ದಿನಾಂಕ 14,10,21 ರಂದು ಹೊಸಪೇಟೆ ನಗರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ 65ನೇ ವರ್ಷಾಚರಣೆ ಕಾರ್ಯಕ್ರಮವು ನಗರದ ಕಾಲೇಜು ರಸ್ತೆಯಲ್ಲಿರುವ ಡಾ. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮುಖಾಂತರ ದೇಶದ ಮೂಲ ನಿವಾಸಿಗಳಿಗೆ ಬೌದ್ಧ ಧರ್ಮ ದಿವಸದ ಶುಭ ಕೋರಲಾಯಿತು..
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಕಾರ್ಯದರ್ಶಿಗಳಾದ ಸೋಮಶೇಖರ್ ಬಣ್ಣದ ಮನೆ ಮಾತನಾಡುತ್ತಾ,
ಕಂಡವರ ಮನೆ(ಧರ್ಮ) ಮುಂದೆ,
ನಮ್ಮದಲ್ಲದ ಮನೆಯ ಮುಂದೆ,
ಹಾದಿ-ಬೀದಿಯ ಬಿಸಿಲಲ್ಲಿ ನಿಂತು ದಣಿದದ್ದು ಸಾಕು,
ಒಳಗೆ ಕರೆಯದ ಗುಡಿ ಗುಂಡಾರದ ಮುಂದು ಭಿಕ್ಷೆ ಬೇಡಿದ್ದು ಸಾಕು,
ಕರೆಯದೇ ಒಳ ಪ್ರವೇಶ ಮಾಡಿದ್ದಕ್ಕೆ ಓದೆಸಿಕೊಂಡದ್ದು ಸಾಕು, ನಮ್ಮ ಮನೆಯ ಸಾಕು ನಾಯಿಗಳಿಗೂ ಅಸ್ಪೃಶ್ಯತೆಯೇ..?
ಮೀಸೆ ಬಿಟ್ಟಿದ್ದಕ್ಕೆ
ಬಡಿದು ಕೊಂದ,
ಕುದುರೆ ಹತ್ತಿದ್ದಕ್ಕೆ ಮಾರಣಹೋಮ ನಡೆಸಿದ,
ಮಂತ್ರಿಯಾದರೂ ಹಟ್ಟಿಗೆ ಬಿಡದ,
ಎದೆ ತೋರಿಸದ ನಮ್ಮ ಸಹೋದರಿಯರಿಗೆ ತೆರಿಗೆ ವಿಧಿಸಿದ ಈ ಹೇಯ ಕೃತ್ಯವನ್ನು ಸಯಿಸಿಕೊಂಡು,
ದೈವದ ಹೆಸರಿನಲ್ಲಿ ನಮ್ಮ ಹೆಣ್ಮಕ್ಕಳನು ವೇಶ್ಯಾವಾಟಿಕೆಗೆ ದೂಡಿದ,
ಯಲ್ಲಮನ ಹೆಸರಲ್ಲಿ ಬೆತ್ತಲು ಪೂಜೆ ಮಾಡಲು ಪ್ರೋತ್ಸಾಹಿಸಿದ ಗೊಡ್ಡು ವ್ಯವಸ್ಥೆ
ಸಾಕು ನಮಗೆ ಅವಮಾನದ ಬದುಕು
ಗೌರವದಿ ಬದುಕಲು ನಡೆಯಿರಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ತೋರಿದ ಸಮ ಸಮಾನತೆಯ ನಮ್ಮ ಮೂಲ ಮನೆ ಬೌದ್ಧ ಧರ್ಮದೆಡೆಗೆ ನಾವೆಲ್ಲರೂ ಬೌದ್ಧ ಧರ್ಮವನ್ನು ಒಪ್ಪಿಕೊಳ್ಳುವುದರ ಮುಖಾಂತರ ಗೌರವಿತವಾಗಿ ಬಾಳೋಣ ಎಂದು ಹೇಳಿದರು..
ಇದೇ ಸಂದರ್ಭದಲ್ಲಿ ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ವೀರಸ್ವಾಮಿ ಅವರು ಮಾತನಾಡುತ್ತಾ,
ನಮ್ಮ ಸ್ವಂತ ಮನೆಯಿರಲು
ನಮಗೇಕೆ ಈ ಹಂಗಿನ ಮನೆ
ನಾವು ಅನುಭವಿಸಿದ ಜಾತಿಯ ದೌರ್ಜನ್ಯ ನಮ್ಮಕಳಿಗೆ ಬಾರದಿರಲು
ನಡೆಯಿರಿ ಒಂದಾಗಿ ಸೇರೋಣ
ಒಂದಾಗಿ ಬದುಕೋಣ, ಬಾಬಾಸಾಹೇಬ ಅಂಬೇಡ್ಕರ್ ಅವರು ಕಳೆದ ಅರವತ್ತೈದು ವರ್ಷಗಳ ಹಿಂದೆಯೇ ಅಸಮಾನತೆಯ ಧರ್ಮವನ್ನು ಬಿಟ್ಟು ಬೌದ್ಧ ಧರ್ಮದಲ್ಲಿ ಗೆ ಸೇರಿದರು ಆದರೆ ನಾವಿನ್ನೂ ಧರ್ಮವನ್ನು ಅಧ್ಯಯನ ಮಾಡುವುದರಲ್ಲಿಯೇ ಇದ್ದೇವೆ, ಮುಂದಿನ ದಿನಗಳಲ್ಲಿ ನಾವೆಲ್ಲರೂ ಡಾ.ಅಂಬೇಡ್ಕರ್ ಅವರ ತೋರಿದ ಮಾರ್ಗದಲ್ಲಿ ನಡೆಯೋಣ ಎಂದರು..
