ಹಾವೇರಿ ಜಿಲ್ಲೆಯ ಅಗಡಿ ಗ್ರಾಮದಲ್ಲಿ ಯುವಕರ ಗುಂಪೊಂದು ಮಹಾನಾಯಕ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾನಾಯಕ್ ಬ್ಯಾನರ್ ಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಹಾಗೂ ಮಾದಿಗ ಮಹಾ ಸಭಾ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾದ ಹೊನ್ನೆಶ್ವರ ತಗಡಿನಮನಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ರಾದ ಅಕ್ಷತಾ ಕೆ ಸಿ. ನಗರ ಘಟಕದ ಅಧ್ಯಕ್ಷರಾದ ಪರಶುರಾಮ ಅಣ್ಣಾ. ಮಾದಿಗ ಮಹಾ ಸಭಾದ ಪದಾಧಿಕಾರಿಗಳು ಮತ್ತು ಡಿ ಎಸ್ ಎಸ್ ಕಾರ್ಯಕರ್ತರು ಹಾಜರಿದ್ದರು. ಘಟನೆಗೆ ಸಂಬಂಧಿಸಿದಂತೆ ಯಾರೇ ಆಗಿದ್ದರು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಮನವಿ ಕೊಟ್ಟ ಕೆಲವೇ ಗಂಟೆಗಳಲ್ಲಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಮೈ ಚಳಿ ಬಿಡಿಸಿದ ಪೊಲೀಸರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಮಾದಿಗ ಮಹಾ ಸಭಾ ಮತ್ತು ಪ್ರಗತಿಪರ ಸಂಘಟನೆಗಳ ಪರವಾಗಿ ಭೀಮ ವಂದನೆಗಳು. ಅಂಬೇಡ್ಕರ್ ಎಂದರೆ ಭಾರತ ಭಾರತ ಎಂದರೆ ಅಂಬೇಡ್ಕರ್, ಅವರಿಗೆ ಅವಮಾನ ಮಾಡುವ ಮೊದಲು ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ, ಪಟ್ಟ ಶ್ರಮ ಕುರಿತು ಯೋಚನೆ ಮಾಡಿ, ಅವರ ಕಠಿಣ ಪರಿಶ್ರಮ ಫಲವಾಗಿ ಈ ದೇಶ ಉತ್ಕೃಷ್ಟ ಸಂವಿಧಾನ ವನ್ನು ಕಂಡಿದೆ. ನಾವು ಉಣ್ಣುವ ಅನ್ನದ ಮೇಲೆ, ಕುಡಿಯುವ ನೀರಿನ ಮೇಲೆ, ಉಡುವ ಬಟ್ಟೆಯ ಮೇಲೆ, ಗೌರವದಿಂದ ವಾಸಿಸುವ ಮನೆಯ ಮೇಲೆ, ಆತ್ಮ ಗೌರವದ ಬದುಕಿನ ಮೇಲೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಇದೆ. ಅಂಬೇಡ್ಕರ್ ಅಂದು ಇಂದು ಮುಂದು ಎಂದೆಂದಿಗೂ ಮಹಾನಾಯಕ್. ವಿಶ್ವದ ಮೇರು ಪ್ರತಿಭೆ ನನ್ನಪ್ಪ. ನಿಮಗೆ ಅವರ ಬಗ್ಗೆ ಗೊಂದಲ, ಅನುಮಾನ ಇದ್ದರೆ ಒಮ್ಮೆ ಅವರ ಬದುಕು ಮತ್ತು ಬರಹ ಓದಿ, ಅವರು ಬರೆದ ಸಂವಿಧಾನ ಓದಿ. ಖಂಡಿತ ನಿಮಗೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅರ್ಥ ಆಗುತ್ತಾರೆ. ಜೈ
“ಜೈ ಭೀಮ ಜೈ ಸಂವಿಧಾನ”
ಅಕ್ಷತಾ ಕೆ ಸಿ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು KSMF, ಬೆಂಗಳೂರು. ಜಿಲ್ಲಾ ಅಧ್ಯಕ್ಷರು ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ಹಾವೇರಿ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
