;

ಸಿಂಧನೂರು : ಬೂತಮಟ್ಟದ ಸಮಿತಿ ರಚನೆ , ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ…!!!

ಸಿಂಧನೂರು : ಬೂತಮಟ್ಟದ ಸಮಿತಿ ರಚನೆ , ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ.

ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಸಭೆಯನ್ನು ಕರೆಯಲಾಗಿತ್ತು .
ಈ ಸಭೆಯ ಅಧ್ಯಕ್ಷತೆಯನ್ನು ಹುಲುಗಪ್ಪ ಮಲ್ಕಾಪುರ ಸಿಂಧನೂರು ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷರು ವಹಿಸಿದ್ದರು

ಮುಖ್ಯ ಅತಿಥಿಗಳಾಗಿ ಸಜ್ಜಾದ್ ಸಾಬ್,ನಗರ ಘಟಕದ ಅಧ್ಯಕ್ಷರಾದ ಚನ್ನಪ್ಪ ಅಮೀನಗಡ ವಹಿಸಿದ್ದರು.

ಈ ಸಭೆಯಲ್ಲಿ ಸಾಲಗುಂದಾ ಕ್ಷೇತ್ರದ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ ಮತ್ತು ಬೂತ್ ಮಟ್ಟದ ಸಮಿತಿ ರಚನೆ ಮಾಡಲಾಯಿತು.
ಸಿಂಧನೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ಮೇಲುಸ್ತುವಾರಿಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಾದ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಸಹ ಮಾಡಲಾಯಿತು.

ನಂತರ ಮಾತನಾಡಿ ಎಲ್ಲಾ ಹಳ್ಳಿಗಳ ಸಂಖ್ಯೆ ,ಬೂತಗಳ ಸಂಖ್ಯೆ ಹಾಗೂ ಏಜೆಂಟರನ್ನು ಸಹ ನೇಮಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲಾ ಮುಖಂಡರು ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು,
ಮುಂದಿನ ದಿನಮಾನದಲ್ಲಿ ಸಹ ಪಕ್ಷದ ಕಚೇರಿಯನ್ನು ತಾಲೂಕು ಮಟ್ಟದಲ್ಲಿ ತೆರೆಯಲು ನಮ್ಮ ಹಿರಿಯ ಮುಖಂಡರ ಸಲಹೆ ಕೊಟ್ಟರು .ಅವರ ಸಲಹೆಯನ್ನು
ಮುಂದಿನ ದಿನಮಾನದಲ್ಲಿ ಪಕ್ಷದ ಶಾಲು ಮತ್ತು ಅಭ್ಯರ್ಥಿಗಳ ಚುನಾವಣೆಯ ಹೇಗಿರಬೇಕೆಂಬುದರ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ಹುಲುಗಪ್ಪ ಮಲ್ಕಾಪೂರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೀಸಲಾತಿ ಕ್ಷೇತ್ರದ ತಾಲೂಕು ಪಂಚಾಯಿತಿಯ ಅಧ್ಯಕ್ಷರನ್ನಾಗಿ ಹನುಮಂತ ಬೂದಿವಾಳ ಕ್ಯಾಂಪ್, ಉಪಾಧ್ಯಕ್ಷರನ್ನಾಗಿ ದೊಡ್ಡಬಸವ ಬೂದಿವಾಳ, ಕಾರ್ಯದರ್ಶಿಯನ್ನಾಗಿ ಬಸವರಾಜ ಮಾಡಶಿರವಾರನ್ನು ನೇಮಿಸಲಾಯಿತು.

ಈ ಸಂದರ್ಭದಲ್ಲಿ bvf ತಾಲೂಕು ಪದಾಧಿಕಾರಿಯಾಗಿ ರವಿಚಂದ್ರ ಮಲ್ಕಾಪುರ ಇಮಾಂಸಾಬ್ ಸಾಲಗುಂದಾ ಇನ್ನಿತರರು ಹಾಜರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;