ಡಿ.ಎಚ್. ಎಸ್ ನ ಜಂಬಯ್ಯ ನಾಯಕ ಮಾತನಾಡುತ್ತಾ ಹಿಂದೂ ಧರ್ಮದಲ್ಲಿ ಅಸಮಾನತೆಯ ಮತ್ತು ಮೂಢನಂಬಿಕೆಗಳ ತಾಣವಾದ ಹಿಂದು ಧರ್ಮದ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಳೆದ 65 ವರ್ಷ ಹಿಂದೆ ಈ ಮನುವಾದಿ ಧರ್ಮ ಬಿಟ್ಟು ಬೌದ್ಧ ಧರ್ಮವನ್ನು ಅಪ್ಪಿಕೊಂಡರು, ಅವರು ಏತಕ್ಕಾಗಿ ಈ ಮನುವಾದಿಗಳ ಧರ್ಮವನ್ನು ಬಿಟ್ಟರು ಎಂದು ನಮ್ಮೆಲ್ಲರಿಗೆ ಅರ್ಥ ಮಾಡಿಕೊಳ್ಳಬೇಕಿದೆ , ಇಲ್ಲದಿದ್ದರೆ ಮನುವಾದಿಗಳಿಂದ ಈ ನೆಲದ ಮೂಲ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೊಂದರೆಗಳಿವೆ, ಹಿಂದುತ್ವದ ಧರ್ಮದಲ್ಲಿ ಜಾತಿವ್ಯವಸ್ಥೆಯನ್ನು ಹಸಿರಾಗಿಸುತ್ತಿರುವ ಮನುವಾದಿಗಳು ದಲಿತರಲ್ಲಿ ಒಗ್ಗಟ್ಟನ್ನು ಒಡೆಯುವ ಜಾತಿ ಜಾತಿಗಳ ಮಧ್ಯ ಹುಳಿ ಹಿಂಡುತ್ತಿರುವ ಹಿಂದುತ್ವವನ್ನು
ಬಿಟ್ಟು ಬಾಬಾಸಾಹೇಬರ ರೀತಿ ಯಲ್ಲಿ ನಾವೆಲ್ಲರೂ ನಮ್ಮ ಮೂಲ ಧರ್ಮದೊಳಗೆ ಮುಕ ಮಾಡಬೇಕಿದೆ ಎಂದರು..
ಈ ಕಾರ್ಯಕ್ರಮದಲ್ಲಿ ಪ್ರಗತಿಪರ ಸಂಘಟನೆಯ ಸಂಚಾಲಕರಾದ ದುರ್ಗಪ್ಪ ಪೂಜಾರ್, ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ವಾಸುದೇವ್, ನಿವೃತ್ತ ಶಿಕ್ಷಕರಾದ ಕೃಷ್ಣಪ್ಪ, ಸಣ್ಣ ಈರಪ್ಪ ಮತ್ತು b.ed ಹನುಮಂತಪ್ಪ ವಿದ್ಯಾರ್ಥಿ ಸಂಘಟನೆಗಳ ಮುಖಂಡರಾದ ಶಿವಕುಮಾರ್ ಮತ್ತು ಭರತ್, ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್ ನ ಅಧ್ಯಕ್ಷರಾದ ನಿಂಬಗಲ್ ರಾಮಕೃಷ್ಣ, ಮುದುಕಪ್ಪ, ಬಸವರಾಜ್,ಶಬ್ಬೀರ್ ,ಮಾರಣ್ಣ, ಓಬಳೇಶ್, ಸ್ಲಂ ವೆಂಕಟೇಶ್,ವಿಜಯ್, ಜಯಪ್ಪ, ನರಸಿಂಹಲು, ಸಜ್ಜಾದ್ ಖಾನ್, ಅರುಣ್ ಕುಮಾರ್, ಯೋಹನ್ ಇನ್ನೂ ಅನೇಕ ಭೀಮ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..!
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಬುದ್ಧನ ಬಂತೇಜಿ ಗಳು ಸಹ ಪಾಲ್ಗೊಂಡಿದ್ದರು
ಕೊನೆಯಲ್ಲಿ ಬಾಬಾಸಾಹೇಬರ ದಾರಿಯಲ್ಲಿ ಸಾಗೋಣ.
ಬೌದ್ಧರಾಗೋಣ ನಾವು ಪ್ರಬುದ್ಧರಾಗೋಣ ಎನ್ನುವ ಮಾತುಗಳನ್ನು ಆಡುತ್ತಾ ವಂದನಾರ್ಪಣೆಯನ್ನು ಮಾಡಿದ ವಿದ್ಯಾರ್ಥಿ ಸಂಘಟನೆ ಮುಖಂಡರಾದ ಜೆ,ಶಿವಕುಮಾರ್…!..

ವರದಿ. ಜಾವೆದ್ ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
