ಕಲ್ಬುರ್ಗಿ ಮೇಯರ್ ಆಯ್ಕೆ ದಿನಾಂಕ ಪ್ರಕಟ ಮಾಡಲು ಸರ್ಕಾರ ಹಿಂದೇಟು ಹಾಕಲು ಜೆಡಿಎಸ್ ಕಾರಣವಾಗಿದೆ. ಇತ್ತ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ಧಾರೆ.
ಬೆಂಗಳೂರು: ಕಲ್ಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿ 5 ದಿನಗಳಾದರೂ ಮೇಯರ್ (Kalburgi City Corporation Mayor Election) ಆಯ್ಕೆಗೆ ಮಾತ್ರ ಸರ್ಕಾರ ಇನ್ನೂ ದಿನಾಂಕವನ್ನೇ ಪ್ರಕಟ ಮಾಡಿಲ್ಲ. ಇದೀಗ ಸರ್ಕಾರ ಈ ರೀತಿಯ ವಿಳಂಬ ಧೋರಣೆ ಮಾಡ್ತಿರೋದು ಜೆಡಿಎಸ್ನ ನಿಲುವಿನಿಂದ ಎಂದು ಹೇಳಲಾಗ್ತಿದೆ. ಹೊಂದಾಣಿಕೆ ಬಗ್ಗೆ ಜೆಡಿಎಸ್ ವರಿಷ್ಠರು ಬಿಜೆಪಿಗೆ ಇನ್ನೂ ಸ್ಪಷ್ಟ ಸಂದೇಶ ಕೊಡದೇ ಇರೋದ್ರಿಂದ ಮೇಯರ್ ಆಯ್ಕೆ ದಿನಾಂಕವನ್ನು ಸರ್ಕಾರ ಹೊರಡಿಸಿಲ್ಲ. ಈಗಾಗಲೇ ಬಿಜೆಪಿ ಜೆಡಿಎಸ್ನ ಸಪೋರ್ಟ್ ಕೇಳಿದೆ. ಆದರೆ ಜೆಡಿಎಸ್ ಮಾತ್ರ ಮೇಯರ್ ಸ್ಥಾನವನ್ನು ಕೇಳಲು ನಿರ್ಧರಿಸಿದ್ದು, ಇದೀಗ ಮೇಯರ್ ಸ್ಥಾನವನ್ನು ಬಿಟ್ಟು ಕೊಡುವ ಸಂಬಂಧ ಚರ್ಚೆ ಮಾತುಕತೆ ಹಂತದಲ್ಲಿ ಇದೆ. ಯಾವುದೇ ರೀತಿಯ ಸ್ಪಷ್ಟ ನಿಲುವನ್ನು ಜೆಡಿಎಸ್ ಪ್ರಕಟ ಮಾಡದೆ ಇರೋದ್ರಿಂದ ಬಿಜೆಪಿ ದಿನಾಂಕ ಪ್ರಕಟ ಮಾಡಿಲ್ಲ. ಜೆಡಿಎಸ್ನಿಂದ ಸ್ಪಷ್ಟ ಸಂದೇಶ ಬಂದ ನಂತರ ಕಲ್ಬುರ್ಗಿ ಮೇಯರ್ ಆಯ್ಕೆಗೆ ದಿನಾಂಕವನ್ನು ಪ್ರಕಟ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಸಿಟ್ಟು: ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅತಂತ್ರ ಫಲಿತಾಂಶಕ್ಕೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಮೇಲೆ ಸಿಟ್ಟಾಗಿದೆ. ಕಲ್ಬುರ್ಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಖರ್ಗೆಗೆ ಮತ್ತೊಮ್ಮೆ ಮುಖಭಂಗ ಉಂಟು ಮಾಡಲು ಪಾಲಿಕೆಯಲ್ಲಿ ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿತ್ತು. ಆದರೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದೇ ಇರೋದ್ರಿಂದ ರಾಜ್ಯ ನಾಯಕರ ಮೇಲೆ ಹೈಕಮಾಂಡ್ ಗರಂ ಆಗಿದೆ. ಹೀಗಾಗಿ ಹೈಕಮಾಂಡ್ನ ಕೋಪವನ್ನು ತಣ್ಣಗೆ ಮಾಡಲು ರಾಜ್ಯ ನಾಯಕರು ಮುಂದಾಗಿದ್ದು, ಪಕ್ಷಕ್ಕೆ ಆಗಿರುವ ಹಿನ್ನಡೆ ಬಿಟ್ಟು, ಪಾಲಿಕೆಯಲ್ಲಾದರೂ ಪಕ್ಷವನ್ನು ಅಧಿಕಾರಕ್ಕೆ ತಂದು ಚುನಾವಣೆಯಲ್ಲಿ ಆಗಿರುವ ಹಿನ್ನಡೆಗೆ ಪ್ಯಾಚಪ್ ಮಾಡಲು ಹೊರಟಿದ್ದಾರೆ. ಅದಕ್ಕಾಗಿಯೇ ಫಲಿತಾಂಶ ಬಂದ ಕೂಡಲೇ ಸಿಎಂ ಬಸವರಾಜ್ ಬೊಮ್ಮಾಯಿಯೇ ಖುದ್ದು ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿದ್ದು, ತಮಗೆ ಬೆಂಬಲ ಕೊಡುವಂತೆ ಕೇಳಿಕೊಂಡಿದ್ಸಾರೆ. ಇದರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಹಾಗೂ ಸ್ಥಳೀಯ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ರಾಜಕುಮಾರ್ ಪಾಟೀಲ್ ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ಬಹಳ ಕಸರತ್ತು ಮಾಡ್ತಿದ್ದಾರೆ…

ವರದಿ.ಬಸವರಾಜ್, ಹಿರೇಮಠ್, ಕಲಬುರಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
