ಸಿಂಧನೂರು :ಕಾಂಗ್ರೆಸ್ಸನ್ನು ಹೊಡೆದು ಮೂರು ಬಾಗಿಲುಗಳನ್ನಾಗಿ ಮಾಡಿದ್ದಾರೆ ಸಚಿವ ಶ್ರೀರಾಮುಲು.
ಭಾರತೀಯ ಜನತಾ ಪಾರ್ಟಿ ಕಾರ್ಯಾಲಯಕ್ಕೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಬಿ. ಶ್ರೀರಾಮುಲು ಅವರು ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಸಿಂಧನೂರು ತಾಲೂಕಿನ ಕೊಪ್ಪಳಕ್ಯಾಂಪ್ ಗೆ ಬಸ್ ಸೌಕರ್ಯ ಇಲ್ಲದಿರುವುದರಿಂದ 3 ಕಿ. ಮೀ. ಶಾಲಾ-ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುವುದನ್ನು ಮನಗಂಡು ಕೂಡಲೇ ಬಸ್ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನೂ 12 ಸಾವಿರ ಹುದ್ದೆಗಳು ಬಾಕಿಯಿವೆ ಆದಷ್ಟು ಬೇಗ ಭರ್ತಿ ಮಾಡುವ ಕೆಲಸ ನಮ್ಮ ಸರ್ಕಾರ ಮಾಡುತ್ತೆವೆ ಎಂದರು. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಸ್‌ಟಿ 7.5%ಮೀಸಲಾತಿ ನೀಡದಿದ್ದರೆ ಪರಿಶಿಷ್ಟ ಪಂಗಡ ಸಚಿವರು, ಸಂಸದರು, ಶಾಸಕರು ರಾಜೀನಾಮೆ ನೀಡುತ್ತೇವೆ ಎಂದು ಗಡುವು ನೀಡಿದ್ದೀರಿ , ಈಗ ನಿಮ್ಮದೆ ಸರ್ಕಾರ ನೀವೇ ಸಚಿವರಾಗಿರುವುದರಿಂದ 7.5% ಮೀಸಲಾತಿ ಸಿಗುತ್ತಿಲ್ಲ. ನೀವು ಏಕೆ ರಾಜೀನಾಮೆ ನೀಡಿ ಹೋರಾಟ ಮಾಡುತ್ತಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಮೀಸಲಾತಿಗಾಗಿ ಅಂದು ನಾನೇ ಹೋರಾಟದ ನೇತೃತ್ವ ವಹಿಸಿದ್ದೆ. ಇಂದು ಸಹ ನಾನು ಹೋರಾಟ ಮಾಡುತ್ತಿದ್ದು, ತಾಂತ್ರಿಕ ಕಾರಣದಿಂದ ಮೀಸಲಾತಿ ಘೋಷಣೆ ವಿಳಂಬವಾಗುತ್ತಿದೆ. ಮೀಸಲಾತಿಗಾಗಿ ರಾಜೀನಾಮೆ ನೀಡುವುದೊಂದೆ ಪರಿಹಾರವಲ್ಲ ಎಂದು ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರಿಗೆ ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ. ಆರ್‌ಎಸ್‌ಎಸ್ ದೇಶವನ್ನು ಕಟ್ಟುವ ಕೆಲಸ ಮಾಡುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರೇ, ತಾಲಿಬಾನ್‌ನಲ್ಲಿ ಆಗುತ್ತಿದ್ದ ಪರಿಸ್ಥಿತಿ ರಾಜ್ಯದಲ್ಲೂ ಆಗುತ್ತಿತ್ತು. ಆರ್‌ಎಸ್‌ಎಸ್ ದೇಶಭಕ್ತಿಯಿಂದಾಗಿ ಭಾರತವು ಸುರಕ್ಷಿತವಾಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಆಪ್ತರ ಮೇಲಿನ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿ ಹೊಸದೇನಲ್ಲ. ಇಂದು ಅವರ ಮೇಲೆ, ನಾಳೆ ಮತ್ತೊಬ್ಬರ ಮೇಲೆ ನಡೆಯಬಹುದು, ಬಿಜೆಪಿ ಕೊಲೆಗಡುಕ ಸರ್ಕಾರವೆಂದು ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತಾರೆ. ಪಂಜಾಬ್ ಮಾದರಿ ಕಾಂಗ್ರೆಸ್ ಮಾಡಲು ಹೊರಟ್ಟಿದ್ದಾರೆ . ಪಂಜಾಬ್‌ನಲ್ಲಿ ಒಬ್ಬ ಸಿದ್ದು, ಕರ್ನಾಟಕದಲ್ಲೂ ಒಬ್ಬ ಸಿದ್ದು ಇದ್ದಾರೆ. ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿಯಾಗಿದ್ದರೇ, ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿ ಬರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಾಗಿ ದಲಿತ, ಕುರುಬ, ಒಕ್ಕಲಿಗರ ಸಮುದಾಯಗಳ ಕೂಗು ಕಾಂಗ್ರೆಸ್ಸನ್ನು ಹೊಡೆದು ಮೂರು ಬಾಗಿಲುಗಳನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೊಲ್ಲಾ ಶೇಷಗಿರಿರಾವ್ ಅವರು ಸಚಿವ ಶ್ರೀರಾಮುಲು ಅವರಿಗೆ ಸನ್ಮಾನಿಸಿದರು.ಅಮರೇಗೌಡ ವಿರುಪಾಪುರ, ಎನ್.ಶಿವನಗೌಡ ಗೊರೆಬಾಳ, ಮಧ್ವರಾಜ ಆಚಾರ್ಯ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಹನುಮೇಶ್ ಸಾಲಗುಂದ, ನಗರ ಮಂಡಲ ಅಧ್ಯಕ್ಷರಾದ ಪ್ರೇಮ ಸಿದ್ಧಾಂತಿಮಠ, ಜಿಲ್ಲಾ ಕಾರ್ಯದರ್ಶಿಗಳಾದ ಶೈಲಜಾ ಷಡಕ್ಷರಪ್ಪ,ಎಂ. ದೊಡ್ಡ ಬಸವರಾಜ್, ಹನುಮಂತಪ್ಪ ಪುಲದಿನ್ನಿ, ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು, ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
