ಇಟ್ಟಿಗಿಯಲ್ಲಿ “JK MH 502 ಮೆಕ್ಕೆಜೋಳದ ಕ್ಷೇತ್ರೋತ್ಸವ”

ಇಟ್ಟಿಗಿಯಲ್ಲಿ “JK MH 502 ಮೆಕ್ಕೆಜೋಳದ ಕ್ಷೇತ್ರೊತ್ಸವ”

ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ ದಿನಾಂಕ 19-10-2021 ರಂದು JK MH 502 ಮೆಕ್ಕೆಜೋಳದ ಕ್ಷೇತ್ರೊತ್ಸವ ಇಲ್ಲಿಯ ರೈತರಾದ ಅಜ್ಜಯ್ಯನವರ ಸೋಮಾಚಾರಿ ಇವರ ಹೊಲದಲ್ಲಿ ನಡೆಯಿತು. ವಲಯ ಅಧಿಕಾರಿಗಳಾದ ಸಣ್ಣಪ್ಪ&ನಿರಂಜನ್ ಇವರು ರೈತರಿಗೆ JK MH 502ಮೆಕ್ಕೆಜೋಳದ ಬೆಳೆಯ ಬಿತ್ತನೆ ಕ್ರಮ,ಬೀಜಗಳ ನಡುವಿನ ಅಂತರ,ಬೆಳೆಗೆ ಮಾರಕವಾಗುವ ರೋಗಗಳಿಗೆ ಔಷಧ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ JK MH 502 ಮೆಕ್ಕೆಜೋಳ ಬಿತ್ತಿ ಉತ್ತಮ ಗುಣಮಟ್ಟದ ತೆನೆ ಬೆಳೆದ ರೈತರಾದ ಅಜ್ಜಯ್ಯನವರ ಸೋಮಾಚಾರಿ ಇವರಿಗೆ ವಲಯ ಅಧಿಕಾರಗಳು ಸನ್ಮಾನ ಮಾಡಿ ಅಭಿನಂದಿಸಿದರು. ಈ ಸುಸಮಯದಲ್ಲಿ ಇಟ್ಟಿಗಿಯ ಪ್ರಮುಖ ರೈತರಾದ ಅಜ್ಜಯ್ಯನವರ ಚಿದಾನಂದಚಾರಿ,ಬಳಿಗಾರ ಅಜ್ಜಪ್ಪ,G S ಗಂಗಪ್ಪ,ಹಾವನೂರು ದ್ಯಾಮಜ್ಜ,ಗ್ರಾಮ ಪಂಚಾಯತಿ ಸದಸ್ಯರಾದ ಕಮ್ಮಾರ ರುದ್ರಪ್ಪ,ಬಳಿಗಾರ ಸುರೇಶ್,ಓಮದೇವಪ್ಪ, ಕೂಡ್ಲಿಗಿ ಬಸವರಾಜ,ಚಿಂಪಿಗರ ಪ್ರಕಾಶ್,ಪತ್ರೆಪ್ಪ ಹಾಗೂ ಇ ಊರಿನ ರೈತರು ಉಪಸ್ಥಿತಿಯಲ್ಲಿದ್ದರು.

ವರದಿ- ಪ್ರಕಾಶ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend