ಕೋವಿಡ್ 19 ವ್ಯಾಕ್ಸಿನ್ ಲಸಿಕೆ ಹಾಕುವ ಕಾರ್ಯಕ್ರಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.
ಹೂಡೆಮ್ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೋವಿಡ್ 19 ಚುಚ್ಚುಮದ್ದನ್ನು ಹಾಕಿಸಿಕೊಳ್ಳುವ ಸಲುವಾಗಿ ಹೂಡೆಮ್ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕರೋ ನೋ ಲಸಿಕೆ ಕಾರ್ಯಕ್ರಮ ಜರಗಿತು
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕರಿಬಸಮ್ಮ ದುರುಗಪ್ಪಇವರು ವ್ಯಾಕ್ಸಿನ್ ಚುಚ್ಚುಮದ್ದನ್ನು ಹಾಕಿಸಿಕೊಂಡರು. ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಸಿಬ್ಬಂದಿ ಹಾಗೂ ಸಾರ್ವಜನಿಕರು ತಪ್ಪದೇ ಕರೋನೋ ವ್ಯಾಕ್ಸಿನ್ ಚುಚ್ಚುಮದ್ದನ್ನು ಹಾಕಿಸಿಕೊಳ್ಳಿ ಕರೋನೋ ಹರಡುವ ವರ ಸಂಖ್ಯೆ ಕಮ್ಮಿ ಆಗಿದೆ ಎಂದು ತಾತ್ಸಾರ ಮಾಡಬೇಡಿ.ಈಗ ಶಾಲೆ ಪ್ರಾರಂಭವಾಗಿದೆ ಪೋಷಕರು ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ಕೊರೋನಾ ನಿಯಮಗಳನ್ನು ಪಾಲಿಸಿ ವಂತೆ ಹೇಳಿ ಶಾಲೆಗೆ ಕಳಿಸಿ ಕೊಡಿರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸಮ್ಮ ದುರುಗಪ್ಪ ಇವರು ಈ ಸಂದರ್ಭದಲ್ಲಿ ಪೋಷಕರಿಗೆ ಹೇಳಿದರು . ಗ್ರಾಮ ಪಂಚಾಯತಿ ಸದಸ್ಯರು, ಸಾರ್ವಜನಿಕರು ವ್ಯಾಕ್ಸಿನ್ ಚುಚುಮದ್ದು ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿಕಾರಿ ಮಾರಪ್ಪನವರು, ಉಪಾಧ್ಯಕ್ಷರಾದ ರಾಘವೇಂದ್ರ, ಸೇರಿದಂತೆ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು. ಆರೋಗ್ಯ.ಇಲಾಖೆ ಸಿಬ್ಬಂದಿ. ಸಾರ್ವಜನಿಕರು ಉಪಸ್ಥಿತರಿದ್ದರು….

ವರದಿ. ವಿರೇಶ್, ಕೆ, ಎಸ್, ಹೊಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
