ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಮಂಡಲದ ಸೇವಾ ಮತ್ತು ಸಮರ್ಪಣಾ ಅಭಿಯಾನದ ಕೊಂಡ್ಲಹಳ್ಳಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವಂತ ಕೊಂಡ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನವಭಾರತ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಹಾಕಿದ. ಅಖಂಡ ಭಾರತದ ಹೆಮ್ಮೆಯ ಪ್ರಧಾನಿ ಜನಮೆಚ್ಚಿದ ಧೀಮಂತ ನಾಯಕ ಭಾರತ ಕಂಡ ಅಪ್ರತಿಮ ಪ್ರಜಾ ಸೇವಕ ಜನಮನದಲ್ಲಿ ನೆಲೆಸಿರುವ ಜಾಗತಿಕ ನಾಯಕ ಸಮಾಜದ ಪ್ರತಿಯೊಬ್ಬನು ಸುಖ-ಸಂತೋಷ ಸಮೃದ್ಧಿಯಿಂದ ಇರಲಿ ಎಂದು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಸಹ್ರದಯ ನಮ್ಮ ನೆಚ್ಚಿನ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ 71 ನೇ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮವನ್ನು ಮಾಡಲಾಯಿತು. ಮತ್ತು ಬೃಹತ್ ಕೋವಿಡ್ 19 ಲಸಿಕಾ ಮಹಾಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಎನ್.ಪಿ .ಪ್ರಭಾಕರ್, ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷರಾದ ಕೆ.ಟಿ. ಶ್ರೀರಾಮರೆಡ್ಡಿ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಸಿದ್ದಾರ್ಥ್ ಕೊಂಡ್ಲಹಳ್ಳಿ ಶಕ್ತಿ ಕೇಂದ್ರದ ಪ್ರಮುಖರಾದ ಪ್ರದೀಪ್ ಮತ್ತು ಮಂಡಲದ ಕಾರ್ಯದರ್ಶಿ ಕೃಷ್ಣಮೂರ್ತಿ ಮಂಡಲದ ಕಾರ್ಯಕಾರಣಿ ಸದಸ್ಯರಾದ ಉಗ್ಗಿ ಮಂಜಣ್ಣ ಸದಾಶಿವಣ್ಣ ಲೋಕೆಶ್, ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
