ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಲಿಂಗನಹಳ್ಳಿ ಕೊಮ್ಮನಪಟ್ಟಿ ಸೇರಿದಂತೆ ಸುತ್ತಲಿನ ಜನರ ನಿದ್ದೆಗೆಡಿಸಿದ್ದ ಚಿರತೆಯು ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಹೌದು..ಹಾನಗಲ್ ಗ್ರಾಮದ ರಾಷ್ಟೀಯ ಹೆದ್ದಾರಿ ಸಮೀಪದ ಗ್ರಾಮಾಂತರ ಪ್ರೌಢಶಾಲೆ ಸಮೀಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ 6:00 ಗಂಟೆ ಸಮಯದಲ್ಲಿ ಬೋನು ಹಾಕಿದ್ದರು. ಚಿರತೆಯು ಶನಿವಾರ ಬೆಳಿಗ್ಗೆ 4:00 ಸಮಯದಲ್ಲಿ ಬೋನಿಗೆ ಬಿದ್ದಿದೆ, ಅರಣ್ಯಾಧಿಕಾರಿಗಳು ಬೋನಿನಲ್ಲಿರುವ ಚಿರತೆಯನ್ನು ಸುರಕ್ಷಿತವಾಗಿ ಮೊಳಕಾಲ್ಮೂರು ಪಟ್ಟಣದಲ್ಲಿರುವ ನರ್ಸರಿಗೆ ಕೊಂಡೊಯ್ದಿದ್ದಾರೆ. ಚಿರತೆಯು ಸುತ್ತಲಿನ ಗ್ರಾಮಗಳಲ್ಲಿರುವ ಕುರಿ-ಮೇಕೆ ಕೋಳಿ ನಾಯಿಗಳ ಮೇಲೆ ನಿತ್ಯವೂ ದಾಳಿ ಮಾಡುತ್ತಿತ್ತು ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದರು. ತಕ್ಷಣವೇ ಕಾರ್ಯೋನ್ಮುಖರಾದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನಗಳನ್ನು ಆದರಿಸಿ ಚಿರತೆ ಬರುವ ದಾರಿಯಲ್ಲಿ ಬೋನು ಹಾಕಿ ಚಿರತೆ ಸೆರೆ ಹಿಡಿಯಲು ಕಾದುಕುಳಿತಿದ್ದರು. ಇಂದು ಮುಂಜಾನೆಯೇ ಚಿರತೆಯು ಸೆರೆಯಾಗಿದ್ದು ಸುತ್ತಲಿನ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಒಂದೂವರೆ ವರ್ಷ ವಯಸ್ಸಿನ ಹೆಣ್ಣು ಚಿರತೆಯಾಗಿದ್ದು ಇದೀಗ ಪಟ್ಟಣದ ನರ್ಸರಿಯಲ್ಲಿ ಆರೋಗ್ಯವಾಗಿದೆ. ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಹಸನ್ ಭಾಷಾ ಸಿಬ್ಬಂದಿಗಳಾದ ಶಿವರಾಜ್ ಚಾಂದ್ ಬಾಷಾ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
