ನಿಡಗುಂದಿ, ನಿಡಗುಂದಿ, ಏನಿದು ನಿಡಗುಂದಿ ಗ್ರಾಮಪಂಚಾಯಿತಿ ಅವಾಂತರ, ಬರೀ ಭ್ರಷ್ಟಾಚಾರ ತುಂಬಿದ ಆಡಳಿತ ವ್ಯವಸ್ಥೆ ಬೇರೆ ಕಡೆ ಉದ್ಯೋಗ ಮಾಡುವವರ ಹೆಸರಲ್ಲಿ NMR ಅನ್ನು ಸೃಷ್ಟಿ ಮಾಡಿ ಬೋಗಸ್ ಮತ್ತು ಉದ್ಯೋಗ ಖಾತ್ರಿ ಹೆಸರಲ್ಲಿ ಬೇಕಾದಷ್ಟು ಹಣ ವ್ಯಯ ಹಾಗೂ ಬಾಲ ಕಾರ್ಮಿಕರ ಹೆಸರಲ್ಲಿ ಬಿಲ್ ಇದರ ಒಂದು ಸವಿಸ್ತಾರ ಸುದ್ದಿಯನ್ನು ಹಲವು ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿದರು ಸಹ ಬರೀ ಉಹಾಪೋಹಗಳ ರೀತಿಯಲ್ಲಿ ಸರ್ಕಾರಿ ಅಧಿಕಾರಗಳ ಅಮಾನತ್ತು ಇದು ಸರಿನಾ ಹೇಳಿ ಬರೀ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮಾತ್ರ ಶಿಕ್ಷೆನಾ ಇಲ್ಲಿ ನಡೆಯುತ್ತಿರುವ ರಾಜಕೀಯ ವ್ಯವಸ್ಥೆಯೇ ಬೇರೆ, ಅಲ್ಲಿನ ಹಾಲಿ ಹಾಗೂ ಮಾಜಿ ಸದ್ಯಸರುಗಳು ಸರ್ಕಾರದ ಹಣವನ್ನು ಕೊಳ್ಳೆ ಹೊಡೆದು ಬರೀ ತೋರಿಪಡಿಕೆಗೆ ಮಾತ್ರ ನಾವೇನು ಮಾಡಿಲ್ಲ ಎನ್ನುವಂತೆ ಬಿಂಬಿಸುವುದು ಎಷ್ಟು ಸರಿ ಹೇಳಿ ಹಲವಾರು ಸಮಾಜ ಕಾರ್ಯಕರ್ತರು ಹಾಗೂ ಮಾಹಿತಿ ಹಕ್ಕು ಹೋರಾಟಗಾರರು ಹಲವಾರು ರೀತಿಯಲ್ಲಿ ಹೋರಾಟ ಮಾಡಿದರು ವ್ಯರ್ಥ ಅಂದರೆ ಏನಿದು ನಮ್ಮ ರಾಜಕೀಯ ವ್ಯವಸ್ಥೆ ಸಾರ್ವಜನಿಕರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಒಂದು ನ್ಯಾಯಾನಾ ಬರೀ ಭ್ರಷ್ಟಾಚಾರ ತುಬಿರುವ ಒಂದು ಗ್ರಾಮಪಂಚಾಯಿತಿಯಲ್ಲಿ ಅಧಿಕಾರಿಗೆ ಶಿಕ್ಷೆಯಾದರೆ ಸರಿಹೋಗುವುದೇ ನೀವೇ ವಿಚಾರ ಮಾಡಿ ಅಲ್ಲಿರುವ ಕೆಲವು ಸದಸ್ಯರ ಹಾಗೂ ಗುತ್ತಿಗೆದಾರರ ಪರವಾನಿಗೆ ಹಾಗೂ ಅಧಿಕಾರದ ಒಂದು ಅವಧಿಯನ್ನು ಸ್ಥಗಿತಗೊಳಿಸಿದರೆ ಮಾತ್ರ ಸರಿಹೋಗಭಹುದೇನೋ ಎನ್ನುತ್ತಾರೆ ಅಲ್ಲಿನ ನೋವೊಂಡ ಸಾರ್ವಜನಿಕರು. ಹಲವು ರೀತಿಯಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವನ್ನು ಕೈಗೊಳ್ಳದೆ ಇರುವುದನ್ನು ನೋಡಿದರೆ ಸಾರ್ವಜನಿಕರಲ್ಲಿ ಹಲವು ಅನುಮಾನವನ್ನು ಸೃಷ್ಟಿ ಮಾಡುವುದರಲ್ಲಿ ಅನುಮಾನವಿಲ್ಲ ಬಿಡಿ ಮುಂದಿನ ನಡೆಯ ಪತ್ರವನ್ನು ನೀವೇ ಅವಲೋಕನವನ್ನು ಮಾಡಿಕೊಳ್ಳಿ…
ನೀವೇ ಕೇಳಿ ಸಾಮಾಜಿಕ ಕಾರ್ಯಕರ್ತ, ಮುಕ್ಕಣ್ಣ ಹುಲಿಗುಡ್ಡರವರ ಹೇಳಿಕೆಯನ್ನು ಕೇಳಿ.
ಇವರಿಗೆ,
ಕಾರ್ಯನಿರ್ವಾಹಕ ಅಧಿಕಾರಿಗಳು
ತಾಲೂಕ ಪಂಚಾಯತ ರಾಯಭಾಗ
ಬೆಳಗಾವಿ
ಕರ್ನಾಟಕ
ವಿಷಯ:- 2015 ರಿಂದ 2021 ರವರಗೆ ಸರ್ಕಾರದ ಯೋಜನೆಗಳ ಮನೆ ನಿರ್ಮಾಣ ಮಾಡುವುದರಲ್ಲಿ ನಕಲಿ ಧಾಖಲೆ ಸೃಷ್ಟಿಸಿ ಸರ್ಕಾರದ ಅನುದಾನ ದುರ್ಭಳಕೆ ಮಾಡಿದ ಬಗ್ಗೆ ದೂರು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ.
ಮಾನ್ಯರೆ,
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕ ನಿಡಗುಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿಡಗುಂದಿ, ನಾಗರಾಳ ಗ್ರಾಮದಲ್ಲಿ ಸನ್ 2015 ರಿಂದ ಸನ್ 2021 ರವರಗೆ ಸರ್ಕಾರದ ಯೋಜನೆಗಳ ಮನೆ ನಿರ್ಮಾಣ ಮಾಡುವುದರಲ್ಲಿ ನಕಲಿ ಧಾಖಲೆ ಸೃಷ್ಟಿಸಿ ಸರ್ಕಾರದ ಅನುದಾನ ದುರ್ಭಳಕೆ ಮಾಡಿದ್ದು ಅಂದ್ರೆ ಗ್ರಾಮ ಪಂಚಾಯ್ತಿ ಸದಸ್ಯರ ಸಂಭಂದಿ ಗಳ ಹೆಸರಿನಲ್ಲಿ ಮನೆ ಮಂಜೂರು ಮಾಡಿಕೊಂಡು ಮನೆ ನಿರ್ಮಾಣ ಮಾಡದೆ ಬೇರೆಯವರ ಮನೆ ಕಟ್ಟಡಗಳ ಮನೆ ಮುಂದೆ ಫೋಟೋ ತೆಗೆಸಿ ಲಗತ್ತಿಸಿ ಸರ್ಕಾರ ಕ್ಕೆ ವಂಚನೆ ಮಾಡಿದ್ದಾರೆ ಅದು ಅಲ್ಲದೆ ಒಂದೇ ಕುಟುಂಬದ ಸಂಬಂದಿ ಗಳ ಹೆಸರಿನಲ್ಲಿ ಮೂರು-ನಾಲ್ಕು ಮನೆ ಮಂಜೂರಿ ಮಾಡಿಕೊಂಡು (ಉದಾಹರಣೆಗೆ ತಾಯಿ, ಹೆಂಡತಿ, ಅಜ್ಜಿ, ತಮ್ಮನ ಹೆಂಡತಿ, ಅಣ್ಣನ ಹೆಂಡತಿ) ಹೀಗೆ ಒಂದೇ ಮನೆ ನಿರ್ಮಾಣ ಮಾಡಿ ಸರ್ಕಾರ ಕ್ಕೆ ವಂಚನೆ, ದ್ರೋಹ ಎಸಗಿದ್ದಾರೆ ಭ್ರಷ್ಟಾಚಾರ, ಅವ್ಯವಹಾರ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಹಣ ಲೂಟಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಮನೆ ಕಟ್ಟಡ ನಿರ್ಮಾಣದ ಪಾಲು ಸರ್ಕಾರದ MNRG ಯೋಜನೆ ಕೂಡ ನಕಲಿ ಹೆಸರಿನಲ್ಲಿ ಜಾಬ್ ಕಾರ್ಡ್ ಸೃಷ್ಟಿಸಿ ನರೇಗಾ ಹಣ ದುರ್ಭಳಕೆ ಮಾಡಿಕೊಂಡಿದ್ದಾರೆ ನಿಡಗುಂದಿ ಗ್ರಾಮ ಪಂಚಾಯ್ತಿ ಮಾಜಿ ಅದ್ಯಕ್ಷೆ ಸುರೇಖಾ ಮುರಗೆಪ್ಪ ವನಜೊಳೆ ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, (ಹಳೆಯ ದೇವೇಂದ್ರ ಎಸ್ ಕಾಂಬಳೆ ಈಗಿನ ಬಸಪ್ಪ ಎಸ್ ಕಾಂಬಳೆ) ಡಾಟಾ ಆಪರೇಟರ್, ಇಂಜಿನಿಯರ ಇವರೆಲ್ಲರು ಅಧಿಕಾರ ದುರ್ಭಳಕೆ ಮಾಡಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ಬಾಗಿಯಾಗಿದ್ದರಿಂದ ಇವರನ್ನು ಸಹ ತನಿಖೆಗೆ ಒಳಪಡಿಸಿ ಇವರ ಮೇಲೆ ದೂರು ದಾಖಲಿಸಿಕೊಂಡು ಗ್ರಾಮ ಪಂಚಾಯ್ತಿಯಲ್ಲಿ ಎಲ್ಲ ಮನೆಗಳು ನಿರ್ಮಾಣ ಮಾಡಿದರ ಬಗ್ಗೆ ಹಾಗೂ ನಕಲಿ ನರೇಗಾ ಜಾಬ್ ಕಾರ್ಡ್ ಬಗ್ಗೆ ನಿಡಗುಂದಿ ಗ್ರಾಮ ಪಂಚಾಯ್ತಿ ಯಲ್ಲಿ ಧಾಖಲೆ ಪಡೆದು ನಿಡಗುಂದಿ, ನಾಗರಾಳ ಗ್ರಾಮದಲ್ಲಿ ಮನೆಗಳನ್ನು ಪರಿಶೀಲಿಸಿ ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೆವೆ.
ಧನ್ಯವಾದಗಳು..

ಸ್ಥಳ:ನಿಡಗುಂದಿ
ದಿನಾಂಕ:19/09/2021…
ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
