ಅತಿವೃಷ್ಟಿಯಿಂದ ಬೆಳೆ ಹಾನಿ
ಜೇವರ್ಗಿ ತಾಲೂಕಿನಾದ್ಯಂತ ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಜೇವರ್ಗಿ: ತಾಲೂಕಿನಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನಾದ್ಯಂತ ರೈತರು ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ರೈತರು ಸಾಲಸೋಲವನ್ನು ಮಾಡಿ ಹೊಲಕ್ಕೆ ಬೀಜ ಮತ್ತು ಗೊಬ್ಬರವನ್ನು ಖರೀದಿಸುವರು. ಉತ್ತಮ ಬೆಳೆಯನ್ನು ಬೆಳೆಯಬೇಕೆಂದು ಆಸೆಯಿಂದ ಹಗಲು-ರಾತ್ರಿಯೆನ್ನದೆ ಹೊಲದಲ್ಲಿಯೇ ಇದ್ದು ತಮ್ಮ ಶ್ರಮವನ್ನೆಲ್ಲ ಹಾಕುವ ಮೂಲಕ ಭೂಮಿಯನ್ನು ನಂಬಿಕೊಂಡು ಕೊಡುವರು. ಆದರೆ ಈ ವರ್ಷ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದ ಕೈಗೆ ಬಂದಫಸಲು ಗಳೆಲ್ಲ ಹಾಳಾಗಿ ಹೋಗುತ್ತಿವೆ.
ರೈತರು ತಮ್ಮ ಶ್ರಮವನ್ನೆಲ್ಲ ಹಾಗೂ ಹಣವನ್ನೆಲ್ಲ ತಮ್ಮ ಬೇಸಾಯಕ್ಕೆ ಹಾಕುವರು. ನಾವು ಭೂಮಿಗೆ ಹಾಕಿದ ಹಣ ನಮಗೆ ಮರಳಿ ಬರುವುದು ಎಂದು ಅವರು ಆಸೆಯಿಂದ ಸಾಲವನ್ನು ಮಾಡಿ ಹಗಲಿರುಳು ನುಡಿಯುವರು. ಆದರೆ ಆ ಬೆಳೆ ಸರಿಯಾಗಿ ಬೆಳೆದು ನಿಂತಿರುವಾಗಲೇ ವರುಣನ ಆರ್ಭಟ ಜೋರಾಗಿ ಬೆಳೆದ ಬೆಳೆ ಹಾಳಾಗುತ್ತಿದೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಕಾರಣ ಅವರು ನಂಬಿದ ಭೂಮಿ ಅವರಿಗೆ ಕೈಕೊಡುತ್ತಿದೆ ಎಂಬುದು ಅವರ ನೋವು. ಜೊತೆಗೆ ಸಾಲವನ್ನು ನೀಡಿದವರು ಮನೆಗೆ ಬಂದು ಪ್ರತಿನಿತ್ಯವೂ ಕಿರುಕುಳ ನೀಡುವವರು. ಅದರ ಜೊತೆಗೆ ಬ್ಯಾಂಕಿನವರದ್ದು ಕಿರಿಕಿರಿ ಇಂಥದರ ನಡುವೆ ಕುಟುಂಬವನ್ನು ನಿರ್ವಹಿಸಬೇಕು. ಇಂತಹ ಹಲವು ತೊಂದರೆಗಳು ಅನುಭವಿಸುವ ರೈತನಿಗೆ ಆತ್ಮಹತ್ಯೆ ಬಿಟ್ಟು ಮತ್ತೇನು ಯೋಚನೆ ಬರುವುದು.
