ಜಗಳೂರುಶಾಸಕರ ಎಸ್.ವಿ.ರಾಮಚಂದ್ರಪ್ಪನವರ ಸಮ್ಮುಖದಲ್ಲಿ ತೋರಣಗಟ್ಟೆ ಗ್ರಾಮದ ರೈತರ ಹೊಲದಲ್ಲಿ ತೊಗರಿ ಬೆಳೆಯ ಕುಡಿ ಚಿವುಟುವ ಕಾರ್ಯದಲ್ಲಿ ಕೃಷಿ ಇಲಾಖೆ…!!!

ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮುಂಗಾರು ಹಂಗಾಮಿನಲ್ಲಿ 3400 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಆಗಿದ್ದು ಮಳೆ ಕೊರೆತೆಯ ನಡುವೆಯು ನಳನಳಿಸುತ್ತಿದ್ದು, ಇನ್ನೂಂದೆಡೆ ಕೃಷಿ ಇಲಾಖೆ ಉತ್ತಮ ಇಳುವರಿಗಾಗಿ ತೊಗರಿ ಬೆಳೆಯ ಕುಡಿ ಚಿವುಟುವ ಪ್ರಚಾರ ಕೈಗೊಂಡಿದೆ
ಶಾಸಕ ಎಸ್ ವಿ ರಾಮಚಂದ್ರ ಸಮ್ಮುಖದಲ್ಲಿ ತಾಲ್ಲೂಕಿನ ತೊರಣಗಟ್ಟೆ  ಗ್ರಾಮದ ರೈತರ ಹೊಲಗಳಲ್ಲಿ ತೊಗರಿ ಬೆಳೆಯ ಕುಡಿ ಚಿವುಟುವ ಕಾರ್ಯದಲ್ಲಿ ಕ್ರಷಿ ಇಲಾಖೆ ಅಧಿಕಾರಿಗಳು ಭಾಗವಹಿಸಿ ರೈತರಿಗೆ ಸಲಹೆ ನೀಡುವರು.
ತಾಲ್ಲೂಕಿನಲ್ಲಿ ಮುಂಗಾರು ಆರಂಭ ಉತ್ತಮವಾಗಿತ್ತು, ಎಲ್ಲಾ ಬೆಳೆಗಳು ಸಮೃದ್ದವಾಗಿ ಬೆಳೆದು ನಂತರ ಆದರೆ ಆಗಸ್ಟ್- ಸೆಪ್ಟಂಬರ್‍ನಲ್ಲಿ ಮಳೆ ಕೊರೆತೆಯಿಂದ ಕೆಲ ಬೆಳೆಗಳು ಬಾಡುತ್ತಿವೆ ಆದರೆ ತೊಗರಿ ಬೆಳೆ ಹೊವು ಕಾಯಿ ಕಟ್ಟುವ ಹಂತ ತಲುಪಿ ನಳನಳಿಸುತ್ತದೆ.
ರೈತ ಮಂದಾಹಸ
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ತೊಗರಿ ಅಂತರ ಬೆಳೆ ಅಭಿಯಾನವನ್ನು ಕೃಷಿ ಇಲಾಖೆ ಹಮ್ಮಿಕೊಂಡು ರೈತರಿಗೆ ತೊಗರಿ ಬೆಳೆಯನ್ನು ಅಕ್ಕಡಿ ಬೆಳೆ ಹಾಗೂ ಪೂರ್ಣ ಪ್ರಮಾಣದ ಬೆಳೆಯಾಗಿ ಬೆಳೆಯಲು ಹಾಗೂ ಮುಂಗಾರು ಆರಂಭದಲ್ಲಿ ಶಾಸಕರು 3 ನಿಮಿಷದ ವಿಡಿಯೋದ ಮೂಲಕ ರೈತರಲ್ಲಿ ತೊಗರಿ ಬೆಳೆಯನ್ನು ಬೆಳೆಯಲು ವ್ಯಾಪಕವಾದ ಪ್ರಚಾರವನ್ನು ಮಾಡಿದ್ದರು ಇದರ ಪ್ರತಿಫಲವಾಗಿ ಇಂದು ತೊಗರಿ ಬೆಳೆದ ರೈತರ ಮುಖಗದಲ್ಲಿ ಮಂದಹಸ ಮೂಡುತ್ತಿದೆ.
3400 ಹೇಕ್ಟೆರ್ ಪ್ರದೇಶದಲ್ಲಿ ತೊಗರಿ
ತಾಲೂಕಿನಲ್ಲಿ ಕೃಷಿ ಇಲಾಖೆಯ ವ್ಯಾಪಕ ಪ್ರಚಾರದಿಂದ ಪ್ರಸಕ್ತ ಸಾಲಿನ ಕೆಲವು ರೈತರು ಅಕ್ಕೆಡಿ ಬೆಳೆಯಾಗಿ ಇನ್ನೂ ಕೆಲವು ರೈತರು ಪೂರ್ಣ ಪ್ರಮಾಣದ ಬೆಳೆಯಾಗಿ ತೊಗರಿಯನ್ನು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಿದ್ದಾರೆ.
ಕುಡಿ ಚಿವುಟಿದರೆ ಉತ್ತಮ ಇಳುವರಿ
ರೈತರು ತೊಗರಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಕೃಷಿ ಇಲಾಖೆಯು ಕುಡಿ ಚಿವುಟುವುದರ ಬಗ್ಗೆ ವ್ಯಾಪಾಕ ಪ್ರಚಾರವನ್ನು ತಾಲೂಕಿನಾದ್ಯಂತ ಮಾಡುತ್ತಿದೆ. ತೊಗರಿ ಗಿಡಗಳು 50-60 ದಿನಗಳ ಕಳೆದ ನಂತರ ಕುಡಿ ಚುವಟುವುದ್ದರಿಂದ ಗಿಡಗಳ ಎತ್ತರ ಕಡಿಮೆಯಾಗಿ ರೊಂಬೆ- ಕೊಂಬೆಗಳು ಜಾಸ್ತಿಯಾಗಿ ಹೂ ಮತ್ತು ಕಾಯಿ ಬಿಡುವ ಅವಧಿ ಹೆಚ್ಚಿಸಿ ನೀರೀಕ್ಷಿಸಿದ ಇಳುವರಿಗಿಂತ ಹೆಚ್ಚು ಇಳುವರಿ ಪಡೆಯಬಹುದು ಅಲ್ಲದೇ ಎತ್ತರ ಬೆಳೆಯಾದೆ ಗಾಳಿ ಮಳೆಗೆ ಗಿಡಗಳು ನೆಲಕ್ಕೆ ಉರಳುವುದಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಯ ಮೂಲಕ ರೈತರಿಗೆ ಮನವರಿಕೆ ಮಾಡುತ್ತಿದ್ದಾರೆ.

