ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ಯಾಲ್ಲಿ ಪೊಲೀಸ್ ಠಾಣೆ ದಿನಾ0ಕ್ 7/9/21 ರಂದು ಶಾಂತಿ ಸಭೆ ನಡೆಸಲಾಯಿತು. ಈ ಬಾರಿ ಸಾರ್ವಜನಿಕ ಗಣೇಶ ಉತ್ಸವವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೋವಿಂದ್ ನಿಯಮಾವಳಿಗಳಿಗನು ಸಾರವಾಗಿ ಆಚರಿಸಲು ಅನುಮತಿ ನೀಡಲಾಗಿದ್ದು ಸಂಘ-ಸಂಸ್ಥೆಯವರು ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ದಿನಕ್ಕೆ ಕನಿಷ್ಠ ಐವತ್ತು ಜನಕ್ಕೆ ಕೋವಿಂದ್ ಲಸಿಕೆ ಹಾಕಿಸಬೇಕು ಎಂದು. ಡಿವೈಎಸ್ಪಿ. ವಿಶ್ವನಾಥ್ ರಾವ್ ಕುಲಕರ್ಣಿ
ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ. ಶ್ರೀ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂಘಸಂಸ್ಥೆಗಳು ಕಡ್ಡಾಯವಾಗಿ ಪುರಸಭೆ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಆಡಳಿತ ಪೊಲೀಸ್ ಇಲಾಖೆಯ ಪೂರ್ವ ಅನುಮತಿಯನ್ನು ಪಡೆಯತಕ್ಕದ್ದು ಗಣೇಶಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಮತ್ತು ಮನೆಗಳಲ್ಲಿ 22 ಉತ್ತರ ಮೀರದಂತೆ ಪ್ರತಿಷ್ಠಾಪಿಸಬೇಕು ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸನಿಟೈಸೇಶನ್
ಹಾಗೂ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸನ್ನಿ ಟೈಸರ ಮತ್ತು ಧರ್ಮ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ವ್ಯವಸ್ಥೆಯನ್ನು ಕಲ್ಪಿಸಬೇಕು . ಗಣೇಶ ಪ್ರತಿಷ್ಠಾಪನೆ ಸ್ಥಳವನ್ನು ಕೇವಲ 20 ಜನಕ್ಕೆ ಸೀಮಿತವಾಗಿ ಆವರಣವನ್ನು ನಿರ್ಮಿಸಬೇಕು ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಂಘ-ಸಂಸ್ಥೆಯವರು ನೋಡಿಕೊಳ್ಳಬೇಕು ದರ್ಶನಕ್ಕೆ ಬರುವ ಭಕ್ತರಿಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗಣೇಶ ಪ್ರತಿಷ್ಠಾಪನೆ ಮಾಡಿದ ಸಂಘ-ಸಂಸ್ಥೆಯವರು ದಿನದ 24 ಗಂಟೆಯೂ. ಇಬ್ಬರು ಸ್ವಯಂಸೇವಕರು ಇರುವಂತೆ ನೋಡಿಕೊಳ್ಳುವುದರ ಜೊತೆಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಗಣೇಶ ಆಚರಣೆಯ ಆಯೋಜಿತ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ ಸಂಗೀತ ನೃತ್ಯ ಹಾಗೂ ಮುಖ್ಯವಾಗಿ ಡಿಜೆ ಮೂಲಕ ಯಾವುದೇ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ ಹಬ್ಬ ಹರಿದಿನಗಳ ಸಮಯದಲ್ಲಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮತ್ತು ಸಮಸ್ಯೆಗಳನ್ನು ಉಂಟಾಗಲು ಪೂರಕವಾಗಿರುವುದರಿಂದ ಶ್ರೀ ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಿಂದ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರದಂತೆ ನೋಡಿಕೊಳ್ಳಬೇಕು ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರವಿರುತ್ತದೆ ಎಂದರು ವಿಶ್ವ ಹಿಂದೂ ಪರಿಷತ್ ಸಂಚಾಲಕ ವಕೀಲ ಚಂದ್ರಶೇಖರ್ ಮಾತನಾಡಿ ನಾವು ಹಿಂದೂ ಮಹಾಗಣಪತಿ ಯನ್ನು ರಾಮನಗರದ ಪಾದಗಟ್ಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಸರ್ಕಾರದ ನಿಯಮಾವಳಿ ಅನುಸಾರವಾಗಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ ಇನ್ನೇನು ಸರ್ಕಾರ ಸಾರ್ವಜನಿಕ ಗಣಪತಿ ಮೆರವಣಿಗೆಗೆ ಅವಕಾಶ ಕಲ್ಪಿಸಿದರೆ ಚೆನ್ನಾಗಿರುತ್ತಿತ್ತು ಎಂದರು ಈ ಸಂದರ್ಭದಲ್ಲಿ ಸಿಪಿಟಿ ಮಂಜುನಾಥ್ ಪಿಎಸ್ಐ ಎಸ್ ಮಾರುತಿ. ಮುಖ್ಯ ಪೇದೆಗಳಾದ ಗೋವಿಂದಪ್ಪ ಬಸವನಗೌಡ ಸಂತೋಷ್ ಕೊಂಚೂರು.ವೀರೇಶ್. ಕಿರಣ್ ಪುರಸಭೆ.ಆರೋಗ್ಯ ಅಧಿಕಾರಿಗಳು . ನಾಗರತ್ನ ವಿಜಯಲಕ್ಷ್ಮಿ. ಜೆಸ್ಕಾಂ ಅಧಿಕಾರಿಗಳು ಸೇರಿದಂತೆ ನಗರದ ಹಲವು ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
