ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ ‘ಜೈ ಭೀಮ್’ ಬಹುನಿರೀಕ್ಷಿತ ಚಿತ್ರ
ಸಿನಿಡೆಸ್ಕ್: ತಮಿಳು ನಟ ಸೂರ್ಯ ಮತ್ತೊಂದು ಅದ್ಭುತವಾದ ಚಿತ್ರದೊಂದಿಗೆ ಸಿನಿ ಪ್ರೇಮಿಗಳ ಮುಂದೆ ಬಂದಿದ್ದು, ಸೂರರೈ ಪೋಟ್ರು ಚಿತ್ರದ ಯಶಸ್ಸಿನ ಬಳಿಕ ಇದೀಗ ಅವರ ಬಹುನಿರೀಕ್ಷಿತ ಚಿತ್ರ ‘ಜೈ ಭೀಮ್’ ಬಿಡುಗಡೆಯ ದಿನಾಂಕ ಪ್ರಕಟವಾಗಿದೆ.
ನವೆಂಬರ್ 2ರಂದು ಜೈ ಭೀಮ್ ಚಿತ್ರವು ಓಟಿಟಿ ಪಾರ್ಮ್ ನಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಮ್ ಗೆ ಭೇಟಿ ನೀಡಿ ಜೈ ಭೀಮ್ ಚಿತ್ರವನ್ನು ಚಿತ್ರಪ್ರೇಮಿಗಳು ವೀಕ್ಷಿಸಬಹುದಾಗಿದೆ. ಸದ್ಯ ಚಿತ್ರದ ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕವನ್ನು ನಟ ಸೂರ್ಯ ಬಿಡುಗಡೆ ಮಾಡಿದ್ದಾರೆ.
2ಡಿ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಸೂರ್ಯ ಹಾಗೂ ಅವರ ಪತ್ನಿ, ಖ್ಯಾತ ನಟಿ ಜ್ಯೋತಿಕಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಬುಡಕಟ್ಟು ಸಮುದಾಯಗಳ ಪರವಾಗಿ ಹೋರಾಡುವ ವಕೀಲನ ಪಾತ್ರದಲ್ಲಿ ನಟ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ದೇಶಾದ್ಯಂತ ಹೊಸ ದಾಖಲೆ ಬರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ರಜಿಶಾ ವಿಜಯನ್ ಅವರು ಮಹಿಳಾ ಪ್ರಧಾನ ಪಾತ್ರವನ್ನು ಮಾಡಲಿದ್ದಾರೆ. ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ, ರಾವ್ ರಮೇಶ್, ಲಿಜೋ ಮೋಲ್ ಜೋಸ್ ಮೊದಲಾದ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ಡಬ್ ಆಗಲಿದೆ ಎಂದು ಹೇಳಲಾಗಿದೆ….

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
