ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿರುಗುಪ್ಪ ಪ್ರವಾಸಿ ಮಂದಿರ ಮದ್ಯ ಸೇವಕರಿಗೆ ಮತ್ತು ನಾಯಿಗಳ ಅಡ್ಡವಾಗಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಬಸ್ ನಿಲ್ದಾಣದ ಎದುರುಗಡೆ ಇರುವ ಸರ್ಕಾರಿ ಪ್ರವಾಸಿ ಮಂದಿರಕ್ಕೆ ವ್ಯವಸ್ಥಿತವಾಗಿ ಮುಖ್ಯ ಬಾಗಿಲು ಇಲ್ಲ ಇದರಿಂದ್ದ ಮದ್ಯ ಸೇವನೆಗೆ ಅನುಕೂಲಕರ ಸ್ಥಳವಾಗಿದೆ.ಊಟದ ಕೋಣೆಯಲ್ಲಿ(ಟೈನಿಂಗ್ ಹಾಲ್) ಮದ್ಯ ಸೇವಿಸಿ ಬಾಟಲ್ ಗಳನ್ನು ಕಿಟಕಿಯಿಂದ ಹೊರಗೆ ಹಾಕುತ್ತಾರೆ ಮತ್ತು ನಾಯಿಗಳು ಕೂಡ ಊಟದ ಕೋಣೆಯಲ್ಲಿ ಮಲಗುತ್ತಾವೆ.ಒಟ್ಟು ಎರಡು ರೂಮಗಳಿವೆ(ಕೋಣೆ) ಅದರಲ್ಲಿ ಒಂದು ಶಾಸಕರಿಗೆ ಮಿಸಲು ಇಟ್ಟಿದ್ದಾರೆ ಇನ್ನೊಂದು ಇತರರಿಗೆ ಮಿಸಲಿಟ್ಟಿದ್ದಾರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಶಾಸಕರ ಕೋಣೆ ಬಾಗಿಲಿಗೆ ಚಿಲಕದ ಕೊಂಡಿಯಿಲ್ಲ.ಬಾಗಿಲು ಲಾಕ್ ಮಾಡಿದ್ದಾರೆ ಎನ್ನುವ ಹಾಗೆ ಕಾಣುತ್ತದೆ ಚಿಲಕನಕ್ಕೆ ಕೊಂಡಿಯಿಲ್ಲದ ಕಾರಣ ಬಾಗಿಲು ತಳ್ಳಿದರೆ ಓಪನ್ ಅಗುತ್ತೆ ಕೆಲವು ಪಾನಮತ್ತ ಯುವಕರು ಒಳಗಡೆ ಹೋಗಿ ಏನು ಮಾಡುತ್ತಾರೆ ಗೊತ್ತಿಲ್ಲ ಒಳಗಡೆಯಿಂದ ಬಾಗಿಲು ಮುಚ್ಚಿದರೆ ನೋಡುವರ ಕಣ್ಣಿಗೆ ರೂಮಿನಲ್ಲಿ ಯಾರು ಇಲ್ಲ ಲಾಕ್ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಇರುತ್ತದೆ.

ಶಾಸಕರ ಕೋಣೆಗೆ ಭದ್ರತೆ ಇಲ್ಲವೆಂದ ಮೇಲೆ ಪ್ರವಾಸಿ ಮಂದಿರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿ ಎಷ್ಟರ ಮಟ್ಟಿಗೆ ಇದೆ ಎಂದು ಗೊತ್ತಾಗುತ್ತದೆ.ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಪ್ರವಾಸಿ ಮಂದಿರ ಸುತ್ತಮುತ್ತ ಮತ್ತು ಒಳಗೆ ಸ್ವಚ್ಛತೆಯಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಅತಿಥಿ ಗೃಹ ಪಕ್ಕದಲ್ಲಿದ್ದರು ಈ ಕಡೆಗೆ ತಿರಿಗಿ ನೋಡದಷ್ಟು ಬ್ಯೂಸಿ ಇರುತ್ತಾರೆ ತಮ್ಮ ಮನೆಗಳಿಗೆ ಈತರ ಆಗಿದ್ದರೆ ನಿರ್ಲಕ್ಷ್ಯ ಮಾಡುತ್ತಿದ್ದರಾ? ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸಿಬ್ಬಂದಿ ಇದ್ದರು ಇಲ್ಲದಂತಾಗಿದೆ.ಮಾನ್ಯ ಶಾಸಕರು ಮತ್ತು ಮೇಲಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ.ನಿರ್ಲಕ್ಷ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರ? ಕಾದು ನೋಡಬೇಕು…

ವರದಿ. ವೀರೇಶ್ ಹಳೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
