ಹಳೇಕೋಟೆ ಗ್ರಾಮ ಪಂಚಾಯಿತಿಯಲ್ಲಿ ಗಾಂಧೀಜಿ ಮತ್ತು ಶಾಸ್ತ್ರಿ ಯವರ ಜಯಂತಿ ಅಚರಣೆ*
ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಮತ್ತು ದೇಶದ ಮಾಜಿ ಪ್ರಧಾನಿ ಶಾಂತಿದೂತ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾರೇಮ್ಮಮಾರೇಪ್ಪರವರ ನೇತೃತ್ವದಲ್ಲಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿವುದರ ಮುಖಾಂತರ ಅಚರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶಂಕ್ರಪ್ಪನವರು ಮಾತನಾಡಿ ಮಹಾತ್ಮಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಶಾಂತಿಯುತವಾಗಿ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿಯೆಂದು ಸ್ಮರಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಕೆ ವೀರೇಶ್ ರವರು ಮಾತನಾಡಿ ಮಹಾತ್ಮಗಾಂಧೀಜಿಯವರ ಜಯಂತಿ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಚರಣೆಗೆ ಮಾತ್ರ ಸೀಮಿತವಾಗಬಾರದು ಅವರ ಆದರ್ಶಗಳಂತೆ ಒಬ್ಬ ಮಹಿಳೆ ರಾತ್ರಿ 12 ಗಂಟೆಗೆ ನಿರ್ಭಯವಾಗಿ ತಿರುಗಾಡುತ್ತಾಳೊ ಅ ಕ್ಷಣದಿಂದ ನಿಜವಾದ ಸ್ವಾತಂತ್ರ್ಯ ದೊರಕಿದಂತೆ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಅಭಿವೃದ್ಧಿಯ ಕನಸು ಕಂಡವರು.ಶಾಸ್ತ್ರಿಯವರ ಜೈ ಕಿಸಾನ್ ಜೈ ಜವಾನ್ ವಾಕ್ಯವನು ಹೇಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.ಮತ್ತೊಬ್ಬ ಸದಸ್ಯರಾದ ಮರಿಸ್ವಾಮಿಯವರು ಮಾತನಾಡಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿಯವರ ಜಯಂತಿ ಪ್ರಯುಕ್ತ ಸ್ವಚ್ಚ ಭಾರತ ದಿನವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ ಈ ಒಂದು ದಿನಕ್ಕೆ ಸೀಮಿತವಾಗದೆ ತಿಂಗಳಲ್ಲಿ ಎರಡು ಮೂರು ಬಾರಿ ನಮ್ಮ ಗ್ರಾಮಗಳಲ್ಲಿ ಸ್ವಚ್ಚತೆ ಕಾರ್ಯಕ್ರಮ ಮಾಡುವ ಮೂಲಕ ರೋಗ ಮುಕ್ತ ಗ್ರಾಮ ಮಾಡಿ ಇತರರಿಗೆ ಮಾದರಿಯಾಗಬೇಕೆಂದು ತಮ್ಮ ಅಭಿಪ್ರಾಯ ಹೇಳಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಪ್ಪನವರು ಮಾತನಾಡಿ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಅಮ್ಯೂಲ ರತ್ನಗಳಿದ್ದಂತೆ ದೇಶದ ಏಳಿಗೆಗಾಗಿ ಇವರ ಪಾತ್ರ ಬಹಳ ಪ್ರಮುಖವಾಗಿದೆ ಇಬ್ಬರೂ ಶಾಂತಿಪ್ರಿಯರು ಅವರ ಆದರ್ಶಗಳನ್ನು ಪಾಲಿಸಿ ಅವರ ಕನಸು ನನಸು ಮಾಡೋಣವೆಂದು ಸಭೆಯಲ್ಲಿ ತಮ್ಮಅನಿಸಿಕೆ ತಿಳಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬಣ್ಣ.ಗುರುಸ್ವಾಮಿ. ಗಂಗಣ್ಣ.ತಾರನಗೌಡ.ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಾಳಿಂಗ.ವೀರಭದ್ರ.ಗ್ರಾಮದ ಹಿರಿಯರಾದ.ಹೊನ್ನಪ್ಪ. ಸರ್ದಾರಪ್ಪ.ಗಿರಿಯಪ್ಪ. ಯುವ ಮುಖಂಡ ಬಡಿಗೇರ ವೀರೇಶ್.ಕಾಕಿ ಸುರೇಶ್. ಅಯ್ಯಪ್ಪ.ಸಿಬ್ಬಂದಿ ವರ್ಗದವರಾದ.ಇ.ಎಸ್ ರೇವಣ್ಣ.ಚಾಂದಭಾಷ.
ವಿ.ರೇವಣ್ಣ.ನಾಗರಾಜ್. ದುರ್ಗಪ್ಪ.ಇನ್ನೂ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ಬಿಲ್ ಕಲೆಕ್ಟರ್ ನಾಗೇಂದ್ರರವರು ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ನೆನೆಯುತ್ತಾ ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಿದರು….

ವರದಿ. ವೀರೇಶ್, ಬಳ್ಳಾರಿ, ರೂರಲ್ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
