ಗುತ್ತಿಗೆ – ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗಾಗಿ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಆಗ್ರಹಿಸಿ…!!!

ಕಾರ್ಮಿಕ ವಿರೋಧಿ 04 ಲೇಬರ್ ಕೋಡ್ ಗಳ ವಿರುದ್ಧ
ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ
ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ಮಾರಾಟದ ವಿರುದ್ಧ
ಬೆಲೆ ಏರಿಕೆ ವಿರುದ್ಧ
ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರಂದು ಪರಿಗಣಿಸಲು ಒತ್ತಾಯಿಸಿ
ಮಾಸಿಕ ರೂ. 21 ಸಾವಿರ ಕನಿಷ್ಠ ವೇತನ, EPF & ESI ಗಾಗಿ
ಗುತ್ತಿಗೆ – ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗಾಗಿ
ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಆಗ್ರಹಿಸಿ

AIUTUC ಕೇಂದ್ರ ಸಮಿತಿ ಕರೆ ನೀಡಿರುವ,

ಅಕ್ಟೋಬರ್ 25 ರಿಂದ 31,2021
“ಅಖಿಲ ಭಾರತ ಪ್ರತಿಭಟನಾ ಸಪ್ತಾಹ”ದ ಅಂಗವಾಗಿ ಇಂದು ಬಳ್ಳಾರಿ ಯಲ್ಲಿ AIUTUC ಜಿಲ್ಲಾ ಸಮಿತಿ ವತಿಯಿಂದ AIUTUC ಕಛೇರಿಯಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ AIUTUC ರಾಜ್ಯ ಉಪಾಧ್ಯಕ್ಷರಾದ ಕಾಮ್ರೇಡ್ ಡಿ.ನಾಗಲಕ್ಷಿ. ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್.ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಎ.ಶಾಂತ . ಪಿ.ಶರ್ಮಾಸ್ ಉಪಸ್ತಿತರಿದ್ದರು.
“ಕಾರ್ಮಿಕ ವಿರೋಧಿ, ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮವನ್ನು ಉಗ್ರವಾಗಿ ಖಂಡಿಸಿದ ಅವರು, ಈ ನೀತಿಗಳನ್ನು ಸೋಲಿಸಲು ಅಕ್ಟೋಬರ್ 25 ರಿಂದ 31 ರ ವರೆಗೆ ಗ್ರಾಮ, ಗ್ರಾಮ ಪಂಚಾಯತಿ, ಹೋಬಳಿ, ಪಟ್ಟಣ, ತಾಲೂಕ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳು, ಮನವಿ ಪತ್ರ ಸಲ್ಲಿಸುವುದು, ವ್ಯಾಪಕ ಕರಪತ್ರ ಹಂಚಿಕೆ ಮಾಡುವುದು, ಪೋಸ್ಟರ್, ಬೀದಿ ಬದಿ ಸಭೆಗಳು, ಗುಂಪು ಚರ್ಚೆಗಳು ಸೇರಿದಂತೆ ವಿವಿಧ ರೀತಿಯಲ್ಲಿ ಈ ಒಂದು ವಾರಗಳ ಕಾಲ ನಡೆಯುವ ಹೋರಾಟದಲ್ಲಿ ಎಲ್ಲಾ ಕಾರ್ಮಿಕರು ಹಾಗೂ ದುಡಿಯುವ ಜನತೆ ತೊಡಗಿಸಿಕೊಳ್ಳಬೇಕು ಮತ್ತು ಆ ಮೂಲಕ ಸರ್ಕಾರಗಳ ಕಾರ್ಮಿಕ ವಿರೋಧಿ – ಜನ ವಿರೋಧಿ ನೀತಿಗಳನ್ನು ಸೋಲಿಸಬೇಕು ಎಂದು ಕರೆ ನೀಡಿದರು…

ವರದಿ. ಎಂ. ಎಲ್. ವೆಂಕಟೇಶ್, ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend