ತಾಲ್ಲೂಕಿನ ಗ್ರಾಮಂತರ ಪ್ರದೇಶಗಳಲ್ಲಿ ಹಾಗೂ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.
ಕಸಬ, ಬಿಳಿಚೋಡು, ಸೂಕ್ಕೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮಳೆಯಿಂದಾಗಿ ಗುಂಡಿಗಳಾಗಿ ಮಾರ್ಪಡಾಗಿ ರಸ್ತೆಗಳ ಸ್ಥಿತಿ ಅಧೋಗತಿಗೆ ತಲುಪಿದ್ದು ವಾಹನ ಸಾವರಾರಿಗೆ ಗುಂಡಿಗಳದ್ದೆ ತಲೇನೋವು ಪರಿಣಿಮಿಸಿದೆ ಅಲ್ಲದೇ ಗುಂಡಿಗಳು ಅಫಘಾತಕ್ಕೆ ಬಾಯ್ತೆರೆಯುತ್ತಿವೆ.
ಗ್ರಾಮೀಣ ಭಾಗದ ಹಳ್ಳಿಗಳಿಗೆ ರಸ್ತೆ ಸಂಪರ್ಕಿಸುವ ರಸ್ತೆಗಲ ದುರಸ್ತಿಯಾಗದೆ ಮಳೆ ಬಂದರೆ ಕೆಸರು ಬಿಸಿಲಾದರೆ ದೂಳಿನ ಮಜ್ಜನ ವಾಹನ ಸವಾರರಿಗೆ ತಪ್ಪಿದ್ದಲ್ಲ, ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಅಧ್ವಾನವಾಗಿ ಸಂಚಾರ ಮಾಡಲು ತೊಂದರೆಯಾಗಯತ್ತಿದೆ.

ತಾಲ್ಲೂಕಿನ ಭರಮಸಮುದ್ರದಿಂದ ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ಕಲ್ಪಿಸುವ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು ಬಿದಿವೆ, ಈ ಭಾಗದ ಬೈಕ್ ಸವಾರರಿಗೆ ಮೃತ್ಯ ಗುಂಡಿಗಳಾಗಿ ಪರಿಣಿಮಿಸಿವೆ, ಅನೀರೀಕ್ಷತವಾಗಿ ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನಗಳು ಸ್ಕೀಡ್ ಆಗಿ ಅಪಘಾತ ಆಗುವ ಸಾಧ್ಯೆತೆ ದಟ್ಟವಾಗಿರುವುದಲ್ಲದೆ ತಗ್ಗು ಗುಂಡಿಗಳು ರಾತ್ರಿ ವೇಳೆ ಕಾಣದೆ ಕಾರುಗಳು ರಭಸವಾಗಿ ಬಂದರೆ ನಿಯಂತ್ರಣ ತಪ್ಪಿ ಅಪಘಾತವಾಗುವ ಲಕ್ಷಣವು ಹೆಚ್ಚಿದೆ.
ಕಳಪೆ ಢಾಂಬರೀಕರಣದಿಂದ ಸಣ್ಣ ಮಳೆಗೆ ರಸ್ತೆಗಳು ಗುಂಡಿ ಬಿದ್ದು ಹಾಳುಗುತ್ತಿವೆ ಅಲ್ಲದೇ ಕೆಲವು ಕಡೆ ರಸ್ತೆಗಲ್ಲಿ ವಿಂಡ್ ಪ್ಯಾನ ಹಾಗೂ ಸೋಲಾರ್ ಪ್ಲಾಟ್‍ಗಳ ಕೆಲಸ ನಡೆಯಿತ್ತಿದ್ದು, ಬಾರಿ ವಾಹನಗಳು ಲಿಮೀಟ್ ಮೀರಿ ಸರಕುಗಳನ್ನು ಸಾಗಣೆ ಮಾಡುತ್ತಿರುವುದು ರಸ್ತೆಯ ಆಳಾಗುವುದಕ್ಕೆ ಪ್ರಮುಖ ಕಾರಣವಾಗಿದೆ.
ಸುಗಮ ಸಂಚಾರಕ್ಕೆ ಅಡಚಣೆ;
ದಿನ ಪ್ರತಿ ಗ್ರಾಮೀಣ ರಸ್ತೆಗಳಿಂದ ಶಾಲಾ ವಾಹನಗಳು, ಅಂಬುಲೇನ್ಸ್‍ಗಳು, ತ್ರಿಚಕ್ರ, ದ್ವಿಚಕ್ರ ವಾಹನಗಳು ವಿಪರಿತವಾಗಿ ಒಡಾಟ ಮಾಡುತ್ತವೆ ಆದರೆ ಇವುಗಳ ಸುಗಮ ಸಂಚಾರಕ್ಕೆ ಗುಂಡಿ ಬಿದ್ದ ರಸ್ತೆಗಳು ತೊಡಕುಂಟ್ಟು ಮಾಡುತ್ತಿದ್ದು, ರಸ್ತೆ ಸವಾರರಿಗೆ ಸಂಚರಿಸಲು ಸಾಧ್ಯವಾಗದೆ ರೀತಿಯಲ್ಲಿ ನಾನಾ ಕಷ್ಟಗಳನ್ನು ಎದರಿಸುವಂತಾಗಿದೆ.

ರಸ್ತೆ ಸವಾರರಾದ ನಾವು ಟ್ಯಾಕ್ಸಿ ಬೈಕ್ ಇನ್ನೀತರೆ ವಾಹನಗಳಿಗೆ ವಿಮೆಗಳನ್ನು ಕಟ್ಟಿ ಹೆಲ್ಮೇಟ್ ಧರಸಿ ಸಂಚಾರಿಸಬೇಕು ಎಂದು ಕಾನೂನುಗಳನ್ನು ಜಾರಿಗೋಳಿಸುವ ಸರ್ಕಾರಗಳು ಸಾರ್ವಜನಿಕರಿಗೆ ಉತ್ತಮ ರಸ್ತೆಗಳನ್ನು ನೀಡುವ ಹೊಣೆಯಿಂದ ಜಾಣ್ಮೆಯಿಂದ ನುಣಿಚಿಕೊಳ್ಳುತ್ತಿರುವುದು ದುರಾದೃಷ್ಟಕರ.
ಸಂತೋಷ ವಾಹನ ಸವಾರ ಭರಮಸಮುದ್ರ.
ಮಳೆಗಾಲವಾದ್ದರಿಂದ ಗ್ರಾಮೀಣ ರಸ್ತೆಗಳು ಕೆಲವೊಂದು ಕಡೆ ಆಳಾಗಿರುವು ಗಮನಕ್ಕೆ ಬಂದಿದೆ. ಇಂತಹ ಅತೀ ಶಿಘ್ರವಾಗಿಯೇ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು.
ರುದ್ರಪ್ಪ ಎಇಇ ಲೋಕಪಯೋಗಿ ಇಲಾಖೆ
ತಾಲ್ಲೂಕಿನ ಸಿದ್ದಮ್ಮನಹಳ್ಳಿಯ ಬಳಿ ರಸ್ತೆ ಕಿತ್ತು ಹೋಗಿರುವುದು.

ವರದಿ. ಸಂದೀಪ್, ಎಚ್, ಸಿ, ಎಂ, ಹೊಳೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
