ಸಂಡೂರು: ನಲ್ಲ ಬಂಡೆ ಗ್ರಾಮದಲ್ಲಿ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ ಆಚರಣೆ.!

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲ ಬಂಡೆ ಗ್ರಾಮದಲ್ಲಿ (ಸೆಪ್ಟೆಂಬರ್-2) ಇಂದು ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟು ಹಬ್ಬವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಬಳಗದಿಂದ ಸರಳ ಸಾಂಕೇತಿಕವಾಗಿ ಹುಟ್ಟುಹಬ್ಬ ಆಚರಿಸಿದರು. ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಪ್ರಾಥಮಿಕ ಆರೋಗ್ಯ ಕೇಂದ್ರ ಚೋರನೂರು, ಗ್ರಾಮ ಪಂಚಾಯಿತಿ ಅಗ್ರಹಾರ, ನೆಲ ಬಂಡೆ ಗ್ರಾಮದಲ್ಲಿ ಯುವಕರು ರಕ್ತದಾನ ಮಾಡಿದರು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಮಾಸ್ಕ್, ಪುಸ್ತಕ, ಪೆನ್ನುಗಳು ವಿತರಣೆ ಗ್ರಾಮದೇವತೆಯ ಮಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಅಭಿಮಾನಿಗಳಿಂದ ಹಾಲಿನ ಅಭಿಷೇಕ, ಕೇಕ್ ಕತ್ತರಿಸಿ ಸರಳವಾಗಿ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎರ್ರಿಸ್ವಾಮಿ, ಓಬಳೇಶ್, ಪ್ರವೀಣ್, ಗಂಗಾಧರ, ನಾಗರಾಜ್, ಮಂಜು, ನವೀನ್, ಸಿದ್ದೇಶ್ ತಳವಾರ ಹಳ್ಳಿ, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳು, ಊರಿನ ಮುಖಂಡರುಗಳು, ಕಿಚ್ಚ ಸುದೀಪ್ ಅಭಿಮಾನಿ ಬಳಗದವರು ಉಪಸ್ಥಿತರು….

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend