ಗರ್ಭಿಣಿ ಬಾಣಂತಿಯ ಪೋಷಣ ಮಾಸಾಚರಣೆಯಗರ್ಭಿಣಿ ಬಾಣಂತಿಯ ಪೋಷಣ ಮಾಸಾಚರಣೆಯ ಕಾರ್ಯಕ್ರಮವನ್ನುಆಚರಣೆ ಮಾಡಲಾಯಿತು…!!!

ಗರ್ಭಿಣಿ ಬಾಣಂತಿಯ ಪೋಷಣ ಮಾಸಾಚರಣೆಯ

ಕೂಡ್ಲಿಗಿ:ತಾಲೂಕಿನ ಸೂಲದಹಳ್ಳಿ ಗ್ರಾಮದಲ್ಲಿ ಪೋಷಣ ಮಾಸಾಚರಣೆಯ ಕಾರ್ಯಕ್ರಮವನ್ನುಶ್ರೀ ಸಿದ್ಧ ಬಸಪ್ಪನವರು ನೆರವೇರಿಸಿದರು .ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಅನ್ನಪೂರ್ಣ ಪ್ರಾಸ್ತಾವಿಕ ನುಡಿಯನ್ನು ಗರ್ಭಿಣಿ ಬಾಣಂತಿಯರ ಇಂಥ ಕಾರ್ಯಕ್ರಮವನ್ನು ಸದುಪಯೋಗ     ಪಡಿಸಿಕೊಂಡು ಸ್ಥಳೀಯವಾಗಿ ಸಿಗುವ ಆಹಾರ ಧಾನ್ಯಗಳನ್ನು ಹಣ್ಣು ತರಕಾರಿಗಳನ್ನು ಸೊಪ್ಪುಗಳನ್ನು ಬಳಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು   ಮಾಹಿತಿ ನೀಡಿದರು .ಮಕ್ಕಳ ಅಪೌಷ್ಠಿಕತೆಯನ್ನು ದೂರ ಮಾಡಲು ಗರ್ಭಿಣಿಯರು ಇಲಾಖೆಯಿಂದ ಸಿಗುವ ಮಾತೃವಂದನ ಮಾತೃ ಪೂರ್ಣ ಯೋಜನೆಯನ್ನು ಪಡೆಯುವಂತೆ ವಿನಂತಿಸಿದರು. ಮಕ್ಕಳ ಸಾವಿರ ದಿನಗಳ  ಅರೈಕೆಯನ್ನು ಮಾಡಿದಲ್ಲಿ ಯಾವುದೇ ಕಾಯಿಲೆಗೆ ಒಳಗಾಗದಂತೆ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಬೆಳವಣಿಗೆ ಆಗಲು ಹಸಿರು ಸೊಪ್ಪು ತರಕಾರಿಗಳನ್ನು ಕಾಲಮಾನಕ್ಕೆ ಸಿಗುವ ಹಣ್ಣು ಹಂಪಲವನ್ನು ಯಥೇಷ್ಟವಾಗಿ ಬಳಸಬೇಕೆಂದು ತಿಳಿಸಿದರು.ಗರ್ಭಿಣಿ ಬಾಣಂತಿಯರು ಕೋವಿದ್ ಲಸಿಕೆಯನ್ನು ಹಾಕಿಸಿಕೊಳ್ಳಲು ಹಾಗೂ  ಹಿಮೊಗ್ಲೋಬಿನ್ ಇಂಪ್ರೂಮೆಂಟ್ ಆಗಲು   ಮೊಳಕೆ ಬರಿಸಿದ ಕಾಳುಗಳನ್ನು ಉಪಯೋಗಿಸಲು  ವೈದ್ಯಾಧಿಕಾರಿಗಳಾದ ಶ್ರೀ ತ್ಯಾಗರಾಜ  ವಿವರಿಸಿದರು ಆರೋಗ್ಯಇಲಾಖೆಯ .LHVಶ್ರೀಮತಿ ಪೊನ್ನಮ್ಮ .ಮಂಜುನಾಥ ಸರ್  ಸಿಸ್ಟರ್ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರುಹಾಜರಿದ್ದರು  .ಮುಖ್ಯ ಗುರುಗಳಾದ ಶ್ರೀ ಲಿಂಗರಾಜ ಸರ್ಕಾರ ಕೈಗೊಂಡಿರುವ ಈ ಯೋಜನೆಯು ತುಂಬಾ ಉತ್ತಮವಾದದ್ದು ಇದು ಹಳ್ಳಿಗರ ಒಂದು  ಸೊಗಡಾಗಿದೆ  ಸೀಮಂತ ಕಾರ್ಯಕ್ರಮ ಗರ್ಭಿಣಿಯರಿಗೆ ಬಳೆ ಹಾಕಿಸುವ ಶಾಸ್ತ್ರ  ಅನ್ನ  ಪ್ರಸನ್ನ ಕಾರ್ಯಕ್ರಮ ತುಂಬಾ ಮುಖ್ಯವಾದುದು .ಇಂಥ ಕಾರ್ಯಕ್ರಮ ವನ್ನು ಗರ್ಭಿಣಿ ಬಾಣಂತಿಯರು ಸದುಪಯೋಗಪಡಿಸಿಕೊಂಡು ಆರೋಗ್ಯವೇ ಮಹಾಭಾಗ್ಯ ಎಂಬುವಂತೆ ಉತ್ತಮ ಮಕ್ಕಳನ್ನು ಪಡೆಯಲಿ  ಎಂದು ಹಾರೈಸಿದರು  ಸಹ ಶಿಕ್ಷಕರಾದ ದೊಡ್ಡಪ್ಪ ಸರ್ ಹಾಜರಿದ್ದರು .ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಿದೇವಿ ಅಧ್ಯಕ್ಷತೆ ವಹಿಸಿದ್ದರು .ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಹಾಜರಿದ್ದು  ಉತ್ತಮವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend