ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ, ಮೊಳಕಾಲ್ಮುರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿಯವರು ಸಂತನಾಗಿ ಕವಿಯಾಗಿ ರಾಮಯಣ ರಚಿಸಿದ ವಭಕ್ತರು ಇದಕ್ಕೆ ದಂಥ ಕಥೆಗಳಿವೆ ಇದರ ಪ್ರಕಾರ ವಾಲ್ಮೀಕಿ ತನ್ನ ಜೀವನೋಪಾಯಕ್ಕಾಗಿ ಜನರಿಂದ ಒತ್ತಾಯ ಪೂರ್ವಕವಾಗಿ ಅಗತ್ಯತೆಗಳನ್ನು ಪಡೆದುಕೊಳ್ಳುತ್ತಿದ್ದನು. ನಂತರ ಪಶ್ಚಾತ್ತಾಪ ಹೊಂದಿ ತನ್ನ ಪಾಪಗಳನ್ನು ತೊಳೆದು ಕವಿಯಾಗುತ್ತಾನೆ ವಾಲ್ಮೀಕಿಯು ಪುನಃ ಕಾಡಿನಲ್ಲಿ ಸಪ್ತ ಋಷಿಗಳನ್ನು ಬೇಟಿ ಮಾಡಿ ಹೆಂಡತಿ ಮಕ್ಕಳು ಒಪ್ಪಿಕೊಳ್ಳದ ಬಗ್ಗೆ ಅವರಲ್ಲಿ ವಿವರಿಸಿ ಇದಕ್ಕೆ ಪರಿಹಾರವನ್ನು ಕೊರಿದಾಗ ಅವರು ಒಂದು ಸಲಹೆ ನೀಡಿದರು. ರಾಮ ನಾಮವನ್ನು ಹಿಂದೆ ಮುಂದಾಗಿ ಹೇಳು ಒಳ್ಳೆಯದಾಗುತ್ತದೆ ಎಂದರು. ಆಗ ವಾಲ್ಮೀಕಿ ಮರಾ…. ಮರಾ……ಮರಾ ಎನ್ನುತ್ತಾ ಅಲ್ಲಿಯೇ ಕುಳಿತನು. ಹೀಗೆ ಜಪಿಸುತ್ತಿರುವಾಗ ಅದು ರಾಮ,ರಾಮ,ರಾಮ, ಎಂದು ಬರತೊಡಗಿತು. ದಿನಗಳು ಕಳೆದಂತೆ ಕುಳಿತ ಜಾಗದಲ್ಲಿ ಕಾಲ ಕ್ರಮೇಣ ವಾಲ್ಮೀಕಿಯ ಸುತ್ತ ಹುತ್ತ ಬೆಳೆಯಿತು. ಹುತ್ತ ಎಂದರೆ ಸಂಸ್ಕೃತದಲ್ಲಿ ವಾಲ್ಮೀಕಿ ಎಂದರ್ಥ ಆಗ ಸಪ್ತ ಋಷಿಗಳು ಇದನ್ನು ಗಮನಿಸಿ ನೀನು ಮರು ಜನ್ಮ ಪಡೆದಿರುವ ಜಗತ್ತಿಗೆ ಒಳ್ಳೆಯದನ್ನು ಮಾಡು ಎಂದು ಆಶೀರ್ವದಿಸುತ್ತಾರೆ ಮತ್ತು ರಾಮ ನಾಮದ ಹೆಸರಿನಲ್ಲಿ ರಾಮಯಾಣ ಬರೆಯಲು ಪ್ರೇರೇಪಿಸಿದರು. ಅದರಂತೆ ವಾಲ್ಮೀಕಿ ರಾಮಾಯಣ ಮಹಾ ಕಾವ್ಯ ರಚಿಸಿದರು. ಭಾರತೀಯ ಪರಂಪರೆ ವಾಲ್ಮೀಕಿಯನ್ನು ಶ್ರೀರಾಮನ ಸಮಕಾಲಿನವ ಎಂದು ಹೇಳಲಾಗುತ್ತದೆ ರಾಮಯಣದಲ್ಲಿ ಬರುವ ಮಾನವೀಯತೆಯ ಮೌಲ್ಯಗಳು ವಾಲ್ಮೀಕಿಯನ್ನು ಒಬ್ಬ ಬ್ರಹ್ಮ ಋಷಿಯಂತೆ ಬಿಂಬಿಸಿವೆ ಇದರಿಂದ ಇವರು ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ತಿಳಿಸಿದರು. ಡಾ” ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಾಧ್ಯಪಕರು ಇತಿಹಾಸ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ಉಪನ್ಯಾಸದಲ್ಲಿ ಮಾಜದಲ್ಲಿ ಒಬ್ಬ ವ್ಯಕ್ತಿ ಹೇಗಿರಬೇಕು ಎಂದರೆ ಶ್ರೀರಾಮ ಚಂದ್ರನಂತಿರಬೇಕು ಶ್ರೀ ರಾಮನ ಆದರ್ಶಗುಣಗಳಾದ ನೀತಿ, ಧರ್ಮ ಹೊಂದಿರಬೇಕು. ಮನೆಯ ಹೆಂಡತಿಯೂ ಕೂಡ ಸಿತಾ ಮಾತೆಯಂತಿರಬೇಕು, ಸಹೋದರ ರಾಮ ಲಕ್ಷ್ಮಣರತಿರಬೇಕು. ಕಾರ್ಯಕ್ರಮದಲ್ಲಿ 2020-21 ಸಾಲಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ.ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಾಲ್ಮೀಕಿ ಜನಾಂಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗಣ್ಯರಿಗೆ ಮತ್ತು ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾದಕರಿಗೆ, ಕಲಾವಿದರಿಗೆ, ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು. ಈ ಕಾರ್ಯಾಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಲಕ್ಷ್ಮಣ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಓ. ಜಾನಕಿ ರಾಮ, ಆರಕ್ಷಕ ವೃತ್ತ ನಿರೀಕ್ಷಕ ಜಿ.ಬಿ.ಉಮೇಶ, ಕ.ರಾ.ನೌ ಸಂಘ ಅಧ್ಯಕ್ಷ ಈರಣ್ಣ, ಪ.ಪಂ.ಉಪಾಧ್ಯಕ್ಷೆ ಶುಭ ಪೃಥ್ವಿರಾಜ್, ವಾಲ್ಮೀಕಿ ಸಮಾಜ ಸಂಘ, ಅಧ್ಯಕ್ಷ ಕೆ. ಜಗಲೂರಯ್ಯ, ಪ.ಪಂ ಮುಖ್ಯಾಧಿಕಾರಿ ಕಾಂತರಾಜು, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಡಿ.ದಯಾನಂದ, ಶಿಕ್ಷಕರು ಗಾಯಿತ್ರಿ ಹಿ.ಪ್ರಾ.ಶಾಲೆ, ಬಿ.ಓಬಣ್ಣ, ಸಿ.ಡಿ.ಪಿ.ಓ, ಸವಿತ, ಸಮಾಜ ಕಲ್ಯಾಣ ಅಧಿಕಾರಿ ಮಾಲತಿ, ಪಟೇಲ್ ಪಾಪನಾಯಕ, ಮಾರನಾಯಕ, ಸಚಿವರ ಆಪ್ತಸಹಾಯಕ ಪಾಪೇಶ ನಾಯಕ, ನಾಗರಾಜಕಟ್ಟೆ, ಬಿ.ವಿಜಯ್, ದೇವಸಮುದ್ರ ಪರಮೇಶಿ, ಬಿಜಿಕೆರೆ ನಿಂಗಣ್ಣ, ಮಂಜುನಾಥನಾ ಸ್ವಾಮಿ ನಾಯಕ, ತಿಪ್ಪೇಸ್ವಾಮಿ ನಿವೃತ್ತ ಇ.ಓ., ಮಂಜಣ್ಣ ಸದಸ್ಯರು ಪ.ಪಂ, ಮಲ್ಲಿಕಾಜುನ ಅಧ್ಯಕ್ಷರು ಕೊಂಡ್ಲಹಳ್ಳಿ ಗ್ರಾ.ಪಂ, ಪಾಲಯ್ಯ
ಉಪಾಧ್ಯಕ್ಷರು ಗ್ರಾ.ಪಂ.ಕೋನಸಾಗರ ,ಇನ್ನು ಮುಂತಾದ ವಾಲ್ಮೀಕಿ ಮುಖಂಡರುಗಳು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
