ಸಿಂಧನೂರು : ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದಗೆ ಬಿಎಸ್ಪಿ ಬೆಂಬಲ.
ಸೆ. 27 ರಂದು ಹಲವು ರೈತ ಸಂಘಟನೆಗಳು ಒಗ್ಗೂಡಿ ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ಭಾರತ್ ಬಂದ್ ಗೆ ಕರೆ ನೀಡಿದ್ದು, ಸಿಂಧನೂರನಲ್ಲಿ ಬಂದನ್ನು ಯಶಸ್ವಿಗೊಳಿಸಲು ಬಹುಜನ ಸಮಾಜ ಪಕ್ಷ ಸಂಪೂರ್ಣ ಬೆಂಬಲವಿದೆ.
ಸದರಿ ಕೃಷಿ ಮಸೂದೆಗಳಲ್ಲಿ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತಹ ಹತ್ತಾರು ಅಂಶಗಳನ್ನು ಒಳಗೊಂಡಿದ್ದು ,ಈ ಕೃಷಿ ಕಾಯ್ದೆಗಳನ್ನು ಬಹುಜನ ಸಮಾಜಪಕ್ಷ ವಿರೋಧಿಸುತ್ತಿದ್ದು ಭಾರತ್ ಬಂದ್ ಅನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ .ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಕೈಬಿಡಬೇಕು
ಎಂದು ರಾಷ್ಟ್ರೀಯ ಪಕ್ಷವಾದ ಬಹುಜನ ಸಮಾಜ ಪಾರ್ಟಿ ಸಂಪೂರ್ಣ ಬೆಂಬಲ ಸೂಚಿಸಿದೆ ಬಂದಲ್ಲಿ ಭಾಗವಹಿಸುವದಾಗಿ ತಾಲೂಕು ಅಧ್ಯಕ್ಷ ಹುಲುಗಪ್ಪ ಮಲ್ಕಾಪೂರು ಪತ್ರಿಕೆ ಹೇಳಿಕೆ ನೀಡಿದ್ದಾರೆ .
ಈ ಸಂದರ್ಭದಲ್ಲಿ ಚೆನ್ನಪ್ಪ ಅಮಿನಗಡ ನಗರ ಘಟಕದ ಅಧ್ಯಕ್ಷರು, ದೊಡ್ಡಬಸವ ಬೂದಿವಾಳ ಪ್ರಧಾನ ಕಾರ್ಯದರ್ಶಿಗಳು,ವೀರೇಶ್ ಹಂಚಿನಾಳ ಜಿಲ್ಲಾ ಉಪಾಧ್ಯಕ್ಷರು,ಸಂತೋಷ್ ಏಳುರಾಗಿಕ್ಯಾಂಪ್,ಅಬ್ದುಲ್ ಸಾಬ ಏಳುರಾಗಿಕ್ಯಾಂಪ್, ಎಸ್ಐ ಸಾಲಗುಂದ ಹನುಮಂತಪ್ಪ ಟೈಲರ್ ಬೂದಿವಾಳ ಕ್ಯಾಂಪ್ .
ತಿಮ್ಮಣ್ಣ ಮಲ್ಕಾಪುರ್ ಇನ್ನಿತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
