರಪ್ಪ,ಬಳಿಗಾರ ದೇವೇಂದ್ರಪ್ಪ,G S ಗಂಗಾಧರ,ನಿವೃತ್ತ ಪೋಲಿಸ್ ಅಧಿಕಾರಿಗಳಾದ ಉಮೇಶ್,ಅಜ್ಜಯ್ಯನವರ ಚಿದಾನಂದಚಾರಿ,A ಗಣೇಶ್,ಬಳಿಗಾರ ಅಜ್ಜಪ್ಪ,ಬಳಿಗಾರ ಕೊಟ್ರಪ್ಪ,ಇನ್ನೂ 50ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಿದ್ದರು.

ವರದಿ -ಪ್ರಕಾಶ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend