;

ಕಾರುಣ್ಯ ನೆಲೆ ಬುದ್ದಿಮಾಂದ್ಯ ಆಶ್ರಮದಲ್ಲಿ ಕಲ್ಯಾಣಕುಮಾರರವರ ಹುಟ್ಟುಹಬ್ಬದ ಆಚರಣೆ…!!!

ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು, ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕರುನಾಡಿನ ಕಾರುಣ್ಯ ಕಣ್ಮಣಿ ಕುಟುಂಬದ ನಿರಂತರ ಮಾರ್ಗದರ್ಶಕರು ಕುಟುಂಬದ ಯಜಮಾನರಾದಂತಹ ಶ್ರೀ ಕಲ್ಯಾಣಕುಮಾರ ಗ್ರಾ.ಪಂ. ಸದಸ್ಯರು ಗಾಂಧಿನಗರ ಇವರ 26ನೇ ವರ್ಷದ ಹುಟ್ಟು ಹಬ್ಬವನ್ನು ಕಾರುಣ್ಯ ಆಶ್ರಮದಲ್ಲಿ ಮಹಾಪ್ರಸಾದ ಮಾಡಿಸಿ,ಎಲ್ಲಾ ವೃದ್ಧರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಬ್ರೆಡ್, ಬಿಸ್ಕಿಟ್, ಹಾಲು, ಹಣ್ಣು ಹಂಪಲುಗಳನ್ನು ವಿತರಿಸಿ ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಅವರ ಸ್ನೇಹಿತರುಗಳಾದ ಕರಿಯಪ್ಪ ಎಚ್. ಕೆ. ವೆಂಕಟೇಶ, ಸೋಮಶೇಖರ, ನಾಗರಾಜ ಹಾಗೂ ಎಲ್ಲಾ ಸ್ನೇಹ ಬಳಗ ಪಾಲ್ಗೊಂಡು ಶ್ರೀ ಕಲ್ಯಾಣ ಕುಮಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿದರು .

ಈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಎಲ್ಲಾ ವೃದ್ಧರು ಹಾಗೂ ಬುದ್ಧಿ ಮಾಂದ್ಯರು ದೇವರಲ್ಲಿ ಪ್ರಾರ್ಥನೆ ಮಾಡಿ ನಮ್ಮ ಕಾರುಣ್ಯ ಕುಟುಂಬದ ಯಜಮಾನರಾಗಿರುವ ಶ್ರೀ ಕಲ್ಯಾಣ ಕುಮಾರ ಅವರು ರಾಜಕೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಉನ್ನತ ಸ್ಥಾನಮಾನ ಗಳಿಸಿ ವಿಶ್ವಮಟ್ಟದಲ್ಲಿ ಉನ್ನತ ಸ್ಥಾನಮಾನವನ್ನು ಗಳಿಸಿ ಸಮಾಜದಲ್ಲಿನ ನಮ್ಮಂತಹ ಅನೇಕ ಹಲವಾರು ನೊಂದು ಬೆಂದ ಜೀವಿಗಳಿಗೆ ಆಶ್ರಯ ನೀಡಿ ಅನ್ನದಾತರಾಗುವಂತಹ ಇನ್ನು ಹೆಚ್ಚಿನ ಶಕ್ತಿಯನ್ನು ಕರುಣಿಸಲಿ ಎಂದು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿ ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತಾಧಿಕಾರಿ ಗಳಾದ ಶ್ರೀ ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು, ಮೇಲ್ವಿಚಾರಕರಾದ ಶ್ರೀ ಮತಿ ಸುಜಾತ ಚನ್ನಬಸವ ಸ್ವಾಮಿ ಹಿರೇಮಠ,ಕಲ್ಯಾಣ ಕುಮಾರ, ಅವರಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಿ ಹುಟ್ಟುಹಬ್ಬದ ಶುಭಾಶಯಗಳು ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;