ಬ್ಯಾಂಕ್ ನಲ್ಲಿ ಉದ್ಯೋಗಿಗಳಿಗೆ ಕನ್ನಡ ಭಾಷೆ ಕಡ್ಡಾಯ ಮಾಡಿ…!!!

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಯೂನಿಯನ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಗ್ರಾಮಸ್ಥರೊಂದಿಗೆ ಅನುಚಿತ ವಾಗಿ ವರ್ತನೆ ಮಾಡಿದ ಘಟನೆ ನಡೆದಿದೆ, ಮ್ಯಾನೇಜರ್ ಬಿಹಾರ್ ರಾಜ್ಯದವನು ಆಗಿದ್ದು ಈತನಿಗೆ ಕನ್ನಡ ಮಾತನಾಡಲು ಬರಲ್ಲಾ, ಬ್ಯಾಂಕ್ ಗೆ ಬರುವ ಸಾರ್ವಜನಿಕರೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡುವದು ಈತನ ಭಾಷೆ ಇಲ್ಲಿಯ ಗ್ರಾಮೀಣ ಜನರಿಗೆ ಬರಲ್ಲಾ ಹೀಗಾಗಿ ಸಾರ್ವಜನಿಕರು ಬ್ಯಾಂಕ್ ಗೆ ಹೋಗಿ ತಮ್ಮ ಯಾವದೇ ವ್ಯವಹಾರ ಮಾಡಬೇಕಾದರೆ ಬಾರಿ ತೊಂದರೆ ಅನುಭವಿಸುವದು ಕಂಡು ಬಂದಿದೆ, ಇವತ್ತು ಹೆಸ್ಕಾಂ ಅಧಿಕಾರಿ ಒಬ್ಬರು ಬ್ಯಾಂಕ್ ಗೆ ಬಂದು ವಿದ್ಯುತ್ ಬಾಕಿ ಬಿಲ್ಲು ತುಂಬಲು ಹೇಳಿದ್ರೆ ಹೆಸ್ಕಾಂ ಸಿಬ್ಬಂದಿಗೆ ಹಲ್ಲೆ ಮಾಡಲು, ಮ್ಯಾನೇಜರ್ ಯತ್ನಿಸಿದ ಘಟನೆಯು ನಡೆದಿದೆ ಈತ ಹಲ್ಲೆ ಮಾಡುವಾಗ ವಿಡಿಯೋ ಮಾಡಲಿಕ್ಕೆ ಹೋದ ವರದಿಗಾರನ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಲು ಯತ್ನಿಸಿದ್ದು ಕಂಡು ಬಂದಿದೆ ನಂತರ ನಂದಗಾಂವ ಗ್ರಾಮದ ಸಾರ್ವಜನಿಕರೇಲ್ಲಾ ಸೇರಿ ಬ್ಯಾಂಕ್ ಮ್ಯಾನೇಜರ್ ನನ್ನು ತಕ್ಷಣ ವರ್ಗಾವಣೆ ಮಾಡಬೇಕು ಕನ್ನಡ ಮಾತನಾಡಲು ಬರುವ ಬೇರೆ ಮ್ಯಾನೇಜರ್ ನೇಮಕ ಮಾಡಬೇಕು ಎಂದು ಪ್ರತಿಭಟನೆ ಮಾಡಿದರು ತಕ್ಷಣ ಮೇಲಾಧಿಕಾರಿಗಳು ಕ್ರಮ ಕೈಗೋಳದ್ದಿದ್ದಲ್ಲಿ ಮತ್ತೆ ಗ್ರಾಮಸ್ಥರೆಲ್ಲಾ ಸೇರಿ ಬ್ಯಾಂಕ್ ಬಂದ ಮಾಡಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ…

ವರದಿ.ಮಹಾಲಿಂಗ ಗಗ್ಗರಿ, ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend