ವಿಜಯನಗರ: ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ಇಂದು ಅ-20 ಗ್ರಾಮ ಘಟಕ ಕರ್ನಾಟಕ ರಾಜ್ಯ ಶ್ರೀ ಮಹರ್ಷಿ ವಾಲ್ಮೀಕಿ ಯುವಕರ ಸಂಘ ಉದ್ಘಾಟಿಸಿದರು. ನಂತರ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಬೆಳಗ್ಗೆ ವಾಲ್ಮೀಕಿ ಬ್ಯಾನರ್ಗೆ ಹೂವಿನ ಅಲಂಕಾರ ವಿಶೇಷವಾಗಿ ಮಹಾ ಮಂಗಳಾರತಿ ಸಲ್ಲಿಸಲಾಯಿತು. ವಾಲ್ಮೀಕಿ ಸಮಾಜದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶೇಷವಾಗಿ ಪೂಜೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಸ್ವಾಮಿ, ಪೂಜಾರಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಶಿಲ್ಪ-ಬಸಪ್ಪ, ಉಪಾಧ್ಯಕ್ಷೆ ಮಲ್ಲಮ್ಮ, ಗ್ರಾ.ಪಂ ಕಾರ್ಯದರ್ಶಿಯಾದ ನಿಜಲಿಂಗಪ್ಪ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳು ಬಸಪ್ಪ, ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗಂಗಾಧರ, ಕಾರ್ಯದರ್ಶಿ ಓದಿನ ಬೋರಯ್ಯ, ಎಲ್ಲಾ ನಿರ್ದೇಶಕರು ರೈತರು, ಶರಣಪ್ಪ ತಾ.ಪಂ ಆಕಾಂಕ್ಷಿ, ಗ್ರಾ.ಪಂ ಎಲ್ಲ ಸದಸ್ಯರು, ಸತೀಶ್, ವಿಶ್ವ, ಶಿವರಾಜ್, ಸೇರಿದಂತೆ ಊರಿನ ಗಣ್ಯರು, ವಾಲ್ಮೀಕಿ ಗೆಳೆಯರ ಬಳಗದ ಯುವಕರು ಉಪಸ್ಥಿತರಿದ್ದರು..
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

