ಕರೋನವೈರಸ್ ಲಸಿಕೆ.ಅಭಿಯಾನ ಕಾರ್ಯಕ್ರಮ ಜರಗಿತು…!!”

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಹೋಬಳಿಯ ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಹಿ.ಮ. ನಾಗಯ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಜಿ. ಸುಜಾತ* ಇವರ ನೇತೃತ್ವದಲ್ಲಿ ಶಾಲೆಯ ಮಕ್ಕಳಿಂದ ಕರೋನವೈರಸ್ ಲಸಿಕೆ.ಅಭಿಯಾನ ಕಾರ್ಯಕ್ರಮ ಜರಗಿತು .ಮುಖ್ಯಗುರುಗಳಾದ ಬಿ ಸುಜಾತ ಅವರು ಮಾತನಾಡಿ ಕರೋನಾ ಮೂರನೇ ಅಲೆ ಹರಡುವುದನ್ನು ತಡೆಗಟ್ಟಲು ಕರೋನೋ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ, 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಂಡು ಲಸಿಕೆಯನ್ನು ಪಡೆಯಿರಿ ಎಂದು ಸಾರ್ವಜನಿಕರಿಗೂ ಕರೋನ ಹರಡುವುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಗ್ರಾಮದ ಬಸ್ ನಿಲ್ದಾಣದಲ್ಲಿ ಶಾಲೆಯ ಮಕ್ಕಳು ಮಾನವ ಸರಪಳಿಯನ್ನು ರಚಿಸಿ ಪ್ರತಿಯೊಬ್ಬ ನಾಗರಿಕರು 18 ವರ್ಷ ಮೇಲ್ಪಟ್ಟವರು ಚುಚ್ಚುಮದ್ದನ್ನು ಹಾಕಿಸಿಕೊಳ್ಳದೇ ಇರುವವರು. ತಪ್ಪದೇ ಉಚಿತವಾಗಿ ನೀಡುತ್ತಿರುವ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸಿದರು. ಈ ಅಭಿಯಾನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ಆದ ಹರೀಶ ಮತ್ತು ಸುಪ್ರಿಯ, ಶಿಕ್ಷಕ ಸಿಬ್ಬಂದಿಗಳಾದ ಸಿದ್ದರಾಮೇಶ್ವರ,ಮಂಜುನಾಥ, ಶಿವಾನಂದಸ್ವಾಮಿ, ಅರುಣಕುಮಾರ, ಸಿದ್ದಲಿಂಗಸ್ವಾಮಿ.. ಶಿಕ್ಷಕಿಯಾದ ಜ್ಯೋತಿ. ಗ್ರಂಥಾಲಯ ಮೇಲ್ವಿಚಾರಕರಾದ ಡಿ ವೃಷಭೇಂದ್ರ ಪ್ಪ. ಎಸ್ಡಿಎಂಸಿ ಅಧ್ಯಕ್ಷರಾದ ಸಿದ್ದೇಶ್. ಎಸ್ಡಿಎಂಸಿ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು….

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend