ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಚಿತ್ರ ಸಂಪ್ರದಾಯ ಮೃತದೇಹಗಳನ್ನು ಸುಡುವುದು, ಮಣ್ಣಿನಲ್ಲಿ ಹೂಳುವುದು ಸಾಮಾನ್ಯ ಆದರೆ ಇಲ್ಲಿನ ಗೊಲ್ಲ ಸಮುದಾಯದವರು ಮಾತ್ರ ಕಲ್ಲುಗಳಿಂದ ಮೃತದೇಹವನ್ನು ಮುಚ್ಚಿ ಅಂತ್ಯಸಂಸ್ಕಾರ ಮಾಡುತ್ತಾರೆ. ಇದಕ್ಕಾಗಿ ಪ್ರದೇಶದಲ್ಲಿ ಒಂದು ಸುಂದರ ತುಗ್ಗಿಲಿ ಮರಗಳ ಸಂರಕ್ಷಿಸಲ್ಪಟ್ಟಿದ್ದು, ವಿಹಾರದ ಆಕರ್ಷಣೆಯಾಗಿ ಮಾರ್ಪಟ್ಟಿದೆ. ಹೌದು, ಇಂತಹ ವಿಚಿತ್ರ ಆಚರಣೆ ಇಂದಿಗೂ ಜೀವಂತವಾಗಿರುವುದಕ್ಕೆ ತಿಮ್ಮಪ್ಪ ದೇವಸ್ಥಾನ ಆವರಣವು ಸಾಕ್ಷಿ ಹೇಳುತ್ತಿದೆ. ಸಂಸ್ಕೃತಿ ಬಿಂಬಿಸುವ ಇಲ್ಲಿನ ಈರಣ್ಣ ತಿಮ್ಮಪ್ಪ ದೇವಸ್ಥಾನಕ್ಕೆ ಪಟ್ಟದ ಪೂಜಾರಿ, ಪಟ್ಟದ ದಾಸಪ್ಪ ಹಾಗೂ ಪಟ್ಟದ ಯಜಮಾನರಎನ್ನುವ ಮೂರು ಕುಟುಂಬಗಳಿದ್ದು, ಈ ಕುಟುಂಬದವರಲ್ಲಿ ಯಾರಾದರೂ ಮೃತಪಟ್ಟಲ್ಲಿ ದೇವಸ್ಥಾನ ಆವರಣದಲ್ಲಿ ಮೂರ್ನಾಲ್ಕು ಇಂಚು ನೆಲವನ್ನು ಮೃತದೇಹವಿಟ್ಟು ದೇಹ ಕಾಣದಂತೆ ಕಲ್ಲುಗಳಿಂದ ಮುಚ್ಚಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪದ್ಧತಿಯನ್ನು ಇಂದಿಗೂ ಈ ಕುಟುಂಬದವರ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಆವರಣದಲ್ಲಿ ಪ್ರಸ್ತುತವಾಗಿ ಜನರಿಗೆ ಕಲ್ಲುಗಳನ್ನು ಇಟ್ಟು ಸಂಸ್ಕಾರ ಮಾಡಿರುವ ಗುರುತುಗಳು ಕಾಣಸಿಗುತ್ತವೆ. ಈ ಕಲ್ಲುಗಳ ಮಧ್ಯೆ ಇಣುಕಿ ನೋಡಿದರೆ ಮೃತವ್ಯಕ್ತಿಯ ತಲೆಬುರುಡೆ ಮೂಳೆಗಳು ಗೋಚರಿಸುತ್ತವೆ. ಇದೆ ಆವರಣದ ಸಮೀಪದಲ್ಲಿ ಇತ್ತೀಚೆಗೆ ಮತ್ತಿಬ್ಬರ ಅಂತ್ಯಸಂಸ್ಕಾರವನ್ನು ಇದೇ ಮಾದರಿಯಲ್ಲಿ ಮಾಡಲಾಗಿದೆ. ಇಲ್ಲಿನ ದೇವಸ್ಥಾನದ ಗರ್ಭಗುಡಿಯಲ್ಲಿ ಪೂರ್ವಜರಲ್ಲಿನ ಪೂಜಾರಿ ಒಬ್ಬರನ್ನು ಸಂಸ್ಕಾರ ಮಾಡಲಾಗಿದೆ ಇಂದಿಗೂ ಈ ಸಂಸ್ಕಾರ ಮಾಡಿದ ಸ್ಥಳಕ್ಕೆ ಈ ಯಾದವ ಸಮುದಾಯದವರು ಭಕ್ತಿಯಿಂದ ಪೂಜಾಕಾರ್ಯ ನಡೆಸುತ್ತಿದ್ದಾರೆ…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
