;

ಹರಪನಹಳ್ಳಿ:-ಖಾಸಗಿ ಕಾಲೇಜುಗಳಿಂದ ಕಾಸಿಗಾಗಿ ಕಳ್ಳಾಟ…!!!

ವಿವಿ ಸಂಘದ ಹರಪನಹಳ್ಳಿ ಯಲ್ಲಿರುವ ಶೇಷಜಿ ಹಸ್ತಿಮಲ್ ಜೈನ ಪಿಯು ಕಾಲೇಜ್ ಮತ್ತು ಉಜ್ಜಿನಿ ಪಿ ಯು ಕಾಲೇಜುಗಳು ಪ್ರವೇಶಕ್ಕೆ ಅರ್ಜಿಗಳನ್ನು ನೀಡದೆ ತಮಗೆ ಬೇಕಾದವರಿಗೆ ಮಾತ್ರ ಪವೇಶದ ಅರ್ಜಿಗಳನ್ನು ನೀಡುತ್ತಾರೆ ಎಂದು ನಾನಾ ಹಳ್ಳಿಗಳಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಪ್ರವೇಶಕ್ಕೆ ಅರ್ಜಿಯನ್ನು ಕೇಳಿದರೆ ನಾಳೆ ಭಾ ಎಂದು ಜಾವಬು ನೀಡುತ್ತಾರೆ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮನ ಬಂದಂತ್ತೆ ಶಿಕ್ಷಣದ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಹಣವಿದ್ದರೆ ಮಾತ್ರ ವಿದ್ಯೆಯೆಂಬ ಮಾತಿನಂತೆ ಕೆಲವು ಖಾಸಗಿ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣವನ್ನು ವ್ಯಾಪರೀಕರಣಗೊಳಿಸಿರುವ ಸರ್ಕಾರ ಕಣ್ಣು ಮುಚ್ಕೊಂಡು ಕುಳಿತಿದೆ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕದೆ ಬಡ ಮಕ್ಕಳ ವಿದ್ಯಭ್ಯಾಸವನ್ನು ಕಸಿದು ಕೊಳ್ಳುತ್ತಿರುವ ಖಾಸಗಿ ಶಾಲಾ ಕಾಲೇಜುಗಳಿಗೆ ತಕ್ಕ ಪಾಠ ಕಲಿಸುವಲ್ಲಿ ವಿಫಲವಾಗಿದೆ ಹಾಗೂ ಸ್ಥಳೀಯ ಚುಯಿತಾ ಪ್ರತಿನಿಧಿಗಳು ಹಾಗೂ ಹಿರಿಯ ಶಿಕ್ಷಣ ಕ್ಷೇತ್ರದ ಅಧಿಕಾರಿಗಳು ಇತ್ತ ಗಮನ ಹರಿಸದೆ ನಮಗೆ ಸಂಬಂಧವಿಲ್ಲ ಎನ್ನುವರೀತಿಯಲ್ಲಿ ಕೂತಿದ್ದಾರೆ ಹಾಗೂ ಅಲವು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರಲ್ಲಿ ಕಮಿಷನ್ ಆಸೆಗೆ ಒಳಪಟ್ಟಿದ್ದಾರೆ ಎನ್ನುವ ಶಂಕೆ ಎಲ್ಲರನ್ನು ಕಾಡುತ್ತಿದೆ ಹಾಗೂ ಇವರ ವಿರುದ್ಧ ಸಂಬಂಧ ಇಲಾಖೆ ಕಿಡಿಕರುತ್ತಾ.

ಈ ಒಂದು ನಡೆಯನ್ನು ಕಂಡು ಹರಪನಹಳ್ಳಿ ತಾಲೂಕ ಏಕಲವ್ಯ ಸಂಘರ್ಷ ಸಮಿತಿಯ ವತಿಯಿಂದ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ತಾಲ್ಲೂಕು ಅಧ್ಯಕ್ಷ ರಾಯದುರ್ಗ ದ ಪ್ರಕಾಶ್, ಕಾರ್ಯದರ್ಶಿ ಶಿವರಾಜ್, ಉಪಾಧ್ಯಕ್ಷರು ಮಂಜುನಾಥಈ ಸಂದರ್ಭದಲ್ಲಿ ಮುಖಂಡರಾದ ಸಣ್ಣಹಾಲಪ್ಪ, ಆರ್. ಲೋಕೇಶ್, ಪುರಸಭೆ ಸದಸ್ಯರಾದ ಡಿ ರೊಕ್ಕಪ್ಪ, ದ್ಯಾಮಜ್ಜಿ. ಆನಂದ, ನೀಲಗುಂದ. ಮಹಾಂತೇಶ್, ವಾಗಿಶ್ ವಕೀಲರು, ಶಿವಾನಂದ, ಗಿಡ್ಡಳ್ಳಿ. ಅಜ್ಜಯ್ಯ ಶಿವರಾಜ್, ಮುಂತಾದವರು ಉಪಸ್ಥಿತರಿದ್ದರು….

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;