ರಂಗಾಯಣ ಶ್ರೀಧರ ನಿರ್ದೇಶನದ ‘ಮೃತ್ಯೋರ್ಮ’ ಚಿತ್ರದ ಮಹೋರ್ತ ಮತ್ತು ಪೋಸ್ಟರ್ ಬಿಡುಗಡೆ!!
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಾರಣಗಿರಿ ಯ ಸಿದ್ದಿ ವಿನಾಯಕ ದೇವಾಲಯದದಲ್ಲಿ ರಂಗಾಯಣ ಶ್ರೀಧರ್ ನಿರ್ದೇಶನದ ನೂತನ ಚಿತ್ರಕ್ಕೆ ಚಾಲನೆ ನೀಡಲಾಯಿತು. ಶ್ರೀಧರ್ ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಕಿರುತೆರೆ,ಜೊತೆ ಹಲವಾರು ಕಿರುಚಿತ್ರದಲ್ಲಿ ನಟನೆ ಮತ್ತು ನಿರ್ದೇಶನ ಮಾಡಿದ್ದು ಅವರ ನಿರ್ದೇಶನದ ಚಿತ್ರಕ್ಕೆ ಪಟ್ಟಣವನ್ನು ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತಿ ಪ್ರಾಂಶುಪಾಲರು ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು. ಯುವಕರ ತಂಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವುದು ಒಂದು ದೊಡ್ಡ ಸಾಹಸ , ಇದು ಬರೀ ಹವ್ಯಾಸವಾಗಿರದೆ ದೊಡ್ಡ ಯಶಸ್ವಿ ಉದ್ಯಮವಾಗಿರಲಿ ಎಂದು ಹಾರೈಸಿದರು.
ಯುವ ನಿರ್ದೇಶಕ ರಂಗಾಯಣ ಶ್ರೀ ಧರ್ ಮಾತನಾಡಿ ‘ ಅನೇಕ ಯುವಕರು ಸೇರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರ ,ಪ್ರೀತಿ ನಿಗೂಢತೆ ಮತ್ತು ಅಪರಾಧ ” _ಕತೆಯನ್ನ ಒಳಗೊಂಡಿದೆ ನಮ್ಮೇಲ್ಲರ ಈ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ವೇದಿಕೆಯ ಮೇಲಿದ್ದ ಗಣ್ಯರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.ಸುರೇಂದ್ರ ಭಂಡಾರ್ಕರ್, ಕೆ.ಜಿ ನಾಗೇಶ್.ದೇವಸ್ಥಾನದ ಅರ್ಚಕ ವಿನಾಯಕ ಭಟ್.ಪ್ರಕಾಶ್ ಶೇಟ್ ,ವಾಸುದೇವ,ದತ್ತ, ಗೋವಿಂದ, ಸುಭಾಷ್ ಮುಂತಾದವರು ಉಪಸ್ಥಿತರಿದ್ದರು…

ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
