ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಹೂಡೇಂ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಭಾನುವಾರ ದಂದು ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ರೇಷನ್ ವಿತರಣೆ ಮಾಡಲಾಯಿತು. ಹೌದು ಗ್ರಾಮೀಣ ಪ್ರದೇಶದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ಬಗೆಗಿನ ಅಪನಂಬಿಕೆ ಹಾಗೂ ವದಂತಿಗಳು ಹಿಂದೇಟಿಗೆ ಕಾರಣ. ಹೀಗಾಗಿ, 3ನೇ ಅಲೆ ತನ್ನ ಕರಾಳಮುಖ ಪ್ರದರ್ಶಿಸುವ ಮುನ್ನವೇ, ಶೇ.80ರಷ್ಟು ಲಸಿಕೆ ಹಾಕಿಸಿಕೊಂಡರೆ ಸೋಂಕಿನಿಂದ ಭಾರಿ ಪ್ರಮಾಣದ ಅಪಾಯ ತಪ್ಪಿಸುವಿಕೆ ಹಾಗೂ ಹರಡುವಿಕೆ ತಪ್ಪಿಸಬಹುದು ಎಂದು ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯಿಂದ ರೇಷನ್ ಅಂಗಡಿಯಲ್ಲಿ ಲಸಿಕೆ ಹಾಕಿಸಿಕೊಂಡ ವರಿಗೆ ಮಾತ್ರ ರೇಷನ್ ನೀಡಲಾಯಿತು. ಈ ಸಂಧರ್ಭದಲ್ಲಿ ಡಾ. ಶಿವಲಿಂಗಪ್ಪ ವೈದ್ಯಾಧಿಕಾರಿ, ಕಾರ್ಯದರ್ಶಿ ಚಂದ್ರಣ್ಣ, ಹಾಗೂ ಪೊಲೀಸ್ ಠಾಣೆಯ ಶಿವಕುಮಾರ್, ಬಿಲ್ ಕಲೆಕ್ಟರ್ ತಿಪ್ಪೆರುದ್ರಪ್ಪ, ಸಿದ್ದೇಶ್, ಆರೋಗ್ಯ ಇಲಾಖೆಯ ಧನಂಜಯ್, ಪ್ರೇಮ, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು….

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
