*ವಿಶ್ವಕರ್ಮ ಜಯಂತಿ ಹಾಗೂ ಕೋವಿಡ್ 19 ರ ಜಾಗೃತಿ*
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಎಸ್ಟಿಡಿ ಟಿವಿ ಪ್ರೌಢಶಾಲೆಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಮತ್ತು ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಶಿಕ್ಷಕರ ಸಮೂಹದಲ್ಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಂತರಪಟ್ಟಣದಲ್ಲಿ ಕರೋನಾ ಲಸಿಕೆ ಅಭಿಯಾನ ಜಾಥಾ ಹಮ್ಮಿಕೊಳ್ಳಲಾಗಿತ್ತು, ಶಾಲಾ ವಿದ್ಯಾರ್ಥಿಗಳು ಬೀದಿಬೀದಿಗಳಲ್ಲಿ, ವಾರ್ಡ್ ಗಳಲ್ಲಿ, ಕರೋನವೈರಸ್ ಹರಡುವ ಕುರಿತು ಪ್ರಚಾರ ಮಾಡಿ ಪ್ರತಿ 18 ವರ್ಷ ಮೇಲ್ಪಟ್ಟ ಅವರೆಲ್ಲರೂ ಕರೋನವೈರಸ್ ಚುಚ್ಚುಮದ್ದನ್ನು ಉಚಿತವಾಗಿ ಹಾಕಲಾಗುತ್ತದೆ ಪ್ರತಿಯೊಬ್ಬರು ಈ ಸದುಪಯೋಗವನ್ನು ಪಡೆದುಕೊಂಡು ಪಕ್ಕದ ಮನೆಯವರಿಗೆ ಸ್ನೇಹಿತರಿಗೆ, ಲಸಿಕೆಯನ್ನು ಹಾಕಿಸಿಕೊಳ್ಳದೇ ಇರುವವರಿಗೆ ಲಸಿಕೆ ಹಾಕಿಸಿ ಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಿ,ಜಾಗ್ರುತಿ ಮೂಡಿಸಿದರು….

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