ಅಂತರ ಬೆಳೆಯಲ್ಲಿ ಒಂದು ಎಕರೆಗೆ 3-4 ಕ್ವಿಂಟಾಲ್
ತನು (ಪೂರ್ಣ ಪ್ರಮಾಣದ) ಎಂದು ಎಕರೆ ಬೆಳೆಗೆ 8-10 ಇಳುವರಿ ಬರುತ್ತದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ಟಿಎಸ್‍ಆರ್ ತಳಿ ತೊಗರಿ
ಟಿಎಸ್‍ಆರ್ ಕೆಂಪು ತೊಗರಿಯನ್ನು ರೈತರಿಗೆ ಮುಂಗಾರು ಆರಂಭದಲ್ಲಿ ಉಚಿತವಾಗಿ ರೈತರಿಗೆ ಶಾಸಕರ ಸಮ್ಮುಖದಲ್ಲಿ ಕೃಷಿ ಇಲಾಖೆ ಸಮಯಕ್ಕೆ ಸರಿಯಾಗಿ ಬೀಜ ವಿತರಣೆ ಮಾಡಿತ್ತು. ಈ ತಳಿಯ ತೊಗರಿಯು 155 ದಿನಗಳಲ್ಲಿ ಬೆಳೆ ಕಟಾವಿಗೆ ಬರುತ್ತದೆ.

ತಾಲ್ಲೂಕಿನಲ್ಲಿ ತೊಗರಿ ಬೆಳೆಯು ಸಮೃದ್ದವಾಗಿ ಬಂದಿದ್ದು, ನಾನು 24 ಎಕರೆಯಲ್ಲಿ ತೊಗರಿ ಬೆಳೆಯನ್ನು ಹಾಕಿದ್ದು ಬೆಳೆ ಕಾಯಿ ಕಟ್ಟುವ ಹಂತದಲ್ಲಿವೆ. ಕೃಷಿ ಇಲಾಖೆಯ ಅಧಿಕಾರಿಗಳು ಹೊಲಗಳಿಗೆ ಬಂದು ಬೆಳೆ ಪೋಷಣೆ ಬಗ್ಗೆ ಮಾಹಿತಿ ನೀಡುತ್ತಿರುವುದು ರೈತರಿಗೆ ಸಹಾಯಕಾರಿದೆ.
ಸುಧಾಕರ್ ತೋರಣಗಟ್ಟೆ ರೈತ

ತಾಲ್ಲೂಕಿನಲ್ಲಿ ಈ ಬಾರಿ 3400 ಹೇಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಸಮೃದ್ದವಾಗಿದ್ದು, ರೈತರಿಗೆ ಕಾಲ ಕಾಲಕ್ಕೆ ಬೆಳೆ ಪೋಷಣೆಯ ಕುರಿತು ಮಾಹಿತಿ ನೀಡಲಾಗುತ್ತಿದೆ.
ಶ್ರೀನಿವಾಸಲು ಸಹಾಯಕ ಕೃಷಿ ನಿರ್ದೇಶಕ ಜಗಳೂರುಶಾಸಕರ ಎಸ್.ವಿ.ರಾಮಚಂದ್ರ ಸಮ್ಮುಖದಲ್ಲಿ ತೋರಣಗಟ್ಟೆ ಗ್ರಾಮದ ರೈತರ ಹೊಲದಲ್ಲಿ ತೊಗರಿ ಬೆಳೆಯ ಕುಡಿ ಚಿವುಟುವ ಕಾರ್ಯದಲ್ಲಿ ಕೃಷಿ ಇಲಾಖೆ…

ವರದಿ. ಸಂದೀಪ್, ಎಚ್, ಜಗಳೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend