ಸಿಂಧನೂರು : ಕಾನೂನು ಅರಿವು ನೆರವು ಇಲ್ಲದಿದ್ದರೆ ಹಕ್ಕಿನಿಂದ ವಂಚಿತರಾಗುತ್ತಿರಿ, ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರು,ಉಚಿತ ಕಾನೂನು ನೆರವು ಪಡೆದುಕೊಳ್ಳಬೇಕು. ಕೋವಿಡ್ ಅಲೆಯಿಂದ ಕೆಲವರು ಒಂಟಿಯಾದರೂ, ಕೆಲವರು ಉದ್ಯೋಗ ಕಳೆದುಕೊಂಡರು, ಕೆಲವರು ಮಾನಸಿಕಕ್ಕೆ ಒಳಗಾಗಿದ್ದಾರೆ,ಅಂತವರಿಗೆ ಚಿಕಿತ್ಸೆ ಕೊಡಿಸಲು ಮಾನಸಿಕ ದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ಪಡೆದುಕೊಳ್ಳುವುದನ್ನು ಜನರಿಗೆ ತಿಳಿಸುವ ಕೆಲಸ ಆಶಾ ಕಾರ್ಯಕರ್ತರು ಮುಂದಾಗಬೇಕು ಎಂದು ಮನವಿ ಮಾಡಿದರು.ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಸಿಗೆ ನೀರೆರಿಯುವ ಮೂಲಕ ನ್ಯಾಯದೀಶೆ ದೀಪಾ.ಜೆ.ಮನೇರಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ,ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಸಾರ್ವಜನಿಕ ಆಸ್ಪತ್ರೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಅಮೃತ ಮಹೋತ್ಸವ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಭೀಮನಗೌಡ ಅಧ್ಯಕ್ಷರು ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ವಹಿಸಿದ್ದರು. ಡಾ.ಅಯ್ಯನಗೌಡ ತಾಲೂಕ ಆರೋಗ್ಯಧಿಕಾರಿಗಳು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಬಗ್ಗೆ ಪ್ರಾಸ್ತಾವಿಕವಾಗಿ ಉಪನ್ಯಾಸ ನೀಡಿದರು.
ಅಪರ ಸಿವಿಲ್ ನ್ಯಾಯಾಧೀಶ ಕೊಟೆಪ್ಪ ಕಾಂಭ್ಳೆ ಮಹಿಳೆಯರಿಗೆ ಇರುವ ಕಾನೂನುಗಳ ಬಗ್ಗೆ ತಿಳಿಸಿದರು.ಹೆಚ್ಚಾಗಿ ನಾವೆಲ್ಲರೂ ದೈಹಿಕ ಆರೋಗ್ಯದ ಕಡೆ ಮಾತ್ರಗಮನಹರಿಸುತ್ತೇವೆ. ಇದು ಸಹಜ ಕೂಡ. ನಮಗೆ ಆರೋಗ್ಯವೆಂದರೆ ಹೇಳಲಾಗಿರುವುದು ದೈಹಿಕ ಆರೋಗ್ಯ ಮಾತ್ರ. ಆದರೆ ಮಾನಸಿಕ ಆರೋಗ್ಯವು ಸರಿಯಾಗಿ ಇರದೆ ಇದ್ದರೆ ಆಗ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವು ಸರಿಯಾಗಿದ್ದರೆ ಮಾತ್ರ ಮನುಷ್ಯನ ಜೀವನವು ಸುಖಕರವಾಗಿ ಇರಲು ಸಾಧ್ಯ.
ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಆಚರಿಸುವ ಉದ್ದೇಶವೆಂದರೆ ಪ್ರಪಂಚದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯತ್ನಗಳನ್ನು ಸಜ್ಜುಗೊಳಿಸುವುದು. ಈ ವರ್ಷ ಮಾನಸಿಕ ಆರೋಗ್ಯವು ಪ್ರಪಂಚದಾದ್ಯಂತ ಹೆಚ್ಚು ಚರ್ಚಿಸಲ್ಪಟ್ಟ ವಿಷಯವಾಗಿದೆ. ಏಕೆಂದರೆ ಮಾರಣಾಂತಿಕ ಕೊರೊನಾ ವೈರಸ್ ವ್ಯಾಪಕವಾಗಿದ್ದರಿಂದ ಇದು ಜನರ ಜೀವನದ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರಿದೆ.ನಮ್ಮಂತಹ ನ್ಯಾಯದೀಶರಿಗೂ ಕೂಡಾ ಮಾನಸಿಕ ಒತ್ತಡದಿಂದ ಬದುಕುತ್ತಿದ್ದೇವೆ ಎಂದರು.
ಪ್ರಾರ್ಥನಾ ಗೀತೆಯನ್ನು ಉಮಾದೇವಿ, ಸರಸ್ವತಿ ಹಾಡಿದರು. ಈ ಸಂದರ್ಭದಲ್ಲಿ ಹನುಮಂತರೆಡ್ಡಿ ಮುಖ್ಯ ವೈದ್ಯಾಧಿಕಾರಿಗಳು,ವೀರೇಶ್ ಚಿಂಚರಿಕಿ ವಕೀಲರ ಸಂಘದ ಕಾರ್ಯದರ್ಶಿಗಳು, ಆಶಾ ಕಾರ್ಯಕರ್ತರು,ಸಾರ್ವಜನಿಕ ಆಸ್ಪತ್ರೆಗಳು ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
