;

ರಾಯಬಾಗ:-ಹಂದಿಗುಂದ ಗ್ರಾಮಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದವರಿಗಿಲ್ಲ ನಯ ಪೈಸೆ…!!!

ಬೆಳಗಾವಿ :-ರಾಯಬಾಗ ತಾಲೂಕು ಹಂದಿಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ನರೇಗಾದಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ವೇತನವನ್ನು ಮಾಡದೇ ಕೂಲಿ ಕಾರ್ಮಿಕರ ಸತಾಯಿಸುತ್ತಿದ್ದಾರೆ, ಕೂಲಿ ಕಾರ್ಮಿಕರು ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದಕ್ಕೆ ಅವರ ಉತ್ತರ ಅನುದಾನ ಬಿಡುಗಡೆ ಆಗಿಲ್ಲ ಆದ ಮೇಲೆ ನಿಮ್ಮ ಅಕೊಂಟಗೆ ಜಮಾ ಮಾಡುತೇವೆ.ಇದರ ಕುರಿತಾಗಿ ನಾವು ತಾಲೂಕು ಆಡಳಿತ ವಿಚಾರಿಸಲಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರ ಲಾಗಿನ್ ಆಗಿದೆ,ಆದರೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದ ಪಲಾನುಭವಿಗಳು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಅಲೆದಾಡುವ ಪರಸ್ಥಿತಿ ಉದ್ಭವವಾಗಿದೆ.
ನಮ್ಮ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ ಎಸ್ ಈಶ್ವರಪ್ಪರವರು ಚಿಕ್ಕೋಡಿ ಕಾರ್ಯಕ್ರಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರ ಬಳಸದೆ ಮಾನವ ಅಂದರೆ ಕೂಲಿಯಾಳುಗನನ್ನು ಬಳಸಿ ಕಾಮಗಾರಿ ಕೈಕೋಳಿ ಎಂದು ಖಡಕ್ ವಾರನಿಂಗ್ ಎಚ್ಚರಿಕೆ ಕೊಟ್ಟಿದಾರೆ.

ಆದರೆ ನೆರೇಗಾದಲ್ಲಿ ದುಡಿದ ಕೂಲಿ ಕಾರ್ಮಿಕರಿಗೆ ಪಂಡ್ ಬಂದಿಲ್ಲ ಅಂತ ಹೇಳುವುದು ಎಷ್ಟು ಸೂಕ್ತ,ಕೂಲಿ ಕಾರ್ಮಿಕರ ಸ್ಥಿತಿ ಕೊರೋನ ಸಂದ್ರಭದಲ್ಲಿ ದುಡಿದ ಕೈಗಳಿಗೆ ಸಂಬಳವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.ಇಂತಹ ಸಂದರ್ಭದಲ್ಲಿ ದುಡಿದ ಹಣವು ಸಹ ಕಾರ್ಮಿಕರ ಕೈ ಸೇರಲು ಇಷ್ಟು ಸರ್ಕಸ್ ಮಾಡಬೇಕು ಎನ್ನುವುದಾದರೆ ಸಾರ್ವಜನಿಕರ ತೆರಿಗೆ ಎಲ್ಲಿ ಹೋಗುತ್ತಿದೆಯೋ ಆ ದೇವರಿಗೆ ಗೊತ್ತು ಬಿಡಿ ಏನೂ ಮಾಡೋದು ಸಮಾಜದಲ್ಲಿ ಬಡವರಾಗಿ ಹುಟ್ಟುವುದೇ ತಪ್ಪು ಅನಿಸುತ್ತೆ, ಹಾಗೂ ಅವರ ಕಷ್ಟಗಳನ್ನು ಕೇಳೋರೋ ಯಾರು ಸ್ವಾಮಿ ಎನ್ನುತ್ತಾರೆ.ನೋಡೋಣಾ.

ಆದರೆ ನಮ್ಮ ಪ್ರಶ್ನೆ ಒಂದೇ ಮುಂದೆ ನೋಡಿ
ಸರ್ಕಾರಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಂಬಳ ಜಮಾ ಆಗುತ್ತದೆ…
ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳ ಸಂಬಳ ವಿಷಯದಲ್ಲಿ ಫಂಡ್ ಇಲ್ಲ ಅನ್ನುವ ಮಾತು ಏಷ್ಟು ಸರಿ…
ನಮ್ಮ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಸಚಿವರು ಈ ವಿಷಯದ ಬಗ್ಗೆ ಗಮನಹರಿಸಬೇಕು…
ಜೈ ಹೋ ಜನತಾ ವೇದಿಕೆ (ರಿ )ಕುಡಚಿ ಕ್ಷೆತ್ರ ಮತ್ತು ನಮ್ಮ ಎಚ್ಚರಿಕೆ ಕನ್ನಡ ಪತ್ರಿಕೆಯ ಆಗ್ರಹ.

ವರದಿ :-ಮಹಾಲಿಂಗ ಹ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;