ಲಂಚಕ್ಕಾಗಿಯೆ ಕಾದು ಕುಳಿತಿದ್ದ ಪಿಡಿಓ ಶಿವಾನಂದ ಆರ್ ಪತ್ತಾರ…!!!

ಲಂಚಕ್ಕಾಗಿಯೆ ಕಾದು ಕುಳಿತಿದ್ದ ಪಿಡಿಓ ಶಿವಾನಂದ ಆರ್ ಪತ್ತಾರ.

ಮೂಡಲಗಿ : ಬೆಳಗಾವಿ ಜಿಲ್ಲೆಯ
ಮೂಡಲಗಿ ತಾಲೂಕಿನ ಘಟಪ್ರಭಾ ನದಿಯ
ಸುತ್ತಮುತ್ತಲಿರುವ ಗ್ರಾಮದ ನೆರೆ ಸಂತ್ರಸ್ತ
ಫಲಾನುಭವಿಗಳಿಂದ 50 ಸಾವಿರ ರೂ. ಗಳಷ್ಟು ಹಣವನ್ನು
ತಾಲೂಕಿನ ತಿಗಡಿ ಗ್ರಾಮ ಪಂಚಾಯತ ಪಿಡಿಓ ಶಿವಾನಂದ ಆರ್ ಪತ್ತಾರ ಇವರು ಹಣ ತೆಗೆದುಕೊಂಡ ಬಗ್ಗೆ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಪಿಡಿಓ ಹಣ ತೆಗೆದುಕೊಂಡ ವಿಡಿಯೋ ಕೂಡಾ ವೈರಲ್ ಆಗಿದೆ.

ಘಟಪ್ರಭಾ ನದಿಯ ಸುತ್ತಮುತ್ತಲಿರುವ ಗ್ರಾಮದ ನೆರೆ ಸಂತ್ರಸ್ತ ಫಲಾನುಭವಿಗಳಿಂದ 50 ಸಾವಿರ ರೂ. ಗಳಷ್ಟು ಹಣವನ್ನು ಬೇಡಿಕೆ ಇಟ್ಟು, ಸಂತ್ರಸ್ತ ರಿಂದ 15000 ರೂಪಾಯಿಗಳನ್ನು ತಿಗಡಿ ಗ್ರಾಮ ಪಂಚಾಯತ ಪಿಡಿಓ ಶಿವಾನಂದ ಆರ್ ಪತ್ತಾರ ಅವರು ಪಡೆದಿದ್ದು ಅಲ್ಲದೇ, ಸಂತ್ರಸ್ತರು ಪಿಡಿಓ ಅವರ ಕಾಲು ಹಿಡಿದು ಬೆಡಿಕೊಂಡರು ಕೂಡಾ ಯಾವುದೇ ಕಣಿಕರ ಇಲ್ಲದೆ ಅಭಿವೃದ್ಧಿ ಅಧಿಕಾರಿಗಳು ಹಣ ತೆಗೆದುಕೊಂಡು, ನೀವು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಯಂತ್ರಗಳನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಿಸಿಕೊಳ್ಳಿ ನಾನು ನಿಮಗೆ ಬಿಲ್ ಸಂದಾಯ ಮಾಡುತ್ತೇನೆ. ನೀವು ನನಗೆ ಹಣವನ್ನು ನೀಡಿ ಅಂತಾ ಹೇಳುತ್ತಿರುವ ವಿಡಿಯೋ ಇವತ್ತಿನ ದಿನಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದಷ್ಟು ಬೇಗನೇ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮೂಡಲಗಿ ತಾಲೂಕ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಗಡಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸಂಬಂಧ ಪಟ್ಟ ಪೊಲೀಸ್ ಇಲಾಖೆ ಯಲ್ಲಿ ದೂರು ದಾಖಲೆ ಮಾಡಿ ಅವರನ್ನು ಕೆಲಸ ದಿಂದ ವಜಾಮಾಡಿ, ಅವರ ಮೇಲೆ ಕಾನೂನು ಕ್ರಮವನ್ನು ತಗೆದುಕೊಳಬೇಕು. ಇಲ್ಲ ವಾದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಹೈ ಕೋರ್ಟ್ ನಲ್ಲಿ PIL ಸಲ್ಲಿಸಲಾಗುವುದು…

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend