ಸಿಂಧನೂರು :ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ದಿವಂಗತ ವೀರರಾಘವಲು ಕುಟುಂಬದಿಂದ ಮಹಾಪ್ರಸಾದ.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ )ಹರೇಟನೂರು ಕಾರುಣ್ಯ ನೆಲೆವೃದ್ದಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಕಾರುಣ್ಯ ಕುಟುಂಬದ ನಿರಂತರ ಮಾರ್ಗದರ್ಶಕರು, ಶ್ರೀ ದಿ.ಯು. ವೀರರಾಘವುಲು ಇವರು ದಿನಾಂಕ 4-9-2021ರಂದು ಶ್ರೀಮತಿ ದಿ.ಶ್ರೀ ವೀರ ಲಕ್ಷ್ಮಿಸತ್ಯನಾರಾಯಣ ಇವರು ದಿನಾಂಕ 11-11-2020 ರಂದು ನಮ್ಮನ್ನೆಲ್ಲಾ ಅಗಲಿ ಶಿವನ ಸನ್ನಿಧಿ ಸೇರಿದ್ದಾರೆ.ಇವರುಗಳ ಪುಣ್ಯರಾಧನೆಯನ್ನು ಅವರ ಕುಟುಂಬದವರಾದ ಶ್ರೀ ಸತ್ಯನಾರಾಯಣ (Developement Officer LIC Sindhanuru ) ಅವರು ದಿವಂಗತರುಗಳ ಪುಣ್ಯಸ್ಮರಣೆಯ ಅಂಗವಾಗಿ ಆಶ್ರಮಕ್ಕೆ ಮೂರು ಫ್ಯಾನ ಗಳನ್ನು ವಿತರಿಸಿ,ಅಶ್ರಮದಲ್ಲಿ ಮಹಾಪ್ರಸಾದ ಮಾಡಿಸಿ ಎಲ್ಲಾ ವೃದ್ಧರಿಗೆ ಹಾಗೂ ಬುದ್ಧಿಮಾಂದ್ಯರಿಗೂ ಹಣ್ಣು ಹಂಪಲಗಳನ್ನು ವಿತರಿಸಿ ಶ್ರೀ ದಿವಂಗತ.ಯು.ವೀರರಾಘವುಲು ಹಾಗೂ ಶ್ರೀ ದಿವಂಗತ ಶ್ರೀ ವೀರ ಲಕ್ಷ್ಮಿ ಸತ್ಯನಾರಾಯಣ ಅವರುಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಣ್ಯರಾಧನೆಯನ್ನು ನೆರವೇರಿಸಿದರು.
ಈ ಸಮಯದಲ್ಲಿ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರು ಭಗವಂತನಲ್ಲಿ ಪ್ರಾರ್ಥನೆ ಮಾಡಿ ಶ್ರೀ ದಿ.ಯು.ವೀರರಾಘವುಲು ಹಾಗೂ ದಿವಂಗತ ಶ್ರೀ ವೀರಲಕ್ಷ್ಮಿ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿ ಅವರ ಕುಟುಂಬದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಬೇಡಿಕೊಂಡು ಮಹಾ ಪ್ರಸಾದ ಸೇವಿಸಿ ಅವರ ಕುಟುಂಬಕ್ಕೆ ಆಶೀರ್ವದಿಸಿದರು.
ಈ ಸಮಯದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಶ್ರೀ ಚನ್ನಬಸವ ಸ್ವಾಮಿ ಹಿರೇಮಠ , ಮೇಲ್ವಿಚಾರಕರಾದ ಶ್ರೀಮತಿ ಸುಜಾತ ಚನ್ನಬಸವಸ್ವಾಮಿ ಹಿರೇಮಠ, ಶ್ರೀ ದಿ.ಯು. ವೀರರಾಘವಲು ಹಾಗೂ ದಿ. ಶ್ರೀ ವೀರ ಲಕ್ಷ್ಮಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಅವರ ಕುಟುಂಬಕ್ಕೆ ಧನ್ಯವಾದಗಳನ್ನು ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
