ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಪಾದಯಾತ್ರೆ ಮೂಲಕ ನೂರಾರು ಜನ ಸೇರಿಕೊಂಡು ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು…!!!

ಸಿಂಧನೂರು :ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಏಳುರಾಗಿಕ್ಯಾಂಪಿನ ಜನರನ್ನು ಚುನಾವಣಾ ಸಂಧರ್ಭದಲ್ಲಿ ಜೈಕಾರ ಹಾಕಲು, ಕರಪತ್ರ ಹಂಚಲು, ವೋಟ್ ಹಾಕಿಸಿಕೊಂಡು ಇವರ ಕಡೆ ಒಬ್ಬ ರಾಜಕಾರಣಿಯು, ಅಧಿಕಾರಿಯು ಇತ್ತ ಕಡೆ ಗಮನ ಕೊಡುತ್ತಿಲ್ಲ. ಹಲವು ಬಾರಿ ಮನವಿ ಪತ್ರ ಸಲ್ಲಿಸಿದರು ಕೂಡಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟಿಲ್ಲ. ಆದರಿಂದ ಬಹುಜನ ಸಮಾಜ ಪಾರ್ಟಿ ಬಡವರ, ದೀನದಲಿತರ, ಅಲ್ಪಸಂಖ್ಯಾತಪರ, ಕೂಲಿಕಾರರ ಪರವಾಗಿ, ನಿಂತಿದ್ದೇವೆ. ಒಂದು ವಾರದೊಳಗೆ ಬೇಡಿಕೆಗಳನ್ನು ಈಡೆರಿಸದಿದ್ದರೆ ನಗರಸಭೆ ಕಾರ್ಯಾಲಯಕ್ಕೆ ಬೀಗ ಜಡಿದು ಉಗ್ರ ಹೋರಾಟ ಮಾಡಲಾಗುವುದು ಎಂದು ತಾಲೂಕು ಅಧ್ಯಕ್ಷ ಹುಲುಗಪ್ಪ ಮಲ್ಕಾಪೂರು ಎಚ್ಚರಿಕೆ ನೀಡಿದರು.

ಇಂದು ಬಹುಜನ ಸಮಾಜ ಪಾರ್ಟಿ ವತಿಯಿಂದ ಏಳುರಾಗಿ ಕ್ಯಾಂಪ್ ನಿಂದ ನಗರಸಭೆ ವರೆಗೆ ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಪಾದಯಾತ್ರೆ ಮೂಲಕ ನೂರಾರು ಜನ ಸೇರಿಕೊಂಡು ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ಮಸ್ಕಿ ಮುಖ್ಯರಸ್ತೆಯಿಂದ ಏಳುರಾಗಿ ಕ್ಯಾಂಪಿನ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ, ಮಹಿಳಾ ಹೈಟೆಕ್ ಶೌಚಾಲಯ, ಸ್ಮಶಾನಕ್ಕೆ ಸ್ಥಳ ಗುರುತಿಸಿ ಅಲ್ಲಿ ಎಲ್ಲಾ ರೀತಿಯ ಸೌಕರ್ಯ, ಇಲ್ಲಿ ವಾಸವಾಗಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ಸರಕಾರದ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರು ಮಾಡಿಸಬೇಕು ಎಂದು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿದರು.

ಮನವಿ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷರಾದ ಮುರ್ತಜಾ ಹುಸೇನ್, ಸಮ್ಮುಖದಲ್ಲಿ ನಗರಸಭೆ ಪೌರಾಯುಕ್ತರಾದ ವಿರೂಪಾಕ್ಷಮೂರ್ತಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆಯಲ್ಲಿ ಬಿ.ಎಸ್.ಪಿ ಮುಖಂಡರ ಮತ್ತು ಪೌರಾಯುಕ್ತರ ನಡುವೆ ಮಾತಿನ ಚಕಮಕಿ ನಡೆಯಿತು. ತಾವೂ ಒಬ್ಬ ಅಧಿಕಾರಿ ಎಂಬುದನ್ನು ಮರೆತು, ಹೋರಾಟಗಾರ ಜೊತೆ ಅಸಭ್ಯವಾಗಿ ವರ್ತಿಸಿದರು.

ಈ ಸಂದರ್ಭದಲ್ಲಿ ಚನ್ನಪ್ಪ ಅಮೀನಗಡ ನಗರ ಘಟಕ ಅಧ್ಯಕ್ಷರು, ಸಂತೋಷ ಏಳುರಾಗಿಕ್ಯಾಂಪ್, ಹನುಮಂತಪ್ಪ ಏಳುರಾಗಿಕ್ಯಾಂಪ್, ರಾಘವೇಂದ್ರ ಏಳುರಾಗಿಕ್ಯಾಂಪ್, ಇನ್ನೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend