ಮೊಳಕಾಲ್ಮೂರು: ಪ್ರಭುಚೌಹಾಣ್ ರವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು: ಡಿ.ಎಸ್.ಎಸ್ ಸಂಘಟನೆಯಿಂದ ಪ್ರತಿಭಟನೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು (ಸೆಪ್ಟೆಂಬರ್-8) ಪಶುಸಂಗೋಪನ ಸಚಿವ ಪ್ರಭುಚಹಾಣ್ ರವರು ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಲಿಕ್ಕೆ ಒಪ್ಪುವುದಿಲ್ಲ ಎಂದು ಅವೈಜ್ಞಾನಿಕ ಹೇಳಿಕೆ ನೀಡಿರುವುದು ಖಂಡನೀಯ ಒಬ್ಬ ಸಚಿವರಾಗಿ ಸದಾಶಿವ ಆಯೋಗ ವರದಿಯನ್ನು ತಿಳಿದುಕೊಳ್ಳದೇ ಈ ತರಹ ಹೇಳಿಕೆಯನ್ನು ನೀಡಿರುವುದು ಅಸಂಬದ್ಧ , ಕರ್ನಾಟಕ ದಲಿತ ಸಂಘರ್ಷ ಸಮಿತಿ ಧರಣಿ ತೀವ್ರವಾಗಿ ಖಂಡಿಸಿದೆ. ತಮ್ಮ ಸೋದರ ಸಮಾಜವಾದ ಲಂಬಾಣಿ, ಬೋವಿ, ಕೊರಚ, ಕೊರಮ, ಜನಕ್ಕೆ ಅನುಗುಣವಾಗಿ ಸದಾಶಿವ ಆಯೋಗ ಜಾರಿ ಮಾಡಲು ವರದಿ ನೀಡಿರುತ್ತದೆ. ಯಥಾವತ್ತಾಗಿ ಈ ವರದಿಯನ್ನು ಜಾರಿ ಮಾಡಬೇಕು. ನಮ್ಮ ಸಮಿತಿಯು ರಾಜ್ಯದಲ್ಲಿ ನೀವು ಹೋದ ಕಡೆಯೆಲ್ಲಾ ಕಪ್ಪು ಬಾವುಟ ಪ್ರದರ್ಶಿಸಿ ಘರಾವ್ ಮಾಡಲಾಗುತ್ತಿದೆ ಎಂದು ಉಪ ತಹಸೀಲ್ದಾರ್ ಏಳುಕೋಟೆ ಅವರ ಮುಖಾಂತರ ರಾಜಭವನ ರಾಜ್ಯಪಾಲರ ಮಾನ್ಯ ತವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸುವ ಮುಖಾಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರು ಕೊಂಡಾಪುರ ಪರಮೇಶ್ವರಪ್ಪ, ಡಿ.ಬಿ ಬಸವರಾಜ್ ರಾಂಪುರ, ಗುಂಡ್ಲೂರು ರಮೇಶ್, ನಾಗೇಂದ್ರಪ್ಪ ಕೋನಸಾಗರ, ವಿ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್ ವಕೀಲರು, ಸಿಪಿಐ ಮುಖಂಡರು ಜಾಫರ್, ಉಮೇಶ್, ರಮೇಶ್, ಹನುಮಂತಪ್ಪ, ನಾಗೇಂದ್ರಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend