ರಾಯಭಾಗ ತಾಲ್ಲೂಕಿನ ಭಿರಡಿ ಗ್ರಾಮದ ಡಾ.ಬಿ ಆರ್ ಅಂಬೇಡ್ಕರ್ ನಗರದ ನಿವಾಸಯಾದ ಕುಮಾರಿ: ಲಕ್ಷೀ ಶಿವಚಂದ್ರ ಗಸ್ತೆ ಇವರು SSLC ಪರೀಕ್ಷೆಯಲ್ಲಿ ಶೇ 92.97% ಅಂಕಗಳನ್ನು ಪಡೆದಿರುತ್ತಾಳೆ. ಅದ್ದರಿಂದ ಗ್ರಾಮದ ಯುವ ಮುಖಂಡರಾದ ಕೃಷ್ಣಾ ಗಸ್ತೆ ಯವರು ವಿದ್ಯಾರ್ಥಿನಿಗೆ ಸನ್ಮಾನ್ ಮಾಡಿ,ವಿದ್ಯಾಥಿ೯ಗಳು ಮೊಬೈಲ್ ಗಳನ್ನೂ ಅವಶ್ಯಕತೆ ಇದ್ದಲ್ಲಿ ಮಾತ್ರ ಬಳಸಿ ಇತರೆ ದುಶ್ಚಟಗಳಿಂದ ದೂರ ಇರಬೇಕು ಮತ್ತು ಶಿಕ್ಷಣದ ಕಡೆಗೆ ಗಮನ ಹರಿಸಿ ತಮ್ಮ ಜೀವನದ ಗುರಿಯನ್ನು ಮುಟ್ಟಬೇಕು ,ಕ್ರೀಡೆ ಮತ್ತು ಸಾಂಸ್ಕೃತಿಕ ಕಾಯ೯ಕ್ರಮಗಳಲ್ಲಿ ಸಹ ಹೆಚ್ಚಿನ ಆಸಕ್ತಿವಹಿಸಬೇಕೆಂದು ಸಲಹೆ ಸೂಚನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ನಗರದ ಯುವ ಮುಖಂಡರಾದ ಮಹಾದೇವ ಇಟೇಕರಿ,ಸಿದ್ರಾಮ ಗಸ್ತೆ,ಕುಮಾರ ಕಾಂಬಳೆ,ಪ್ರವೀಣ ಕಾಂಬಳೆ, ಸಂತೋಷ ಘಾಟಗೆ,ಪುನೀತ ಶಿಂಧೆ,ಜಯಶ್ರಿ ಶಿಂಗಾಡೆ,ಚೇತನ ಗಸ್ತೆ,ಸಂತೋಷ ಕಾಂಬಳೆ,ಶಿವಚಂದ್ರ ಗಸ್ತೆ ಇತರರು ಉಪಸ್ಥಿತರಿದ್ದರು.

ವರದಿ :-ಮಹಾಲಿಂಗ ಹ ಗಗ್ಗರಿ
ಜಿಲ್ಲಾ ವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
