ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗೌರಸಮುದ್ರ ಮತ್ತು ಚಿಕ್ಕನಹಳ್ಳಿ ಮಧ್ಯೆ ಅಂಡರ್ಪಾಸ್ ಹಾಗೂ ಬಸವೇಶ್ವರ ನಗರಕ್ಕೆ ಸರ್ವಿಸ್ ರಸ್ತೆ ಮಾಡಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಾನಾ ಹಳ್ಳಿಯ ಗ್ರಾಮಸ್ಥರು ಇಂದು ಗೌರಸಮುದ್ರ ಕ್ರಾಸ್ ಬಳಿಯಿಂದ 150ಎ ರಸ್ತೆ ಹೆದ್ದಾರಿಯಲ್ಲಿ ಪಾದಯಾತ್ರೆ ನಡೆಯುತ್ತಿದ್ದು ಗ್ರಾಮಸ್ಥರಿಂದ ರಾಂಪುರ ನಾಡ ಮೇಲಿದ್ದ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಸ್ತೆ ನಿರ್ಮಾಣ ಮಾಡುವಾಗ ಗೌರಸಮುದ್ರ ಮತ್ತು ಚಿಕ್ಕನಹಳ್ಳಿ ಮಧ್ಯೆ ಅಂಡರ್ಪಾಸ್ ನಿರ್ಮಾಣ ಮಾಡದ ಕಾರಣ ದಿನೇದಿನೇ ಅಪಘಾತಗಳು ಸಂಭವಿಸುತ್ತಿವೆ. ಕಳೆದ 15 ದಿನಗಳ ಹಿಂದಷ್ಟೇ ಗೌರಸಮುದ್ರ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ವಕೀಲರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಶನಿವಾರದಂದು ಬೈಕ್ ನಲ್ಲಿ ಬರುತ್ತಿದ್ದ ಚಿಕ್ಕೇನಹಳ್ಳಿ ಗ್ರಾಮದ ಯುವಕನಿಗೆ ಡಿಕ್ಕಿ ಹೊಡೆದಿದೆ. ಹೀಗೆ ಸಾಲು ಸಾಲು ಸಾವು-ನೋವುಗಳು ಸಂಭವಿಸುತ್ತಿದ್ದು ಹೆದ್ದಾರಿಯಲ್ಲಿ ಅಂಡರ್ ಪಾಸ್ ಹಾಗೂ ಸರ್ವಿಸ್ ರೋಡ್ ನಿರ್ಮಾಣ ಮಾಡದೇ ನಿರ್ಲಕ್ಷ್ಯ ವಹಿಸಿದ ಕಾರಣ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದೂ ಗೌರಸಮುದ್ರ ಮತ್ತು ಚಿಕ್ಕೇನಹಳ್ಳಿ ಬಸವೇಶ್ವರ ನಗರ ಹೇರೂರು ಗ್ರಾಮದ ಜನರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ…

ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
