ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹೂಡೇಂ ಗ್ರಾಮದಲ್ಲಿ (ಅಕ್ಟೋಬರ್-13) ಇಂದು ವಾಲ್ಮೀಕಿ ಸರ್ಕಲ್ ಬಳಿ ಇಂದು ಶ್ರೀ ರಾಜ ವೀರ ಮದಕರಿ ನಾಯಕ ಜಯಂತ್ಯೋತ್ಸವವನ್ನು ಊರಿನ ಮುಖಂಡರು ಮತ್ತು ಯುವಕರ ನೇತೃತ್ವದಲ್ಲಿ ಸಡಗರ ಸಂಭ್ರದಿಂದ ಆಚರಿಸಲಾಯಿತು. ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಶ್ರೀ ವೀರ ಮದಕರಿ ನಾಯಕರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮ ಸಲ್ಲಿಸಿ ನಂತರ ಹೂಡೇಂ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪಾಪನಾಯಕ ಅವರು ಮಾತನಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚಿತ್ರದುರ್ಗದ ನಾಯಕರ ಕಲ್ಲಿನ ಕೋಟೆ, ಉಕ್ಕಿನ ದೇಹವನ್ನು ಹೊಂದಿದಂತ ರಾಜಾಧಿ ರಾಜರುಗಳಲ್ಲಿ ಶ್ರೀ ರಾಜಾ ವೀರ ಮದಕರಿ ನಾಯಕ ಅತ್ಯಂತ ಬಲಿಷ್ಠನು ಹಾಗೂ ಉತ್ತಮ ರಾಜನಾಗಿದ್ದನು, ಹೈದರಾಲಿಯ ವಿರುದ್ಧ ಹೋರಾಡಿ ಕೆಚ್ಚೆದೆಯ ವೀರನೆಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಕರಿಬಸಪ್ಪ, ನಾಗರಾಜ್, ಶಾಂತಪ್ಪ, ಬಂಗಾರಯ್ಯ, ಸುರೇಶ್, ಅಭಿಷೇಕ್, ಮಂಜುನಾಥ್, ಸೇರಿದಂತೆ ಊರಿನ ಮುಖಂಡರು ಯುವಕರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
