ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಹಿರೇಹಳ್ಳಿ ಬಳಿಯಿರುವ ಟೋಲ್ ಗೇಟ್‌ನಲ್ಲಿ ವಾಹನಗಳ ಸಂಚಾರದ ಸೇವಾ ಶುಲ್ಕ ಹೆಚ್ಚುವರಿಯಾಗಿ ಕಟ್
ಆಗುತ್ತಿರುವುದನ್ನು ಸರಿಪಡಿಸುವಂತೆ ಆಗ್ರಹಿಸಿ ಇಂದು ಮೊಳಕಾಲ್ಮುರು ತಾಲೂಕಿನ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಟೋಲ್‌ನಲ್ಲಿ ಧರಣಿ ನಡೆಸಿದ್ದಾರೆ. ಟೋಲ್‌ನಲ್ಲಿ ಸರಿಯಾಗಿ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಈ ಹೆದ್ದಾರಿಯಲ್ಲಿ ಸಂಚಾರಿಸುವ ವಾಹನಗಳ ಪಾಸ್ ಟ್ಯಾಗ್ ಖಾತೆಯಿಂದ ಹೆಚ್ಚುವರಿ ಶುಲ್ಕ ಹೋಗುತ್ತಿದೆ ಮತ್ತು ಒಮ್ಮೆ ಕಾರು ಹೋದಮರು ದಿನ ಸಹಾ ೫೫ ರೂ. ಶುಲ್ಕ ಕಟ್ ಆಗಿದೆ. ಸೆ.2ರಂದು ನಮ್ಮ ಕಾರು ಟೋಲ್‌ನಿಂದ ಪಾಸ್ ಆಗಿದೆ. ಆದರೆ, ಮಾರು ದಿನ ಸೆ.೮ರಂದು ಮತ್ತೆ ೫೫ ರೂ. ಶುಲ್ಕ ಕಟ್ ಆಗಿದೆ ಎಂದು ಆರೋಪಿಸಿ ಧರಣಿ ನಡೆಸಿದರು. ಟೋಲ್‌ನಲ್ಲಿ ಒಮ್ಮೆವಾಹನ ಹೋಗಿ ಮರಳಿ ೨೪ ಗಂಟೆಯೊಳಗೆ ವಾಪಾಸ್ ಹೋದಲ್ಲಿ ೫೫ ರೂ. ಕಾರಿನ ಶುಲ್ಕದಲ್ಲಿ ೩೦ ರೂ. ಕಟ್ ಆಗಬೇಕು. ಆದರೆ, ೫೫ ರೂ. ಹೋಗುತ್ತಿದೆ. ಹೀಗೆ ಸಾಕಷ್ಟು ವಾಹನಗಳ ಮಾಲೀಕರ ಹಣ ಹೋಗಿದೆ. ಹೈವೇಯಲ್ಲಿ ದೂರದಿಂದ ಹೋಗುವ ವಾಹನಗಳ ಮಾಲೀಕರು ಮತ್ತೆ ಬಂದು ಕೇಳಲು ಆಗದೆ, ಟೋಲ್‌ನಲ್ಲಿ ನಡೆಸುತ್ತಿರುವ ಅನ್ಯಾಯದ ಬಗ್ಗೆ ಶಾಪ ಹಾಕುತ್ತಿದ್ದಾರೆ ಎಂದು ಮೊಳಕಾಲ್ಮುರಿನ ದಸಂಸದ ಸಂಚಾಲಕ ಕೊಂಡಪುರ ಮರಮೇಶ್ವರಪ್ಪ, ಡಿ.ಬಿ. ಬಸವರಾಜು, ಉಮೇಶ್, ರಮೇಶ್ ಆರೋಪಿಸಿದ್ದಾರೆ…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
