ಮೊಳಕಾಲ್ಮೂರು: ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚೈತನ್ಯ ಪಬ್ಲಿಕ್ ಹೈಸ್ಕೂಲ್ ನಲ್ಲಿ ಶನಿವಾರದಂದು ಗಾಂಧಿ ಯಂತಿ ಕಾರ್ಯಕ್ರಮವನ್ನು ಶಾಲಾ ಮಕ್ಕಳು ಭಕ್ತಿಯಿಂದ ಆಚರಿಸಿದರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಮಾಡಿ ರಘುಪತಿ ರಾಘವ ರಾಜಾರಾಮ್ ಗೀತೆ ಹಾಡುವ ಮೂಲಕ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಸರ್ವೋದಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ವನಿತಾ ಗಿರೀಶ್ ರವರು ಮಾತನಾಡಿ. ಈ ದೇಶದಲ್ಲಿ ಬ್ರಿಟಿಷರನ್ನು ಹೊರಹಾಕಲು ಸಾಕಷ್ಟು ಯುದ್ಧಗಳು ಉಗ್ರ ಹೋರಾಟಗಳು ನಡೆದಿವೆ. ಆದರೆ ಗಾಂಧೀಜಿಯವರು ಅಹಿಂಸಾ ಚಳುವಳಿ ಸತ್ಯಮಾರ್ಗ ಶಾಂತಿ ಮಾರ್ಗಗಳ ಮುಖಾಂತರ ಬ್ರಿಟಿಷರೊಂದಿಗೆ ಹೋರಾಟ ಮಾಡಿ ತಾಯ್ನಾಡಿನಿಂದ ಬ್ರಿಟಿಷರನ್ನು ಹೊರಹಾಕಿದರು. ಮಹಾತ್ಮ ಗಾಂಧಿಯವರ ಸರಳತೆ ಅಹಿಂಸೆ ಸತ್ಯಧರ್ಮ ತ್ಯಾಗ ಮನೋಭಾವ ಇವೆಲ್ಲ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವುದು ಗಾಂಧೀಜಿ ಅವರ ನಿಸ್ವಾರ್ಥ ದೇಶ ಸೇವೆಯು ಭಾರತೀಯರಿಗೆ ಸ್ಪೂರ್ತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಮಯ  ಚೈತನ್ಯ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾಗ್ಯ, ಶಿಕ್ಷಕರಾದ ಪ್ರಸನ್ನ ಸುರೇಶ್ ರಾಧಿಕಾ ರಾಧಮ್ಮ, ಗೀತಾ, ಅಶೋಕ್ ಅನಿತಾ ಪ್ರಿಯಾಂಕಾ ಅಲಿಮಾ ಸಾಬಿಯ, ಫರ್ಜಾನ ತಾಸಿನ್ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend