ಅರಿವು -ಅನ್ನ -ಆಶ್ರಯ ಗಳ ತ್ರಿವೇಣಿ ಸಂಗಮ ಸುತ್ತೂರು ಶ್ರೀ ಶಿವರಾತ್ರಿ ಶ್ರೀಮಠ ಅರಿವು ಅನ್ನ ಆಶ್ರಯ ಗಳ ತ್ರಿವೇಣಿ ಸಂಗಮ ವಾಗಿ ಸಾಮಾಜಿಕ ಚಿಂತನೆ ಗೈವ ಹಾಗೂ ಶರಣ ಸಾಹಿತ್ಯವನ್ನು ಶರಣರ ತತ್ವ ಆದರ್ಶಗಳನ್ನು ಪ್ರಚಾರಕ್ಕಾಗಿ ಬಳಸದೆ ಜನಮಾನಸಕ್ಕೆ ತಲುಪಿಸುವ ಜಾತಿ-ಮತ- ಪಂಥವನ್ನು ಮೀರಿ ನಿಜ ಅನುಷ್ಠಾನಕ್ಕೆ ಯತ್ನಿಸುವರೆಂದರೆ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಎಂದು ಶರಣ ಸಾಹಿತ್ಯ ಪರಿಷತ್ತಿನ ಕೂಡ್ಲಿಗಿ ತಾಲೂಕಿನ ಅಧ್ಯಕ್ಷರಾದ ಎನ್ಎಂ ರವಿಕುಮಾರ್ ನುಡಿದರು.…
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ಪುಸ್ತಕ ಮನೆಯಲ್ಲಿ ಕೂಡ್ಲಿಗಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ವಿದ್ವಾನ್ ಸೋಮ ಚಂದ್ರಶೇಖರಯ್ಯ ಲೋ ಲಕ್ಷಮ್ಮ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ನಿರ್ಮಲ ಕರ್ನಾಟಕದ ಕನಸುಗಾರ ದಿವಂಗತ ಪ್ರೊ ಹೆಚ್ಎಂ ಮರುಳಸಿದ್ದಯ್ಯ ನವರು ಶರಣ ಸಾಹಿತ್ಯ ಪರಿಷತ್ತು ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಮತ್ತು ಸುತ್ತೂರು ಶ್ರೀಮಠದ ವಿದ್ಯಾರ್ಥಿಯಾಗಿದ್ದರೆ ಎಂದು ಅಕ್ಷರ ಫೌಂಡೇಶನ್ ವಲಯ ವ್ಯವಸ್ಥಾಪಕರಾದ ಹೆಚ್ ಬಿ ಕಣ್ಣಿ ನುಡಿದರು.
ದೊಡ್ಡ ಬಸಮ್ಮ ಮಹಿಳಾ ಸಮಾಜದ ಕಾರ್ಯದರ್ಶಿ ಕುಮಾರಿ ರತ್ನಮ್ಮ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ಯಾಮಸುಂದರ ಸಫಾರೆ. ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಪುಸ್ತಕ ಮನೆಯ ನಾಗರಾಜ್ ಗೌಡ ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆಎಸ್ ವೀರೇಶ್ ನಿರೂಪಿಸಿದರು. ಟಿ.ಎಸ್ ರಮೇಶ್ ಮಹಿಳಾ ಹೊಲಿಗೆ ತರಬೇತಿ ಕೇಂದ್ರದ ಮಹಿಳಾ ಸದಸ್ಯರು ಹಾಗೂ ಪುಸ್ತಕ ಮನೆಯ ಗೆಳೆಯ ಬಳಗ ಹಾಗೂ ಗ್ರಾಮದ ಹಿರಿಯರು ಸೇರಿ ಇತರರು ಉಪಸ್ಥಿತರಿದ್ದರು….

ವರದಿ. ಕೆ. ಎಸ್. ವಿರೇಶ್ ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
