ಸಿಂಧನೂರು : ವನಸಿರಿ ತಂಡದಿಂದ ಬೇವಿನ ಗಿಡಗಳಿಗೆ ಕೀಟನಾಶಕ ಔಷಧಿ ಸಿಂಪರಣೆ.
ಪರಿಸರಕ್ಕೆ ಇದೆ ಮೊದಲು ಅನಿಸುತ್ತಿದೆ ಕೀಟನಾಶಕ ಔಷಧಿ ಸಿಂಪರಣೆ ಮಾಡುತ್ತಿರುವುದು.
ರೋಗ ನಿರೋಧಕ ಶಕ್ತಿಯುಳ್ಳ ಬೇವಿನ ಗಿಡಗಳಿಗೆ ರೋಗ ಬಂದಿದ್ದಕ್ಕೆ ಪರಿಸರ ಪ್ರೇಮಿಯಾದ ನಮಗೆ ನೋವುಂಟಾಗಿದೆ. ಈ ದಿನ ರಸ್ತೆಯ ಎರಡೂ ಬದಿಯಲ್ಲಿ ಇರುವ ಬೇವಿನ ಗಿಡಗಳಿಗೆ ECOGVARD ಮತ್ತು SAAF ಕೀಟನಾಶಕವನ್ನು ಸಿಂಧನೂರು ತಾಲೂಕಿನ ಮಲ್ಲಾಪೂರು ಗ್ರಾಮದಲ್ಲಿ ಬೇವಿನ ಗಿಡಗಳಿಗೆ ರೋಗ ನಿರೋಧಕ ಔಷಧಿ ಸಿಂಪರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೇವಿನ ಗಿಡಕ್ಕೆ ಯಾವುದೇ ರೀತಿಯಲ್ಲಿ ತೊಂದ್ರೆ ಆಗಬಾರದು ಎಂದು ಈ ದಿನ ಕೀಟನಾಶಕ ಸಿಂಪರಣೆ ಮಾಡಿ ಬೇವಿನ ಗಿಡ ರಕ್ಷಣೆ ಮಾಡಲಾಗುತ್ತಿದೆ.ವನಸಿರಿ ತಂಡ ಯಾವಾಗಲು ಪರಿಸರ ಉಳಿವಿಗಾಗಿ ದುಡಿಯಲು ಸದಾಸಿದ್ದರಿರುತ್ತೇವೆ. ರೋಗ ನಿರೋಧಕ ಶಕ್ತಿ ಇರುವಂತಹ ಬೇವಿನ ಗಿಡಕ್ಕೂ ಕೂಡ ರೋಗ ತಗುಲಿದೆ. ಗಿಡಗಳ ಎಲೆಗಳು ಒಣಗಿದೆ ಅನ್ನೋತರ ಕಾಣುತ್ತೆ ಆದರೆ ಅದು ಒಣಗಿರುವುದಿಲ್ಲ. ಮುಂಬರುವ ಹವಾಮಾನ ಬದಲಾವಣೆ ಬೇಸಿಗೆ ಕಾಲದಲ್ಲಿ ಚಿಗುರು ಬಂದೆ ಬರುತ್ತದೆ.
ದಯವಿಟ್ಟು ಬೇವಿನಗಿಡಗಳನ್ನು ಯಾರು ಕಡಿಬೇಡಿ ಎಂದು ರೈತರಲ್ಲಿ, ಪರಿಸರ ಪ್ರೇಮಿಗಳಲ್ಲಿ ಅಮರೇಗೌಡ ಮಲ್ಲಾಪೂರು ವನಸಿರಿ ಸಂಸ್ಥಾಪಕರು ಮನವಿ ಮಾಡಿದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
