ಕೋವಿಡ್ ನಿಯಮ ಕಡ್ಡಾಯ. ವಿಘ್ನವಾಗದಂತೆ ಗಣೇಶೋತ್ಸವ ಆಚರಿಸಲು ಕರೆ. ಕೂಡ್ಲಿಗಿ: ಕೊರೋನಾ ಮಹಾಮಾರಿ ಹಿನ್ನೆಲೆಯಿಂದ ಸರ್ಕಾರಿ ಆದೇಶದಂತೆ ಕೋವಿಡ್ ನಿಯಮ ಪಾಲಿಸಿ ಯಾವುದೇ ವಿಘ್ನವಾಗದಂತೆ ಅಹಿತಕರ ಘಟನೆ ಸಂಭವಿಸದಂತೆ ಕೆಲವು ನಿಭಂದನೆಗಳನ್ವಯ ಪಾರಂಪರಿಕ ಗಣೇಶೋತ್ಸವ ಆಚರಿಸುವಂತೆ ಕೂಡ್ಲಿಗಿ ತಹಸೀಲ್ದಾರ್ ಟಿ. ಜಗದೀಶ್ ಗಣೇಶ ಪ್ರತಿಷ್ಠಾಪನಾ ಆಯೋಜಕರಿಗೆ ಕಿವಿ ಮಾತು ಹೇಳಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆವತಿಯಿಂದ ಆಯೋಜಿಸಿದ ಗಣೇಶೋತ್ಸವ ಶಾಂತಿಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತ ಕೊರೋನಾ ಮೂರನೇ ಅಲೆ ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯನ್ನಿಟ್ಟುಕೊಂಡು ಸರ್ಕಾರವು ಕೋವಿಡ್ ನಿಯಮ ಬಳಸಿ ಆದೇಶಿಸಿದಂತೆ ಗಣೇಶೋತ್ಸವ ಆಯೋಜಕರು ಸರ್ಕಾರದ ನಿಭಂದನೆಯಂತೆ ಗಣೇಶ ಪ್ರತಿಷ್ಠಾಪಿಸಿ ಯಾವುದೇ ವಿಘ್ನ ಬರದಂತೆ ನೋಡಿಕೊಳ್ಳುವಂತೆ ತಹಸೀಲ್ದಾರ್ ತಿಳಿಸಿದರು. ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಮಾತನಾಡಿ ಸರ್ಕಾರವು ಪಾರಂಪರಿಕ ಗಣೇಶೋತ್ಸವ ಆಚರಣೆಯನ್ನು ಸರಳವಾಗಿ ಆಚರಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿ ನೀಡಿದ್ದು ಅದೇ ನಿಯಮ ಪಾಲಿಸಿಕೊಳ್ಳಬೇಕು ಗಣೇಶ ಪ್ರತಿಷ್ಠಾಪನೆ ಮಾಡುವ ಆಯೋಜಕರು ಬಳಸಿಕೊಳ್ಳಬೇಕಾದ ನಿಯಮವೆಂದರೆ ದೇವಸ್ಥಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 4ಅಡಿ ಹಾಗೂ ತಮ್ಮ ತಮ್ಮ ಮನೆಗಳಲ್ಲಿ 2ಅಡಿ ಗಣೇಶ ಮೂರ್ತಿ ಆದರಲ್ಲಿ ಮುಖ್ಯವಾಗಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ನಗರ ಪ್ರದೇಶದಲ್ಲಿ ವಾರ್ಡಿಗೊಂದರಂತೆ ಗ್ರಾಮೀಣ ಪ್ರದೇಶದಲ್ಲಿ ಊರಿಗೊಂದರಂತೆ ಗಣೇಶ ಪ್ರತಿಷ್ಠಾಪಿಸಬೇಕು ಗಣೇಶ ಕೂಡಿಸಲು 3ಅಥವಾ 5ದಿನಗಳು ಮಾತ್ರ ಅವಕಾಶ ಸೀಮಿತವಾಗಿದೆ ಎಂದರು. ಗಣೇಶ ಪ್ರತಿಷ್ಠಾಪನೆ ಆಯೋಜಕರಿಗೆ ಕೋವಿಡ್ ಟೆಸ್ಟ್ ಮತ್ತು ಲಸಿಕೆ ಕಡ್ಡಾಯವಾಗಿದ್ದು ನೆಗೆಟಿವ್ ವರದಿ ಬಂದರೆ ಮಾತ್ರ ಅವಕಾಶ,, ಪಾರಂಪರಿಕ ಗಣೇಶೋತ್ಸವಕ್ಕೆ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು. ಸಾರ್ವಜನಿಕ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪನೆ ಮಾಡಬೇಕು…..

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