ಸರಕಾರಗಳ ಆದರೂ ರೈತನ ಬೆಳೆ ಹಾನಿಯಾಗಿದೆ ಎಂದು ಅವನು ಬರಿಸಿದ ಹಣವನ್ನು ನೀಡುವುದಿಲ್ಲ. ಒಂದುವೇಳೆ ಆ ಬೆಳೆ ಪರಿಹಾರದ ಹಣ ನೀಡುವ ಸಮಯ ಬಂದರೂ ಅಧಿಕಾರಿಗಳು ಅದನ್ನು ನೀಡಲು ವಿಳಂಬ ಮಾಡುವರು. ರೈತರ ಗೋಳು ಕೇಳುವವರ್ಯಾರು. ಹಿಂದಿನ ಸರಕಾರಗಳು ರೈತರ ಪರವಾಗಿ ನಿಲ್ಲಬೇಕು ರೈತರ ಸಮಸ್ಯೆಯನ್ನು ಆಲಿಸಬೇಕು. ಕೇವಲ ತಮ್ಮ ಭಾಷಣಗಳಲ್ಲಿ ರೈತ ಈ ದೇಶದ ಬೆನ್ನೆಲುಬು ಎಂದು ಘೋಷಣೆ ಕೂಗುವರು ಭಾಷಣ ಮಾಡುವರು. ಅವರ ಈ ಕಾಳಜಿ ಕೇವಲ ಭಾಷಣಕ್ಕೆ ಹಾಗೂ ಜನರ ಎದುರಿಗೆ ಹೇಳುವ ಮಾತುಗಳಾಗಿವೆ ಅಷ್ಟೇ. ರೈತರ ತೊಂದರೆಗಳು ಇಲ್ಲಿಯವರೆಗೂ ನಿವಾರಣೆಯಾಗಿಲ್ಲ.
ಜೇವರ್ಗಿಯಲ್ಲಿ 6 ಎಕರೆ ಜಮೀನಿನಲ್ಲಿ ಕಟಾವಿಗೆ ಬಂದ ಕಬ್ಬು ವರುಣನ ಆರ್ಭಟಕ್ಕೆ ನೆಲಕ್ಕುರುಳಿದೆ ಸುಮಾರು ಐದರಿಂದ ಆರು ಲಕ್ಷ ರೂಪಾಯಿ ನಷ್ಟವಾಗಿದೆ. ಇಂತಹ ಅನೇಕ ರೈತರು ಬೆಳೆದ ಬೆಳೆಗಳು ಹಾಳಾಗಿವೆ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಸಿಗಬೇಕಾದ ಪರಿಹಾರಧನವನ್ನು ನೀಡಬೇಕು. ಹಾಗೂ ಎಷ್ಟೋ ರೈತರಿಗೆ ಬೆಳೆ ಪರಿಹಾರ ಸಿಗುವುದೇ ಗೊತ್ತಿರುವುದಿಲ್ಲ. ಅಂತಹ ರೈತರಿಗೆ ಅಧಿಕಾರಿಗಳು ಸರಕಾರದಿಂದ ಸಿಗುವ ಬೆಳೆವಿಮೆವನ್ನು ಮಾಡಿಸಿ ಅವರ ಕಷ್ಟಕ್ಕೆ ಸ್ಪಂದಿಸಬೇಕು.

ನಮ್ಮ ಭಾರತ ಕೃಷಿಗೆ ಹೆಸರುವಾಸಿಯಾಗಿದೆ ಆದರೆ ಆ ಕೃಷಿಕನಿಗೆ ಸರಿಯಾದ ನೆಲೆ ಇಲ್ಲ ಅವನು ಬೆಳೆದ ಬೆಳೆಗೆ ಬೆಲೆ ಇಲ್ಲ ಹೀಗಾದರೆ ಆ ರೈತ ಏನು ಮಾಡಬೇಕು ಸರಕಾರಗಳು ಹಲವು ಕಾಯ್ದೆಗಳನ್ನು ಕಾನೂನುಗಳನ್ನು ಜಾರಿಗೆ ತರುತ್ತಿವೆ ಇದರಿಂದ ರೈತರಿಗೆ ಲಾಭವೋ ನಷ್ಟವೋ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಈ ಕಾಯ್ದೆಯ ಪಕ್ಷದವರು ತಂದಿದ್ದಾರೆ ಇದು ಸರಿಯಾಗಿಲ್ಲ ಎಂದು ವಿರೋಧಪಕ್ಷದವರು ಹೇಳುವರು.
ಈ ವಿರೋಧಪಕ್ಷದವರ ಅಧಿಕಾರಕ್ಕೆ ಬಂದಾಗ ಇವರೊಂದು ಕಾಯ್ದೆ ತರುವರು ಸರಿಯಿಲ್ಲ ಎಂದು ಇನ್ನೊಂದು ಪಕ್ಷದವರು ಪ್ರತಿಭಟಿಸುವರು. ಇವರು ರೈತರ ಹೆಸರಿನ ಮೇಲೆ ರಾಜಕೀಯ ಮಾಡುವವರೇ ಹೊರತು ರೈತರಿಗೆ ಸಹಾಯ ಮಾಡುವವರಲ್ಲ.
ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಒಂದನ್ನು ಅರಿಯಬೇಕು ರೈತ ಇರದೇ ಹೋದರೆ ನಮ್ಮ ಬದುಕು ಶೂನ್ಯ. ರೈತ ನಿರದ ಈ ದೇಶ ಉಳಿಸಿಕೊಳ್ಳಲು ಸಾಧ್ಯವಿಲ್ಲ ನಮ್ಮ ಪ್ರತಿಯೊಂದು ದಿನನಿತ್ಯದ ಬಳಕೆಗೆ ಬೇಕಾಗುವ ಪ್ರತಿಯೊಂದು ವಸ್ತುವಿನ ಹಿಂದೆ ರೈತನ ಶ್ರಮವಿದೆ. ಅಂತಹ ರೈತರ ಕಷ್ಟಕ್ಕೆ ನಾವು ಸ್ಪಂದಿಸಲೇಬೇಕು. ಸರಕಾರಗಳು ರೈತರ ಪರವಾಗಿ ನಿಲ್ಲಬೇಕು ಹಾಗೂ ಅವರಿಗೆ ಅನುಕೂಲವಾಗುವಂತಹ ಕಾರ್ಯಗಳನ್ನು ರೂಪಿಸಬೇಕು ಆವಾಗ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗುತ್ತದೆ ಹಾಗೂ ವಿಶ್ವಕ್ಕೆ ಮಾದರಿ ದೇಶವಾಗುತ್ತದೆ.
” ನಾನು ಬೆಳೆದ ಕಬ್ಬು ಮಳೆಯಿಂದ ಸಂಪೂರ್ಣವಾಗಿ ಹಾಳಾಗಿದೆ ನನಗೆ ಸುಮಾರು5-6 ಲಕ್ಷ ರೂಪಾಯಿ ನಷ್ಟವಾಗಿದೆ ನಮ್ಮ ಗೋಳು ಯಾರಿಗೆ ಹೇಳಬೇಕು. ಸಂಬಂಧಪಟ್ಟ ಅಧಿಕಾರಿಗಳಾಗಲಿ ಸರಕಾರವಾಗಲಿ ನಮ್ಮಂತ ಕಷ್ಟದಲ್ಲಿರುವ ರೈತರ ಬಗ್ಗೆ ಗಮನಹರಿಸಬೇಕು ಹಾಗೂ ಪರಿಹಾರ ಬೇಗನೆ ಒದಗಿಸಬೇಕು .”

“ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ಇಲ್ಲ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರ ಪರಿಸ್ಥಿತಿ ಅತಿವೃಷ್ಟಿ ಯಾಗಿ ತೊಗರಿ ನಾಶ ಹತ್ತಿ ಬೆಳೆ ನಾಶ ಇದಕ್ಕೆ ಪ್ರತಿವರ್ಷ ಈ ಭಾಗದ ರೈತರ ಗೋಳ ಕೇಳುವರು ಯಾರು ಇಲ್ಲ ರೈತರ ಆತ್ಮಹತ್ಯೆ ಕಾರಣ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೇರ ಹೊಣೆ ರೈತರ ಜೀವನದ ಜೊತೆ ಆಟ ಆಡುತ್ತಿರುವ ಸರ್ಕಾರಗಳು ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದೆ ಯಾರು ಹೇಳಿದರು.ಕಳಪೆ ರಸಗೊಬ್ಬರ ಅನಧಿಕೃತ ಕೀಟನಾಶಕಗಳು ರೈತರಿಗೆ ಸರಕಾರ ನೀಡುತ್ತಿದ್ದು ನಕಲಿ ಕಂಪನಿಗಳ ಬೆನ್ನಿಗೆ ನಿಂತಿದೆ. ತಮ್ಮ ಸ್ವಾರ್ಥಕ್ಕೋಸ್ಕರ ರೈತರ ಜೀವನದ ಜೊತೆ ಆಟ ಆಡುತ್ತಿದ್ದಾರೆ….

ವರದಿ. ಬಸವರಾಜ್, ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
